ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರಿ ಕರ್ಫ್ಯೂ ಜಾರಿಯಲ್ಲಿ ಪ್ರಮುಖ ಬದಲಾವಣೆ: ಮಾರ್ಗಸೂಚಿಯಲ್ಲಿ ಏನಿದೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಕರ್ನಾಟಕದಾದ್ಯಂತ ಬುಧವಾರ ರಾತ್ರಿ 10 ಗಂಟೆಯಿಂದಲೇ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, ಈ ನಿರ್ಧಾರದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ರಾತ್ರಿ ನಿಷೇಧಾಜ್ಞೆ ಜಾರಿಯ ದಿನಾಂಕವನ್ನು ಒಂದು ದಿನದ ಮಟ್ಟಿಗೆ ಮುಂದೂಡಿರುವ ರಾಜ್ಯ ಸರ್ಕಾರ, ಕರ್ಫ್ಯೂ ಅಂತ್ಯಗೊಳ್ಳುವ ದಿನವನ್ನು ಒಂದು ದಿನ ಹಿಂದಕ್ಕೆ ಹಾಕಿದೆ. ಅಲ್ಲದೆ ನಿಷೇಧಾಜ್ಞೆ ಜಾರಿಯಾಗುವ ಸಮಯದಲ್ಲಿಯೂ ಬದಲಾವಣೆ ಮಾಡಿದೆ.

Recommended Video

Night Curfew ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ | Oneindia Kannada

ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಅಂದರೆ ರಾತ್ರಿ ಕರ್ಫ್ಯೂ ಜನವರಿ 2ರ ಬೆಳಿಗ್ಗೆ 5 ಗಂಟೆ ಬಳಿಕ ಇರುವುದಿಲ್ಲ.

ಇಂದಿನಿಂದಲೇ ಜಾರಿಯಾಗುವಂತೆ ರಾತ್ರಿ ಕರ್ಫ್ಯೂ ಜಾರಿಗೆ ತರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ತಮ್ಮ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲು ಅಡ್ಡಿಪಡಿಸಲಾಗಿದೆ. ಇದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರು. ಹೀಗಾಗಿ ಗುರುವಾರದಿಂದ ಕರ್ಫ್ಯೂ ಜಾರಿಯಾದರೂ ಕ್ರಿಸ್ ಹಬ್ಬದ ಧಾರ್ಮಿಕ ಆಚರಣೆಗಳನ್ನು ನಡೆಸಲು ಯಾವುದೇ ತಡೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾತ್ರಿ ಕರ್ಫ್ಯೂಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಮುಂದೆ ಓದಿ.

ಕ್ರಿಸ್‌ಮಸ್ ಆಚರಣೆಗೆ ನಿರ್ಬಂಧವಿಲ್ಲ

ಕ್ರಿಸ್‌ಮಸ್ ಆಚರಣೆಗೆ ನಿರ್ಬಂಧವಿಲ್ಲ

ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ದಿನಾಂಕ 24.12.2020 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು ಎಂದು ಸರ್ಕಾರ ಹೇಳಿದೆ.

ಸರಕು ಸಾಗಣೆ, ಪ್ರಯಾಣಿಕರ ವಾಹನಕ್ಕೆ ಅವಕಾಶ

ಸರಕು ಸಾಗಣೆ, ಪ್ರಯಾಣಿಕರ ವಾಹನಕ್ಕೆ ಅವಕಾಶ

ಟ್ಯಾಕ್ಸಿ, ಆಟೋಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅವಕಾಶವಿದೆ. ಬಸ್ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕೊಂಡೊಯ್ಯಬಹುದು. ಹಾಗೆಯೇ ಎಲ್ಲ ಬಗೆಯ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಖಾಲಿ ವಾಹನಗಳೂ ಸಂಚರಿಸಬಹುದಾಗಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಗುರುತಿನ ಚೀಟಿ ತೋರಿಸಬೇಕು

ಗುರುತಿನ ಚೀಟಿ ತೋರಿಸಬೇಕು

ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುವ ಕೈಗಾರಿಕೆಗಳಿಗೆ ರಾತ್ರಿ ಕರ್ಫ್ಯೂ ನಿರ್ಬಂಧ ಅನ್ವಯವಾಗುವುದಿಲ್ಲ. ಜತೆಗೆ ಶೇ 50ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯ ನಿರ್ವಹಣೆ ಮಾಡಲು ಕೈಗಾರಿಕೆಗಳು, ಕಂಪೆನಿ ಮತ್ತು ಸಂಸ್ಥೆಗಳಿಗೆ ಅವಕಾಶ ನೀಡಲಾಗುತ್ತದೆ. ಅಂತಹ ಕಂಪೆನಿಗಳ ಉದ್ಯೋಗಿಗಳು ರಾತ್ರಿ ಸಂಚರಿಸುವಾಗ ಕಂಪೆನಿಗಳು ನೀಡಿದ ಸೂಕ್ತ ಗುರುತಿನ ಚೀಟಿಯನ್ನು ತೋರಿಸಬೇಕಾಗಬಹುದು.

ರಾತ್ರಿ ಓಡಾಟಕ್ಕೆ ನಿರ್ಬಂಧ

ರಾತ್ರಿ ಓಡಾಟಕ್ಕೆ ನಿರ್ಬಂಧ

ದೂರದ ಊರುಗಳಿಗೆ ಸಾಗುವ ಬಸ್‌ಗಳು, ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಅವಕಾಶವಿದೆ. ಆದರೆ ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಅಗತ್ಯ ಸೇವೆಗಳ ಸಂಚಾರ ಹೊರತುಪಡಿಸಿ ಉಳಿದ ಎಲ್ಲ ಓಡಾಟಗಳಿಗೆ ನಿರ್ಬಂಧ ಇರಲಿದೆ.

English summary
Karnataka Night curfew : Timings, Guidelines, what is allowed and what is not? Here is the detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X