Karnataka Rains: ಮುಂದಿನ 48ಗಂಟೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ, ಜನರಲ್ಲಿ ಹೆಚ್ಚಾದ ಅನಾರೋಗ್ಯ ಸಮಸ್ಯೆ

ಬೆಂಗಳೂರು, ಆಗಸ್ಟ್ 25: ಕರ್ನಾಟಕ ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಜನರಿಗೆ ಮಳೆ ಸಾಕಾಗಿ ಹೋಗಿದೆ. ಅಷ್ಟರ ಮಟ್ಟಿಗೆ ನಿರಂತರವಾಗಿ ವ್ಯಾಪಕ ಮಳೆ ಆಗುತ್ತಿದೆ. ಅತೀವೃಷ್ಟಿ ಉಂಟಾಗಿದೆ, ಭೂಕುಸಿತ ಸಂಭವಿಸಿವೆ. ಮತ್ತೊಂದೆಡೆ ನದಿ, ಜಲಾಶಯಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಮತ್ತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ರಾಜ್ಯಾದ್ಯಂತ ಮುಂಗಾರು ಮಳೆ ವಾತಾವರಣ ಕಂಡು ಬಂದಿದೆ. ಆದರೆ ಒಂದಷ್ಟು ಜಿಲ್ಲೆಗಳಲ್ಲಿ ಮಾತ್ರ ಧಾರಾಕಾರ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ಭೂಕುಸಿತ ಪ್ರದೇಶಗಳು ಮತ್ತೆ ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತಿಲ್ಲ. ಕಾರಣ ಮೆಲನಾಡು, ಕರಾವಳಿ ಭಾಗದಲ್ಲಿ ಮಳೆ ನಿಲ್ಲುತ್ತಿಲ್ಲ. ದಿನವಿಡಿ ಸುರಿಯುತ್ತಲೇ ಇದೆ.

Karnataka Many States Will Receive Heavy Rain in Next 48 hours IMD Prediction

ವಿವಿಧಡೆ ಭಾರೀ ಮಳೆ ಮುನ್ಸೂಚನೆ

ರಾಜ್ಯದ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆಗಸ್ಟ್ 29ರವರೆಗೆ ಭಾರೀ ಮಳೆ ಆಗಲಿದೆ.ಈ ಪೈಕಿ ಮುಂದಿನ 48 ಗಂಟೆಗೆ ಅತ್ಯಧಿಕ ಮಳೆ ಆಗುವ ಹಿನ್ನೆಲೆಯಲ್ಲಿ ಇದೇ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ನಂತರ ಆಗಸ್ಟ್ 29ರವರೆಗೆ ಇದೇ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, 'ಹಳದಿ ಎಚ್ಚರಿಕೆ' ಕೊಡಲಾಗಿದೆ.

ಇನ್ನುಳಿದಂತೆ ನಾಳೆ ಸೋಮವಾರ ಆಗಸ್ಟ್ 26ರಂದು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಹಿನ್ನೆಲೆಯಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನ ಸಾಧಾರಣ, ಜಿಟಿ ಜಿಟಿ ಮಳೆಯಾಗುವ ವಸಂಭವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Karnataka Many States Will Receive Heavy Rain in Next 48 hours IMD Prediction

ಚಳಿ ಮಳೆಯಿಂದ ಹೆಚ್ಚಾದ ಅನಾರೋಗ್ಯ ಸಮಸ್ಯೆ

ಬೆಂಗಳೂರು ಸೇರಿದಂತೆ ರಾಜ್ಯ ನಾನಾ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಮಳೆ ಅಬ್ಬರ ಕಂಡು ಬರುತ್ತಿದೆ. ಸದ್ಯದ ತಂಪು ಗಾಳಿ ಬೀಸುತ್ತಿದ್ದು, ಜಿಟಿ ಜಿಟಿ ಮಳೆಯ ವಾತಾವರಣದಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ನಿತ್ಯವು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಕಂಡು ಬರುತ್ತಿದೆ.

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜುಲೈನಿಂದ ಈವರೆಗೆ ಕೆಲವು ದಿನಗಳ ಹೊರತಪಡಿಸಿದರೆ ಬಹುತೇಕ ದಿನಗಳ ಮಳೆ ಆಗಿದೆ. ಜನರಿಗೆ ಮಳೆ ನಿಲ್ಲುವುದು ಯಾವಾಗ? ಎಂಬ ಪ್ರಶ್ನೆ ಹುಟ್ಟು ಹಾಕಿದ್ದ ಈ ಮಳೆ ಅನಾರೋಗ್ಯ ತಂದಿದೆ. ನೆಗಡಿ, ಶೀತ, ಚಳಿ ಜ್ವರದಿಂದ ಬಳಲುವವರ ಸಂಖ್ಯೆ ಈ ಭಾಗದಲ್ಲಿ ಹೆಚ್ಚಾಗಿದೆ. ನಿರಂತರ ಮಳೆ, ಚಳಿಗೆ ಜನರು ತತ್ತರಿಸಿದ್ದಾರೆ. ಉತ್ತರ ಕರ್ನಾಟಕದ ಮಾತ್ರವಲ್ಲದೇ, ಮಲೆನಾಡು, ಬೆಂಗಳೂರಿನಲ್ಲೂ ಜನರು ಇದೊಂದು ರೀತಿಯ ವಾತವರಣಕ್ಕೆ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಇದೀಗ ಮುಂದಿನ ಐದು ದಿನ ರಾಜ್ಯದ ವಿವಿಧೆಡೆ ಮತ್ತೆ ಚಳಿ ಮಳೆಯ ಮುನ್ಸೂಚನೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+