ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮಂಗಳವಾರದ ತುಣುಕು ಸುದ್ದಿಗಳು

|
Google Oneindia Kannada News

ಬೆಂಗಳೂರು, ನ. 18 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 5 ಗಂಟೆ : ಮೂಢನಂಬಿಕೆಗಳ ನಿಷೇಧ ಕಾನೂನು ಜಾರಿ ಮತ್ತು ಸಾಮಾಜಿಕ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಮಠಾಧೀಶರನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಭೇಟಿಯಾಗಿದ್ದಾರೆ.

ಸಮಯ 2 ಗಂಟೆ : ರಾಜ್ಯದಲ್ಲಿ ನಾಲ್ಕು ಹೊಸ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೆಡಿಕಲ್ ಕಾಲೇಜು ಸೇರಿದಂತೆ ಎರಡು ಕಾಲೇಜುಗಳು ಕೋಲಾರ ಹಾಗೂ ಮಂಗಳೂರಿನಲ್ಲಿ ತಲಾ ಒಂದೊಂದು ಖಾಸಗಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ.

ಸಮಯ 1 ಗಂಟೆ : ಶಿವಗಂಗೆ ತಪ್ಪಲಿನಲ್ಲಿರುವ ಬಸವಾಪಟ್ಟಣ ಮತ್ತು ಸೀಗೆಪಾಳ್ಯದ ಗ್ರಾಮಗಳ ಮಧ್ಯೆ ಎರಡು ಮರಿ ಆನೆ ಸೇರಿ 11 ಆನೆಗಳು ಬೀಡುಬಿಟ್ಟಿದ್ದು, ಜನರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಮಯ 12 ಗಂಟೆ : ತುಮಕೂರಿನಲ್ಲಿ ಕರಡಿ ದಾಳಿಗೆ ಬಲಿಯಾದ ತಿಮ್ಮಣ್ಣ ಮತ್ತು ಸೋಮಣ್ಣ ಕುಟುಂಬಕ್ಕೆ ಅರಣ್ಯ ಇಲಾಖೆಯವರು ಎರಡು ಲಕ್ಷ ರೂ.ಗಳ ಪರಿಹಾರದ ಚೆಕ್ ನೀಡಿದ್ದಾರೆ. ಚೀಲನಹಳ್ಳಿ ಬಳಿ ಸೋಮವಾರ ಸೋಮಣ್ಣ ಮತ್ತು ತಿಮ್ಮಣ್ಣ ಮೇಲೆ ಕರಡಿ ದಾಳಿ ಮಾಡಿ ಕೊಂದು ಹಾಕಿತ್ತು.

ಸಮಯ 11 ಗಂಟೆ : ಪೊಲೀಸ್‌ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ಬಹಿರಂಗ ಪಡಿಸಿದ ಇಬ್ಬರು ಆರೋಪಿಗಳನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಕಾಶೀನಾಥ್‌ ಹಾಗೂ ಮಲ್ಲಣ್ಣ ಎಂದು ಗುರತಿಸಲಾಗಿದ್ದು, ಇಬ್ಬರು ಖಾಸಗಿ ಶಾಲೆಯ ಶಿಕ್ಷಕರಾಗಿದ್ದಾರೆ. ನ. 16 ರಂದು ರಾಜ್ಯದಾದ್ಯಂತ ಪೊಲೀಸ್‌ ನೇಮಕಾತಿ ಲಿಖಿತ ಪರೀಕ್ಷೆಯನ್ನು ನಡೆದಿತ್ತು.

ಸಮಯ 10 ಗಂಟೆ : ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರು ಮೂರು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಸದಾನಂದಗೌಡ ಅವರು ಉತ್ತರಹಳ್ಳಿ ಹೋಬಳಿಯ ನೆಟ್ಟಿಗೆರೆ, ವೀರಸಂದ್ರ, ಬೊಲಾರೆ ಗ್ರಾಮಗಳನ್ನು ದತ್ತು ಪಡೆಯಲಿದ್ದಾರೆ.

ಸಮಯ 9 ಗಂಟೆ : ಮೂಢನಂಬಿಕೆಗಳ ನಿಷೇಧ ಕಾನೂನು ಜಾರಿ ಮತ್ತು ಸಾಮಾಜಿಕ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ನೂರಾರು ಮಠಾಧೀಶರು, ಸಾಹಿತಿಗಳು ಮತ್ತು ಚಿಂತಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇಂದು ಎರಡನೇ ದಿನವಾಗಿದ್ದು ಬೆಳಗ್ಗೆ 10 ಗಂಟೆಗೆ ಉಪವಾಸ ಆರಂಭವಾಗಲಿದೆ.

Karnataka

ಸಮಯ 8 ಗಂಟೆ : ಕಲಬುರಗಿಯಲ್ಲಿ ನಡೆಯಲಿರುವ 2014 ನೇ ಸಾಲಿನ ಸಚಿವ ಸಂಪುಟದ ಸಭೆಯು ನವೆಂಬರ್ 27 ರ 12 ಗಂಟೆ ಬದಲಿಗೆ ನವೆಂಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

English summary
Karnataka top news in brief for the day : Several seers gather at the Freedom Park, Bengaluru to protest against superstitious beliefs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X