ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಸೋಮವಾರದ ತುಣುಕು ಸುದ್ದಿ

|
Google Oneindia Kannada News

ಬೆಂಗಳೂರು, ನ. 24 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 5 ಗಂಟೆ : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಅವಕಾಶ ನೀಡುವಂತೆ ಸಿಐಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ. ಶುಕ್ರವಾರದಿಂದ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ವಾದ ಪ್ರತಿವಾದ ನಡೆಯುತ್ತಿದೆ.

ಸಮಯ 4 ಗಂಟೆ : ಗಂಗಾ ಪೂಜೆಗೆ ಹೋಗಿದ್ದ ಅಜ್ಜಿ, ಮೊಮ್ಮಗ ನೀರು ಪಾಲಾದ ಘಟನೆ ಶಿರಾದಲ್ಲಿ ನಡೆದಿದೆ. ಪೂಜೆ ಮಾಡುವಾಗ ಬಾವಿಗೆ ಬಿದ್ದ ಅಜ್ಜಿಯನ್ನು ರಕ್ಷಿಸಲು ಹೋದ ಮೊಮ್ಮಗನೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸಮಯ 3 ಗಂಟೆ : ನ.30ರಂದು ಬೆಂಗಳೂರಿನಲ್ಲಿ ಕಿಸ್ ಆಫ್ ಲವ್, ಟೌನ್ ಹಾಲ್ ಬಳಿ 4 ಗಂಟೆಗೆ ನಡೆಯಲಿದೆ. ಆದರೆ, ಬೆಂಗಳೂರು ಪೊಲೀಸರು ಈ ಕಾರ್ಯಕ್ರಮಕ್ಕೆ ಇದುವರೆಗೂ ಅನುಮತಿ ನೀಡಿಲ್ಲ.

ಸಮಯ 2 ಗಂಟೆ : ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ವಾಸ್ತವ್ಯ ಹೂಡಿದ್ದ ಫರ್ವೀಜ್ ಖೋಖಾರ್ (71) ಎಂಬ ವಾಯುಪಡೆಯ ನಿವೃತ್ತ ಅಧಿಕಾರಿಯನ್ನು ಕೊಲೆ ಮಾಡಲಾಗಿದೆ. ಆನೇಕಲ್ ಬಳಿಯ ಉಸ್ಕೂರಿನ ಎಸ್ಟೇಟ್ ವಿಲ್ಲಾದಲ್ಲಿ ಖೋಖಾರ್ ವಾಸವಾಗಿದ್ದರು.

ಸಮಯ 1 ಗಂಟೆ : ಮೂರು ಸಾವಿರ ಮಠದ ಶ್ರೀ ರಾಜಯೋಗೇಂದ್ರ ಸ್ವಾಮಿಗಳಿಗೆ ಮಠದಲ್ಲಿ ಯಾರು ಕಿರುಕುಳ ನೀಡಿದ್ದರು ಎಂಬುದನ್ನು ಅವರು ಬಹಿರಂಗಪಡಿಸಬೇಕು ಎಂದು ಹಿರಿಯ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

Karnataka

ಸಮಯ 12 ಗಂಟೆ : ಬಹುನಿರೀಕ್ಷಿತ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕದ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 92 ನಿಗಮಗಳ ಅಧ್ಯಕ್ಷರ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ. [ಪಟ್ಟಿ ಇಲ್ಲಿದೆ]

ಸಮಯ 11 ಗಂಟೆ : ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ವಾಮೀಜಿ ಶ್ರೀ ರಾಜಯೋಗೇಂದ್ರ ಅವರು ಪೀಠ ತ್ಯಾಗ ಮಾಡಿ ಮೂಲ ಹಾನಗಲ್ ಮಠಕ್ಕೆ ತೆರಳಿದ್ದಾರೆ. ಮಠದ ಮುಂದೆ ಧರಣಿ ಮಾಡಬೇಡಿ ಎಂದು ಕರೆ ನೀಡಿರುವ ಸ್ವಾಮೀಜಿ, ಉತ್ತರಾಧಿಕಾರಿ ಆಯ್ಕೆ ಬಗ್ಗೆ ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಸಮಯ 10 ಗಂಟೆ : ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಹಾಜಿ ಸುರ್ವೆ ಎಂಬ 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ಪೆಸಿಟ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆ ಬಿಜಾಪುರದ ನಿವಾಸಿ ಎಂದು ತಿಳಿದುಬಂದಿದೆ.

ಸಮಯ 9 ಗಂಟೆ : ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ದುಷ್ಕರ್ಮಿಗಳಿಬ್ಬರು ಲಕ್ಷಮ್ಮ ಎಂಬುವವರ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ. ಇದರಿಂದ ಲಕ್ಷಮ್ಮ ಅವರ ಬಲಗೈ ಹಾಗೂ ಕಣ್ಣಿಗೆ ಗಾಯವಾಗಿದ್ದು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುರ್ಖಾಹಾಕಿಕೊಂಡು ಬಂದ ಇಬ್ಬರು ಇಂದು ಬೆಳಗ್ಗೆ ಈ ಕೃತ್ಯ ಎಸಗಿದ್ದಾರೆ.

ಸಮಯ 8 ಗಂಟೆ : 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆ.1ರಿಂದ ಮೂರುದಿನಗಳ ಕಾಲ ನಡೆಯುವ ಸಾಧ್ಯತೆ ಇದೆ. ಹಾಸನದ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಯಲಿದ್ದು, ಪೂರ್ವಭಾವಿ ಸಭೆ ದಿನಾಂಕ ನಿಗದಿ ಮಾಡಿ ಕಸಾಪ ಕೇಂದ್ರ ಸಮಿತಿಗೆ ಕಳುಹಿಸಿದೆ. ಕಸಾಪ ಅಂತಿಮ ಒಪ್ಪಿಗೆ ಬಳಿಕ ದಿನಾಂಕ ಪ್ರಕಟವಾಗಲಿದೆ.

ಸಮಯ 7.30 : ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕುಟುಂಬದ ನಡುವಿನ ನೆಂಟಸ್ಥಿಕೆಗೆ ಇಂದು ಅಧಿಕೃತ ಮುದ್ರೆ ಬೀಳಲಿದೆ. ದಾವಣಗೆರೆಯಲ್ಲಿ ಇಂದು ಸಂಜೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳ ಮತ್ತು ಜಗದೀಶ್ ಶೆಟ್ಟರ್ ಅವರ ಮಗ ಪ್ರಶಾಂತ್ ಶೆಟ್ಟರ್ ವಿವಾಹ ನಿಶ್ಚಿತಾರ್ಥ ನಡೆಯಲಿದೆ.

English summary
Karnataka top news in brief for the day : Minister for Horticulture Shamanur Shivashankarappa and leader of Opposition in Karnataka Assembly Jagadish Shettar coming closer by announcing engagement news of Anchana Shamanur and Prashanth Shettar. Engagement will be held on Monday in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X