• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ಬಂಡಾಯ ತಪ್ಪಿಸಲು ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ

|

ಬೆಂಗಳೂರು, ಆಗಸ್ಟ್ 25 : ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಅಸಮಾಧಾನಗೊಂಡಿದ್ದಾರೆ. ಬಿಸಿತುಪ್ಪವಾಗಿರುವ ಬೆಳಗಾವಿ ನಾಯಕರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ತಂತ್ರವೊಂದನ್ನು ರೂಪಿಸಿದ್ದಾರೆ.

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 31ರಂದು ಚುನಾವಣೆ ನಡೆಸುವುದಾಗಿ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಹೇಳಿದೆ. ಕೆಎಂಎಫ್ ಅಧ್ಯಕ್ಷ ಹುದ್ದೆಯನ್ನು ಬಾಲಚಂದ್ರ ಜಾರಕಿಹೊಳಿಗೆ ನೀಡಲು ಯಡಿಯೂರಪ್ಪ ಮುಂದಾಗಿದ್ದಾರೆ.

ಬ್ರದರ್ಸ್ ವಾರ್ ಮಧ್ಯೆ ರಾಜಕೀಯ ಪ್ರವೇಶಿಸಿದ ಜಾರಕಿಹೊಳಿ ಪುತ್ರ

ಬಾಲಚಂದ್ರ ಜಾರಕಿಹೊಳಿ ಶನಿವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದ್ದರು. ಮತ್ತೊಂದು ಕಡೆ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಮತ್ತು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

ಕೆಎಂಎಫ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ: ಎಚ್‌.ಡಿ.ರೇವಣ್ಣಗೆ ಶಾಕ್

ಕೆಎಂಎಫ್ ಅಧ್ಯಕ್ಷ ಹುದ್ದೆಯ ಚುನಾವಣೆ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಜುಲೈ 29ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣೆ ಮುಂದೂಡಿ ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಎಚ್. ಡಿ. ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸರಕಾರದ ನಿರ್ಧಾರದ ವಿರುದ್ದ ಹೈಕೋರ್ಟಿನಲ್ಲಿ ತೊಡೆತಟ್ಟಿದ ರೇವಣ್ಣ

ಬಾಲಚಂದ್ರ ಜಾರಕಿಹೊಳಿ ಹೇಳುವುದೇನು?

ಬಾಲಚಂದ್ರ ಜಾರಕಿಹೊಳಿ ಹೇಳುವುದೇನು?

ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, "ನೇರವಾಗಿ ಜನರ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಆ ಕಾರಣಕ್ಕೆ ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ. ಕೆಎಂಎಫ್‌ನಲ್ಲಿ ಎಲ್ಲಾ 15 ನಿರ್ದೇಶಕರ ವಿಶ್ವಾಸಗಳಿಸಿ ಸಂಪೂರ್ಣ ಬೆಂಬಲದಿಂದ ಅಧ್ಯಕ್ಷನಾಗಲು ಬಯಸಿದ್ದೇನೆ" ಎಂದರು.

ಅಧ್ಯಕ್ಷ ಹುದ್ದೆ ಮೇಲೆ ರೇವಣ್ಣ ಕಣ್ಣು

ಅಧ್ಯಕ್ಷ ಹುದ್ದೆ ಮೇಲೆ ರೇವಣ್ಣ ಕಣ್ಣು

ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಜೆಡಿಎಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ 15 ವರ್ಷ ಕೆಎಂಎಫ್ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ಗೆ ಸೇರಿದ ನಾಲ್ವರು ಕೆಎಂಎಫ್ ನಿರ್ದೇಶಕರನ್ನು ಹೈದರಾಬಾದ್‌ನ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದ ರೇವಣ್ಣ ರೆಸಾರ್ಟ್ ರಾಜಕೀಯ ಕೂಡಾ ಮಾಡಿದ್ದರು. ಆದರೆ, ಈಗ ಸರ್ಕಾರ ಬದಲಾಗಿದ್ದು, ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣೆ ದಿಢೀರ್ ರದ್ದು

ಚುನಾವಣೆ ದಿಢೀರ್ ರದ್ದು

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಜುಲೈ 29ರಂದು ಚುನಾವಣೆ ನಿಗದಿಯಾಗಿತ್ತು. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೇಮಕವಾದ ಬಳಿಕ ಚುನಾವಣೆಯನ್ನು ದಿಢೀರ್ ರದ್ದುಗೊಳಿಸಲಾಗಿತ್ತು. ಎಚ್. ಡಿ. ರೇವಣ್ಣ ಇದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಆಗಸ್ಟ್ 31ರಂದು ಚುನಾವಣೆ ನಡೆಸುವುದಾಗಿ ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಭೀಮಾ ನಾಯ್ಕ್ ಆಕಾಂಕ್ಷಿ

ಭೀಮಾ ನಾಯ್ಕ್ ಆಕಾಂಕ್ಷಿ

ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಸಹ ಕೆಎಂಎಫ್ ಅಧ್ಯಕ್ಷ ಹುದ್ದೆ ಆಕಾಂಕ್ಷಿ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿರುವ ಅವರು ಚುನಾವಣೆ ಕುರಿತು ಮಾತುಕತೆ ನಡೆಸಿದ್ದಾರೆ. ಹಿಂದೆ ಚುನಾವಣೆ ಮುಂದೂಡುವಂತೆ ಭೀಮಾ ನಾಯ್ಕ್ ಸಲ್ಲಿಸಿದ್ದ ಮನವಿಗೆ ಯಡಿಯೂರಪ್ಪ ಸರ್ಕಾರ ಸ್ಪಂದಿಸಿತ್ತು. ಈಗ ಅಧ್ಯಕ್ಷ ಗಾದಿ ಯಾರಿಗೆ? ಎಂಬುದು ಕುತೂಹಲದ ವಿಷಯವಾಗಿದೆ.

English summary
Aeabhavi BJP MLA Balachandra Jarkiholi may get Karnataka Milk Federation (KMF) president post. Balachandra Jarkiholi upset after he did not get minister post in Chief Minister B.S.Yediyurappa cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X