ಹಸುವಿನ ಹಾಲು ಪೂರೈಕೆಗೆ ಕೆಎಂಎಫ್‌ಗೆ ಮನವಿ ಮಾಡಿದ ದೆಹಲಿ

ಬೆಂಗಳೂರು, ಜೂನ್ 11 : ಕರ್ನಾಟಕದ ಹಸುವಿನ ಹಾಲಿಗೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಬೇಡಿಕೆ ಬಂದಿದೆ. ಕರ್ನಾಟಕ ಹಾಲು ಮಹಾಮಂಡಳ ಪ್ರಾಯೋಗಿಕವಾಗಿ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಕಳುಹಿಸಿದೆ.

29 ವರ್ಷಗಳ ಬಳಿಕ ಕರ್ನಾಟಕದ ಹಸುವಿನ ಹಾಲಿಗಾಗಿ ದೆಹಲಿ ಬೇಡಿಕೆ ಇಟ್ಟಿದೆ. ದೆಹಲಿಯ ಮದರ್ ಡೇರಿ ಗ್ರಾಹಕರಿಗೆ ಸ್ಯಾಚೆಟ್‌ಗಳಲ್ಲಿ ಹಸುವಿನ ಹಾಲು ಪೂರೈಕೆ ಮಾಡುತ್ತದೆ. ಆದರೆ, ಬೇಡಿಕೆಯಷ್ಟು ಹಾಲು ಲಭ್ಯವಿಲ್ಲದ ಕಾರಣ ಕರ್ನಾಟಕದ ಕದ ತಟ್ಟಿದೆ.

'ಜೂನ್ 8ರಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರಾಯೋಗಿಕವಾಗಿ ದೆಹಲಿಗೆ 1 ಲಕ್ಷ ಲೀಟರ್ ಹಾಲನ್ನು ಕಳುಹಿಸಿದೆ' ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಟಿ.ಕುಲಕರ್ಣಿ ಹೇಳಿದ್ದಾರೆ.

Karnataka Milk Federation send 1 lakh liter of cow milk to Delhi

ಮಂಡ್ಯ ಜಿಲ್ಲೆಯಿಂದ ಸಂಗ್ರಹಿಸಿದ ಹಸುವಿನ ಹಾಲನ್ನು 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇಟ್ಟು ದೆಹಲಿಗೆ ಕಳುಹಿಸಲಾಗಿದ್ದು, ಸೋಮವಾರ ಹಾಲು ದೆಹಲಿಗೆ ತಲುಪಿದೆ. ಹಾಲನ್ನು ಸಾಂದ್ರೀಕರಿಸುವಾಗ ಅದರದಲ್ಲಿದ್ದ ನೀರಿನ ಅಂಶವನ್ನು ತೆಗೆಯಲಾಗಿದೆ.

ದೆಹಲಿಯ ಮದರ್ ಡೈರಿಯಲ್ಲಿ ಹಾಲಿಗೆ ಮತ್ತೆ ನೀರಿನ ಅಂಶವನ್ನು ಸೇರಿಸಿ ಸಾಮಾನ್ಯ ರೂಪಕ್ಕೆ ತರಲಾಗುತ್ತದೆ. ಬಳಿಕ ಅದನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಪ್ರತಿದಿನ ಕೆಎಂಎಫ್ 2 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಕೆ ಮಾಡಲಿದೆ.

ಕರ್ನಾಟಕದಿಂದ 29 ವರ್ಷಗಳ ಹಿಂದೆ ಕೋಲ್ಕತ್ತಾ ಮತ್ತು ದೆಹಲಿಗೆ ಹಸುವಿನ ಹಾಲು ಕಳಿಸಲಾಗುತ್ತಿತ್ತು. ಬಳಿಕ ಕಾರಣಾಂತರಗಳಿಂದಾಗಿ ಅದು ಸ್ಥಗಿತಗೊಂಡಿತ್ತು. ಈಗ ಪುನಃ ರಾಜ್ಯದ ಹಸುವಿನ ಹಾಲಿಗೆ ದೆಹಲಿಯಿಂದ ಬೇಡಿಕೆ ಬಂದಿದೆ.

ದೆಹಲಿಗೆ 2 ಲಕ್ಷ ಲೀಟರ್ ಹಾಲು ಕಳಿಸಿದರೆ ರಾಜ್ಯಕ್ಕೆ ಹಾಲಿನ ಕೊರತೆ ಉಂಟಾಗುವುದಿಲ್ಲ, ಬದಲಾಗಿ ಮಾರುಕಟ್ಟೆ ವಿಸ್ತರಣೆಯಾಗಲಿದೆ ಎಂದು ಕೆಎಂಎಫ್ ಹೇಳಿದೆ. ಕೆಎಂಎಫ್ ಪ್ರತಿನಿತ್ಯ ಸುಮಾರು 76 ಲಕ್ಷ ಲೀಟರ್ ಹಾಲನ್ನು ರೈತರಿಂದ ಸಂಗ್ರಹ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+