Karnataka Dam Water Level on 25: KRS ಸೇರಿದಂತೆ ಪ್ರಮುಖ ಜಲಾಶಗಳ ನೀರಿನ ಮಟ್ಟ ಏರಿಕೆ?-ಅಂಶಅಂಶಗಳ ವಿವರ
Karnataka Dam Water Level On May 25: ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಹಲವು ಬತ್ತಿ ಹೋಗುವ ಹಂತ ತಲುಪಿದ್ದ ಜಲಮೂಲಗಳಿಗೆ ಜೀವ ಬಂದತಾಗಿದೆ. ಹಾಗಾದರೆ ಇದೀಗ ಇಂದು (ಮೇ 25) ಕೆಆರ್‌ಎಸ್ ಸೇರಿದಂತೆ ರಾಜ್ಯದ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ಇಲ್ಲಿ ತಿಳಿಯಿರಿ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಈ ವಾರ ಮಳೆ ಮುಂದುವರೆದರೆ, ಜಲಶಯಗಳ ನೀರಿನ ಮಟ್ಟ ಮತ್ತಷ್ಟು ಹೆಚ್ಚಾದಂತಾಗುತ್ತದೆ. ಅಲ್ಲದೆ, ಅನ್ನದಾತರ ಮುಖದಲ್ಲಿ ಮತ್ತಷ್ಟು ಕಳೆ ಬರಲಿದೆ. ಇನ್ನು ಪ್ರಸ್ತುತ ಇದೀಗ ಕೃಷ್ಣರಾಜ ಸಾಗರ ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಹಿತಿ ಇಲ್ಲಿದ ಗಮನಿಸಿ.

1. ಕೆಆರ್‌ಎಸ್ ಜಲಾಶಯ
* ಒಟ್ಟು ಸಾಮರ್ಥ್ಯ - 49.45 ಟಿಎಂಟಿ
* ಇಂದಿನ ನೀರಿನ ಮಟ್ಟ- 11.60 ಟಿಎಂಸಿ
* ಒಳಹರಿವು - 2,509 ಕ್ಯೂಸೆಕ್
* ಹೊರಹರಿವು - 522 ಕ್ಯೂಸೆಕ್
2. ಹಾರಂಗಿ ಜಲಾಶಯ
* ಒಟ್ಟು ಸಾಮರ್ಥ್ಯ - 8.50 ಟಿಎಂಸಿ
* ಇಂದಿನ ನೀರಿನ ಮಟ್ಟ - 3.01 ಟಿಎಂಸಿ
* ಒಳಹರಿವು - 460 ಕ್ಯೂಸೆಕ್
* ಹೊರಹರಿವು - 200 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 23.24 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 4,108 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 3.37 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 90 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಒಟ್ಟು ಸಾಮರ್ಥ್ಯ - 37.73 ಟಿಎಂಸಿ
* ಇಂದಿನ ನೀರಿನ ಮಟ್ಟ - 6.88 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 446 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 15.91 ಟಿಎಂಸಿ
* ಒಳಹರಿವು - 143 ಕ್ಯೂಸೆಕ್
* ಹೊರಹರಿವು - 1,848 ಕ್ಯೂಸೆಕ್
7. ಕಬಿನಿ ಜಲಾಶಯ
* ಒಟ್ಟು ಸಾಮರ್ಥ್ಯ - 19.52 ಟಿಎಂಸಿ
* ಇಂದಿನ ನೀರಿನ ಮಟ್ಟ - 7.23 ಟಿಎಂಸಿ
* ಒಳಹರಿವು - 6,473 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
8. ಭದ್ರಾ ಜಲಾಶಯ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 13.90 ಟಿಎಂಸಿ
* ಒಳಹರಿವು - 970 ಕ್ಯೂಸೆಕ್
* ಹೊರಹರಿವು - 577 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 13.08 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 141 ಕ್ಯೂಸೆಕ್
10. ಹೇಮಾವತಿ ಜಲಾಶಯ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 9.61 ಟಿಎಂಸಿ
* ಒಳಹರಿವು - 627 ಕ್ಯೂಸೆಕ್
* ಹೊರಹರಿವು - 250 ಕ್ಯೂಸೆಕ್
ಒಟ್ಟಿನಲ್ಲಿ ಕಳೆದ ಮೂರು ವಾರಗಳಿಂದಲೂ ಮಳೆರಾಯನ ಆರ್ಭಟ ಮುಂದುವರಿದ ಹಿನ್ನೆಲೆ ಹಲವು ಜಲಾಶಯಗಳಿಗೆ ನೀರು ಹರಿದುಬರುತ್ತಲೇ ಇದೆ. ಹೋಗೆ ಒಂದು ವಾರ ಮಳೆ ಮುಂದುವರೆದರೆ, ದೊಡ್ಡ ದೊಡ್ಡ ಜಲಾಶಯಗಳಿಗೆ ಅರ್ಧ ಪ್ರಮಾಣದಲ್ಲಿ ನೀರು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications