ಸಚಿವರುಗಳಿಗೆ ತಿಂಗಳಿಗೆ 1 ಸಾವಿರ ಲೀಟರ್ ಇಂಧನ ಭಾಗ್ಯ

Posted By:
Subscribe to Oneindia Kannada

ಬೆಂಗಳೂರು, ಫೆ. 03: ಕರ್ನಾಟಕದ ಸಚಿವರುಗಳಿಗೆ ಫೆಬ್ರವರಿ ತಿಂಗಳಿನಿಂದ 'ಇಂಧನ ಭಾಗ್ಯ' ಸಿಗಲಿದೆ. ಸಚಿವರ ವಾಹನಗಳಿಗೆ ತಿಂಗಳಿಗೆ ಸಾವಿರ ಲೀಟರ್ ಪೆಟ್ರೋಲ್ ನೀಡಲು ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇದಕ್ಕೂ ಮುನ್ನ ಪ್ರತಿ ತಿಂಗಳೂ 750 ಲೀಟರ್ ಇಂಧನವನ್ನು ಸಚಿವರುಗಳು ತಮ್ಮ ವಾಹನಗಳಿಗೆ ತುಂಬಿಸಿಕೊಳ್ಳುತ್ತಿದ್ದರು. ಈಗ ತಿಂಗಳಿಗೆ 1,000 ಲೀಟರ್ ಪಡೆಯಲಿದ್ದಾರೆ. ಮಿನಿಷ್ಟರುಗಳ ಕಾರು, ಜೀಪುಗಳಿಗೆ ಪೆಟ್ರೋಲ್ ತುಂಬಿಸುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 63,000 ರು ಪ್ರತಿ ತಿಂಗಳು ಹೊರೆ ಬೀಳಲಿದೆಯಂತೆ. [ಸಂಸದರ ತಿಂಗಳ ವೇತನ ಡಬ್ಬಲ್, ಝಣ ಝಣ ಕಾಂಚಾಣ]

ಕರ್ನಾಟಕ ಸಚಿವರುಗಳ ಸಂಬಳ ಹಾಗೂ ಭತ್ಯೆ (ತಿದ್ದುಪಡಿ) ವಿಧೇಯಕ, 2015 ಜಾರಿಗೊಂಡು ಒಂದು ವರ್ಷದೊಳಗೆ ಇಂಧನ ಭಾಗ್ಯವನ್ನು ಸಿಎಂ ಸಿದ್ದರಾಮಯ್ಯ ಕರುಣಿಸಿದ್ದಾರೆ. ಇದಲ್ಲದೆ, ಸಂಬಳ, ನಿವೃತ್ತಿ ಪಿಂಚಣಿ, ವಿವಿಧ ಭತ್ಯೆಗಳು ಕೂಡಾ ಡಬ್ಬಲ್ ಆಗಿವೆ, ಇದೆಲ್ಲವೂ ಎಂಎಲ್ ಎ ಹಾಗೂ ಎಂಎಲ್ ಸಿ ಇಬ್ಬರಿಗೂ ಅನ್ವಯವಾಗಲಿದೆ.

ನವರಸ ನಾಯಕ ಜಗ್ಗೇಶು ಹಾಗೂ ಕೃಷ್ಣಭಟ್ ಇಬ್ಬರು ಇನ್ನೊಂದೆರಡು ದಿನ ಕಳೆದು ಎಂಎಲ್ ಸಿ ಸೀಟು ಬಿಟ್ಟಿದ್ದರೆ ಅವರಿಗೆ ಒಂದೆರಡು ಭತ್ಯೆ ಭಾಗ್ಯ ಸಿಗುತ್ತಿತ್ತೋ ಏನೋ. ಇಬ್ಬರ ಎಂಎಲ್ ಸಿ ಅವಧಿ ಇವತ್ತಿಗೆ ಮುಕ್ತಾಯವಾಗಿದೆ.

ಇನ್ನು ಸಂಬಳದ ವಿಚಾರಕ್ಕೆ ಬಂದರೆ

ಇನ್ನು ಸಂಬಳದ ವಿಚಾರಕ್ಕೆ ಬಂದರೆ

ಇನ್ನು ಸಂಬಳದ ವಿಚಾರಕ್ಕೆ ಬಂದರೆ, ಮುಖ್ಯಮಂತ್ರಿ, ಸ್ಪೀಕರ್, ಕೌನ್ಸಿಲ್ ಚೇರ್ಮನ್ ಸಂಬಳ 30,000 ರು ನಿಂದ 50,000ರು ಗೇ ಏರಿಸಲಾಗಿದೆ. ಕ್ಯಾಬಿನೆಟ್ ದರ್ಜೆ ಸಚಿವರ ಸಂಬಳ 25,000 ರು ನಿಂದ 40,000 ರು ಗೆ ಏರಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಪೆಟ್ರೋಲ್ ಭತ್ಯೆ ಏರಿಕೆಗೆ ವಿರೋಧ

ಪೆಟ್ರೋಲ್ ಭತ್ಯೆ ಏರಿಕೆಗೆ ವಿರೋಧ

ಪೆಟ್ರೋಲ್ ಭತ್ಯೆ ಏರಿಕೆ ಮಾಡಿರುವುದನ್ನು ಭಾರತೀಯ ಜನತಾ ಪಾರ್ಟಿ ನಾಯಕರು ಖಂಡಿಸಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಭತ್ಯೆಹೆಚ್ಚಳ ಏಕೆ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್ ಭತ್ಯೆ ಸಮರ್ಥನೆ

ಪೆಟ್ರೋಲ್ ಭತ್ಯೆ ಸಮರ್ಥನೆ

ಯಥಾ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಇದು ಶಾಸಕರ, ಸಚಿವರುಗಳ ತಿಂಗಳ ಭತ್ಯೆ ಹೊರತಾಗಿ ನೀಡುತ್ತಿರುವ ಭತ್ಯೆ ಇದಾಗಿದೆ ಎಂದು ಹೇಳಿದ್ದಾರೆ.

ಸಂಬಳದ ಜೊತೆಗೆ ಭತ್ಯೆ ಕೂಡಾ ಏರಿಕೆ

ಸಂಬಳದ ಜೊತೆಗೆ ಭತ್ಯೆ ಕೂಡಾ ಏರಿಕೆ

ಸಂಬಳ ಹಾಗೂ ಮಾಸಿಕ ಭತ್ಯೆ ಸಿಗುತ್ತದೆ. ಇವುಗಳಲ್ಲಿ ಭಾರತದ ಯಾವುದೇ ಭಾಗದಲ್ಲಿ ವಿಮಾನ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವ ರಾಜಕೀಯ ಮುಖಂಡರಿಗೆ ಪ್ರವಾಸ ಭತ್ಯೆ, ಶಾಸಕರ ಆಪ್ತ ಸಹಾಯಕ ಸಂಬಳ ಹಾಗೂ ಶಾಸಕರ ದೂರವಾಣಿ ಕರೆ ವೆಚ್ಚ ಎಲ್ಲವೂ ಸೇರಿರುತ್ತದೆ.

ಸಂಸದರ ಮಾಸಿಕ ವೇತನ ಕೂಡಾ ಹೆಚ್ಚಳವಾಗಿದೆ

ಸಂಸದರ ಮಾಸಿಕ ವೇತನ ಕೂಡಾ ಹೆಚ್ಚಳವಾಗಿದೆ

ಸಂಸದರ ಮಾಸಿಕ ವೇತನವನ್ನು ದ್ವಿಗುಣಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಈ ಪ್ರಸ್ತಾವನೆ ಜಾರಿಗೊಂಡರೆ ಹೊಸ ವರ್ಷ(2016)ಕ್ಕೆ ಲೋಕಸಭಾ ಸದಸ್ಯರ ವೇತನ ತಿಂಗಳಿಗೆ 2.8 ಲಕ್ಷ ರು ಗೆ ಏರಿಕೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ministers in the Karnataka State government are eligible for 1,000 litres of petrol a month from February. Earlier, they were eligible for 750 litres a month. An order said this would cost the State exchequer around Rs. 63,000 a month per Minister reports The Hindu.
Please Wait while comments are loading...