Karnataka National Highway: 10 ವರ್ಷದಲ್ಲಿ ದೇಶಕ್ಕೆ 55,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸೇರ್ಪಡೆ; ಕರ್ನಾಟಕದ ಪಾಲೆಷ್ಟು?
Karnataka National Highway: ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಬಹುದೊಡ್ಡ ಕ್ರಾಂತಿಯೇ ಆಗುತ್ತಿದೆ. ಕಳೆದ 10 ವರ್ಷದಲ್ಲಿ ಭಾತರದಲ್ಲಿ NH ಜಾಲಕ್ಕೆ 55,000 ಕಿಲೋ ಮೀಟರ್‌ಗೂ ಅಧಿಕ ರಸ್ತೆ ಸೇರ್ಪಡೆ ಆಗಿದೆ. ಇದರಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದಲ್ಲಿ ಹಲವೆಡೆ ಈಗಾಗಲೇ ರಾಷ್ಟ್ರೀಯ ಹೆದ್ಧಾರಿಗಳು ಉದ್ಘಾಟನೆ ಆದ್ರೆ, ಇನ್ನೂ ಕೆಲವೆಡೆ ಲೋಕಾರ್ಪಣೆ ಹಂತದಲ್ಲಿವೆ. ಮತ್ತೊಂದೆಡೆ ಬಹುತೇಕ ಕಡೆಗಳಲ್ಲಿ ನಿರ್ಮಾಣ ಹಂತದಲ್ಲಿವೆ. ಅದರಲ್ಲೂ ಪ್ರಮುಖವಾಗಿ ನೋಡೋದಾದ್ರೆ, ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕಿಲೋ ಮೀಟರ್ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಯಾಗಿದೆ ಎನ್ನುವ ಪ್ರಶ್ನೆಗೆ ಸಂಪೂರ್ಣ ಉತ್ತರ ಇಲ್ಲಿದೆ.

ದೇಶದ ಅಭಿವೃದ್ಧಿಯ ವೇಗವನ್ನು ಅಳೆಯುವುದೇ ರಸ್ತೆಗಳಿಂದ. ದೇಶದಲ್ಲಿ ಹೆದ್ದಾರಿಗಳ ಕ್ರಾಂತಿಯೇ ಆಗುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಕಳೆದ ಒಂದು ದಶಕದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲಕ್ಕೆ ಒಂದಲ್ಲ.. ಎರಡರಲ್ಲ.. ಬರೋಬ್ಬರಿ 55,000 ಕಿಲೋ ಮೀಟರ್ ರಸ್ತೆ ಸೇರ್ಪಡೆ ಆಗಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಚ್ಚಿಟ್ಟಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೇಶದ ರಸ್ತೆ ಜಾಲವನ್ನು ಹೆಚ್ಚಳ ಮಾಡುತ್ತಲೇ ಇದೆ. ದೇಶದಲ್ಲಿ ಸದ್ಯ 63,00,000 ಕಿಲೋ ಮೀಟರ್ ರಸ್ತೆ ಜಾಲವಿದೆ. ಈ ನಡುವೆಯೇ ಇದೀಗ ಅತೀ ಹೆಚ್ಚು ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ರಾಜ್ಯಗಳ ಪಟ್ಟಿ ಸಹ ಹೊರಬಿದದಿದೆ.
ಅತೀ ಹೆಚ್ಚು ಹೆದ್ದಾರಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕದ ಪಕ್ಕದ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಲೋಕಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ 2014ರ ಮಾರ್ಚ್‌ನಲ್ಲಿ 91,287 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಜಾಲ ದೇಶದಲಿತ್ತು.
ಇಂದು ಅದು 1,46,342 ಕಿ.ಮೀ.ವರೆಗೂ ವಿಸ್ತರಣೆ. ಅಂದರೆ, ಕೇವಲ ಒಂದು ದಶಕದಲ್ಲಿ 55,000 ಕಿ.ಮೀಟರ್‌ಗೂ ಹೆಚ್ಚು ಹೊಸ ರಾಷ್ಟ್ರೀಯ ಹೆದ್ದಾರಿ ದೇಶಕ್ಕೆ ಸೇರ್ಪಡೆ ಆಗಿವೆ. ಈ ಬೆಳವಣಿಗೆ ದೇಶದ ಆರ್ಥಿಕತೆಗೆ ಹೊಸ ವೇಗ ನೀಡಿದೆ. ಇನ್ನು, 2014ರಲ್ಲಿ ಹೈಸ್ಪೀಡ್ ಕಾರಿಡಾರ್ ಅಥವಾ ಎಕ್ಸ್‌ಪ್ರೆಸ್‌ವೇಗಳು ಕೇವಲ 93 ಕಿಲೋ ಮೀಟರ್ ಇತ್ತು. ಆದರೆ, ಈಗ ಅದು 5,110 ಕಿಲೋ ಮೀಟರ್‌ಗೆ ವಿಸ್ತಣೆ ಆಗಿದೆ.
ಕಳೆದ 10 ವರ್ಷಗಳಲ್ಲಿ ಅಂದರೆ 2015-2025ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ಭಾರಿ ಹೂಡಿಕೆ ಆಗಿದೆ. ಹೀಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ಆಗುತ್ತಿದೆ.
ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ವಿವರ
* 2014ರ ಮಾರ್ಚ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ 91,287 ಕಿಲೋ ಮೀಟರ್
* 2025ರಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ 1,46,342 ಕಿಲೋ ಮೀಟರ್‌ಗೆ ವಿಸ್ತರಣೆ
* ಕಳೆದ 10 ವರ್ಷಗಳಲ್ಲಿ 55,000 ಕಿಲೋ ಮೀಟರ್ ಹೊಸ ಹೆದ್ದಾರಿ ಸೇರ್ಪಡೆ
ಕರ್ನಾಟಕದಲ್ಲಿ ಎಷ್ಟು ವಿಸ್ತರಣೆ ಹಾಗೂ ಎಲ್ಲೆಲ್ಲಿ?
* ರಾಷ್ಟ್ರೀಯ ಹೆದ್ದಾರಿ ಉದ್ದ: 2025ರ ವೇಳೆಗೆ 9,000 ಕಿಲೋ ಮೀಟರ್
* 2015-2025 ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಮುಖ ಹೆದ್ದಾರಿ ಯೋಜನೆಗಳು ಕೈಗೊಳ್ಳಲ್ಪಟ್ಟಿವೆ.
ಕರ್ನಾಟಕದಲ್ಲಿ ಪ್ರಮುಖ ಹೆದ್ದಾರಿ ಯೋಜನೆಗಳು
* ಹಾಸನ-ರಾಯಚೂರು 4-ಪಥದ ಹೆದ್ದಾರಿ
* ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ
* ಹುಬ್ಬಳ್ಳಿ-ಧಾರವಾಡ ಹೆದ್ದಾರಿ
* ಮೈಸೂರು-ಮಡಿಕೇರಿ ಹೆದ್ದಾರಿ
* ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ (ಮಂಗಳೂರು-ಬೆಂಗಳೂರು ಕಾರಿಡಾರ್)
* ಬೀದರ್-ಹುಮ್ನಾಬಾದ್ ಹೆದ್ದಾರಿ (NH-367)
* ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ
* ಸಿಗಂದೂರು ಚೌಡೇಶ್ವರಿ ಸೇತುವೆ
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಹೆಚ್ಚಿನ ಹೆದ್ದಾರಿ ಯೋಜನೆಗಳು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿಯೂ ನಡೆದಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು, ಕೊಡಗು, ಬೀದರ್, ಕಾಗಿಣಾ, ಕಲಬುರಗಿ, ಶಿರಾಡಿ ಘಾಟ್, ಸಿಗಂದೂರು, ರಾಯಚೂರು, ಹಾಸನ ಇನ್ನಿತರ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಆಗಿವೆ. ಇದರಿಂದ ಈ ಭಾಗಗಲ್ಲಿ ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮದ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ತುಂಬಾ ಪ್ತಯೋಜನೆಗಳಾಗಿವೆ.
ಕರ್ನಾಟಕದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಅವುಗಳ ಮಾರ್ಗಗಳು ರಾಜ್ಯದ ವಿವಿಧ ಭಾಗಗಳನ್ನು ಹಾಗೂ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತವೆ. ಹಾಗಾದ್ರೆ ಯಾವೆಲ್ಲಾ ಪ್ರಮುಖ ಹೆದ್ದಾರಿಗಳು ಯಾವೆಲ್ಲಾ ಯಾವೆಲ್ಲಾ ನಗರಗಳಿಗೆ ಸಂಪರ್ಕ ಕಲ್ಪಿಸಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಹೆದ್ದಾರಿಗಳು ಯಾವ ಮಾರ್ಗಗಳಲ್ಲಿ ಹಾದುಹೋಗಲಿವೆ?
* ಬೆಂಗಳೂರು-ಪುಣೆ (NH-4) ಮಾರ್ಗ: ಬೆಂಗಳೂರು, ತುಮಕೂರು, ಚಿತ್ತಾಪುರ, ಧಾರವಾಡ, ಹುಬ್ಬಳ್ಳಿ, ಮಹಾರಾಷ್ಟ್ರ
* ಬೆಂಗಳೂರು-ಮೈಸೂರು-ಮಡಿಕೇರಿ-ಮಂಗಳೂರು (NH-275/75): ಬೆಂಗಳೂರು, ಮೈಸೂರು, ಮಡಿಕೇರಿ, ಸುಳ್ಯ, ಮಂಗಳೂರು, ಪಶ್ಚಿಮ ಕರಾವಳಿ.
* ಹಾಸನ-ಮಂಗಳೂರು (ಶಿರಾಡಿ ಘಾಟ್, NH-75): ಬೆಂಗಳೂರು, ಕನಕಪುರ, ಚನ್ನರಾಯಪಟ್ಟಣ, ಹಾಸನ, ಶಿರಾಡಿ ಘಾಟ್, ಮಂಗಳೂರು
* ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್‌ವೇ (NH-48/44): ಬೆಂಗಳೂರು, ಹೋಸೂರು, ವೇಲೂರು, ಚೆನ್ನೈ
* ಹುಬ್ಬಳ್ಳಿ-ಧಾರವಾಡ-ಬಳ್ಳಾರಿ-ಹೈದರಾಬಾದ್ (NH-67/50): ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಗಣಿಗೇರಿ, ಹೈದರಾಬಾದ್
* ಬೆಂಗಳೂರು-ಶಿವಮೊಗ್ಗ-ಹೊನ್ನಾವರ (NH-206/69): ಬೆಂಗಳೂರು, ತುಮಕೂರು, ಶಿವಮೊಗ್ಗ, ಸಾಗರ, ಹೊನ್ನಾವರ, ಕಡಲತಡಿ.
* ಬೀದರ್-ಕಲಬುರಗಿ-ವಿಜಯಪುರ-ಬುಧಗುಂಟಾ (NH-50): ಉತ್ತರ ಕರ್ನಾಟಕದಿಂದ ಪಶ್ಚಿಮಕ್ಕೆ ವಿಜಯಪುರಕ್ಕೆ ಸಂಪರ್ಕ












Click it and Unblock the Notifications