ಕರ್ನಾಟಕ : ಮಂಗಳವಾರದ ತುಣುಕು ಸುದ್ದಿಗಳು

ಬೆಂಗಳೂರು, ಡಿ. 2: ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.

ಸಮಯ 4 ಗಂಟೆ : ನಿಯಮ ಬಾಹಿರವಾಗಿ ಮದ್ಯ ಮರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಕ್ಲಬ್ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಮದ್ಯ ಮಾರಾಟ ಮಾಡುತ್ತಿರುವ ಕುರಿತು ಒಂದು ವಾರದ ಹಿಂದೆ ಕ್ಲಬ್‌ಗೆ ನೋಟಿಸ್ ಜಾರಿಗೊಳಿಸಲಾಗಿತ್ತು.

ಸಮಯ 3 ಗಂಟೆ : ರಾಜೀವ್ ಗಾಂಧಿ ವಿವಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರೊ.ಸಂತೋಷ್ ರೈ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಸಮಯ 2 ಗಂಟೆ : ತುಮಕೂರು ನಗರದಲ್ಲಿ ಸೋಮವಾರ ಪುಂಡಾಟಿಕೆ ನಡೆಸಿ ನಾಲ್ವರನ್ನು ಗಾಯಗೊಳಿಸಿದ್ದ ಗೂಳಿ ಮಂಗಳವಾರ ಸಾವನ್ನಪ್ಪಿದೆ. ತುಮಕೂರು ಮಹಾನಗರ ಪಾಲಿಕೆಯ ನೌಕರರು ಮತ್ತು ಸ್ಥಳೀಯರು ಹಿಡಿದು ಗೋಶಾಲೆಗೆ ರವಾನಿಸಿದ್ದರು.

ಸಮಯ 1 ಗಂಟೆ : ಬೆಳಗಾವಿ ಚಳಿಗಾಲದ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಮಯ 12 ಗಂಟೆ : ಬೆಂಗಳೂರಿನ ಯಲಹಂಕದಲ್ಲಿ 4ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಮೋನಿಶಾ.

ಸಮಯ 11 ಗಂಟೆ : ಯುವತಿಯೊಬ್ಬಳನ್ನು ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮಚಂದ್ರ ರೆಡ್ಡಿ ಎಂಬುವರಿಗೆ ಸೇರಿದ ತೋಟದಲ್ಲಿನ ಶೆಡ್ ಬಳಿಯ ಹಲಸಿನ ಮರದ ಕೆಳಗೆ ಇಂದು ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಸಮಯ 10 ಗಂಟೆ : ಕರ್ನಾಟಕದ ಇಬ್ಬರು ನಕ್ಸಲ್ ನಾಯಕರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ನೀಡಿದ್ದು, ಮಂಗಳವಾರ ಶರಣಾಗಬೇಕಿತ್ತು. ಆದರೆ, ಕಾನೂನು ತೊಡಕುಗಳ ಕಾರಣದಿಂದಾಗಿ, ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಎರಡು ದಿನಗಳ ನಂತರ ಪೊಲೀಸರಿಗೆ ಶರಣಾಗಲಿದ್ದಾರೆ.[ಶರಣಾಗಲಿದ್ದಾರೆ ಇಬ್ಬರು ನಕ್ಸಲರು]

ಸಮಯ 9 ಗಂಟೆ : ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಡಾ.ಕಸ್ತೂರಿರಂಗನ್‌ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ಕಸ್ತೂರಿ ರಂಗನ್‌ ವರದಿ ವಿರೋಧಿ ಹೋರಾಟ ಸಮಿತಿ ಮತ್ತು ಸರ್ವಪಕ್ಷಗಳು ಇಂದು ಕೊಡಗು ಬಂದ್‌ಗೆ ಕರೆ ನೀಡಿವೆ. [ಡಿ.2ರಂದು ಕೊಡಗು ಬಂದ್]

Karnataka

ಸಮಯ 8ಗಂಟೆ : ವೇತನ ಪರಿಷ್ಕರಣೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಡಿ.2ರ ಮಂಗಳವಾರ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಆದ್ದರಿಂದ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆ ಆಗಲಿದ್ದು, ಎಟಿಎಂಗಳು ಎಂದಿನಂತೆ ತೆರೆದಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+