ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ಗೆ ಸಿಗಲಿವೆ ಮತ್ತೆ ಮೂರು ಎಂಎಲ್‌ಸಿ ಸ್ಥಾನ- ಸವದಿ, ಚಿಂಚನಸೂರು ಜಾಗಕ್ಕೆ ಯಾರು ಬರಲಿದ್ದಾರೆ?

|
Google Oneindia Kannada News

ಬೆಂಗಳೂರು, ಜೂನ್‌ 08: ಜೂನ್ 30 ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲಾ ಮೂರು ವಿಧಾನ ಪರಿಷತ್ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದೆ. ನೂತನ ಪರಿಷತ್ ಸದಸ್ಯರನ್ನು ಶಾಸಕರು ಆಯ್ಕೆ ಮಾಡುತ್ತಾರೆ. ಮಂಗಳವಾರ ಭಾರತೀಯ ಚುನಾವಣಾ ಆಯೋಗವು ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ.

ತೆರವಾಗಿರುವ ಮೂರು ಎಂಎಲ್‌ಸಿಗಳ ಅವಧಿ ಬೇರೆ ಬೇರೆಯಾಗಿರುವುದರಿಂದ ಖಾಲಿ ಇರುವ ಪ್ರತಿ ಸ್ಥಾನಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಯಲಿದೆ. ಅದೇ ದಿನ ಒಂದೇ ಚುನಾವಣಾ ಅಧಿಸೂಚನೆಯೊಂದಿಗೆ ಚುನಾವಣೆ ನಡೆಯಲಿದೆ.

Karnataka MLC Election

ಉಭಯ ಸದನಗಳ ಸದಸ್ಯರಲ್ಲದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಬೋಸರಾಜು ಅವರು ಸ್ಪರ್ಧೆಸುವುದು ಖಚಿತವಾಗಿದೆ. ಮಾರ್ಚ್ 20, 2023 ರಂದು ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು ಕಾಂಗ್ರೆಸ್ ಆಯ್ಕೆ ಮರು ಆಯ್ಕೆ ಮಾಡುವ ಸಾಧ್ಯತೆ ಇದೆ. ಚಿಂಚನಸೂರ್ ಅವರ ಅಧಿಕಾರಾವಧಿಯು ಜೂನ್ 17, 2024ರಂದು ಕೊನೆಗೊಳ್ಳಲಿದೆ.

Cabinet Ministers: ಎಂಎಲ್ಎ, ಎಂಎಲ್‌ಸಿ ಏನೂ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ, ಯಾರಿವರು ತಿಳಿಯಿರಿCabinet Ministers: ಎಂಎಲ್ಎ, ಎಂಎಲ್‌ಸಿ ಏನೂ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ, ಯಾರಿವರು ತಿಳಿಯಿರಿ

ಆದರೆ, ಮೂರನೇ ಸ್ಥಾನವನ್ನು ಯಾರಿಗೆ ನೀಡಬೇಕೆಂಬುದು ಇನ್ನೂ ಖಚಿತವಾಗಿಲ್ಲ. ವಿಶೇಷವಾಗಿ ಜೂನ್ 13, 2028 ರ ವರೆಗೆ ಅಧಿಕಾರಾವಧಿಯನ್ನು ಹೊಂದಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ತೆರವಾದ ಸ್ಥಾನಕ್ಕೆ ಆಡಳಿತ ಪಕ್ಷ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

Karnataka MLC Election

ಹಾಲಿ ಎಂಎಲ್‌ಸಿಗಳ ಅವಧಿಯು ಶೀಘ್ರದಲ್ಲೇ ಕೊನೆಗೊಳ್ಳದಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಥಾನವನ್ನು ತ್ಯಜಿಸಿದ ನಂತರ ಎಲ್ಲಾ ಮೂರು ಪರಿಷತ್‌ ಸ್ಥಾನಗಳು ಖಾಲಿ ಉಳಿದಿವೆ.

ಚುನಾವಣೆಯಲ್ಲಿ ಅಥಣಿಯಿಂದ ಸವದಿ ಮಾತ್ರ ಗೆಲುವು ಸಾಧಿಸಿದ್ದಾರೆ. ಗುರುಮಿಟಕಲ್‌ನಿಂದ ಸ್ಪರ್ಧಿಸಿದ್ದ ಚಿಂಚನಸೂರ್ ಸೋಲು ಅನುಭವಿಸಿದ್ದಾರೆ. ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಕರ್ ರಾಣೆಬೆನ್ನೂರಿನಲ್ಲಿ ಪರಾಭವಗೊಂಡಿದ್ದಾರೆ.

Karnataka MLC Election

ಶಂಕರ್ ಅವರು ಜೂನ್ 30, 2026 ರವರೆಗೆ ತಮ್ಮ ಅವಧಿಯನ್ನು ಹೊಂದಿದ್ದಾರೆ. ಅವರು ಏಪ್ರಿಲ್ 12, 2023 ರಂದು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಸಚಿವರಾಗಿರುವ ಕಾರಣ ಪಕ್ಷವು ಬೋಸರಾಜು ಅವರನ್ನು ದೀರ್ಘಾವಧಿಯ ಎಂಎಲ್‌ಸಿ ಅವಧಿಗೆ ಆಯ್ಕೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವೆ ಉಮಾಶ್ರೀ, ಮುಖಂಡರಾದ ಬಿಎಲ್ ಶಂಕರ್, ವಿಎಲ್ ಸುದರ್ಶನ್, ಐವನ್ ಡಿಸೋಜಾ, ಲಕ್ಷ್ಮಣ್, ಕವಿತಾ ರೆಡ್ಡಿ, ಪುಷ್ಪಾ ಅಮರನಾಥ್, ಮಂಜುಳಾ ಮಾನಸ ಸೇರಿದಂತೆ ಇತರರ ಹೆಸರು ಕೇಳಿಬರುತ್ತಿದೆ.

English summary
Karnataka MLC Election: It is likely that Congress in Karnataka Legislative Council election will win all 3 seats as the MLCs are chosen by MLAs and Congress has the majority in Karnataka Assembly Know more at Oneindia Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X