Karnataka Dam Water Level: ಕಬಿನಿ, ಹಾರಂಗಿ, ಕೆಆರ್‌ಎಸ್ ಜಲಾಶಯದಲ್ಲಿ ಒಳಹರಿವು ಹೆಚ್ಚಳ, ವಿವರ
ಬೆಂಗಳೂರು, ಜೂನ್ 04: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆಗೆ ಎಲ್ಲೆಡೆ ಹಸಿರು ವಾತಾವರಣ ಕಂಗೊಳಿಸುತ್ತಿದೆ. ಬಿತ್ತನೆ ಈಗಾಗಲೇ ಶುರುವಾಗಿದೆ. ಕೃಷ್ಣ ಚುಟವಟಿಕೆಗಳು ಗರಿಗೆದ್ದು, ನೀರಾವರಿಗೆ ಅಗತ್ಯವಾಗಿ ಬೇಕಾದ ನೀರಿನ ಸಂಗ್ರಹಣೆ ಜಲಾಶಯಗಳಲ್ಲಿ ಆಗುತ್ತಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಆಗಿದ್ದು, ಕೆಆರ್‌ಎಸ್, ಕಬಿನಿ, ಹಾರಂಗಿ, ಮೆಟ್ಟೂರು ಜಲಾಶಯಗಳಲ್ಲಿ ಸಂಗ್ರಹಣೆ ಹೆಚ್ಚಾಗಿದೆ. ತುಂಗಭದ್ರಾ, ಕೃಷ್ಣ, ಹಾರಂ, ಕಾವೇರಿ ನದಿಗಳಲ್ಲೂ ನೀರಿನ ಒಳಹರಿವು ಏರಿಕೆ ಆಗಿದೆ.
ಕೇರಳ, ವಯನಾಡು, ಕೊಡಗು, ಮಡಿಕೇರಿ, ಮೈಸೂರು ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ಕಳೆದೊಂದು ತಿಂಗಳಲ್ಲಿ ಆಗಾಗ ಉತ್ತಮ ಮಳೆ ಆಗಿದೆ. ಹೀಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಿರುವ ಕೃಷ್ಣ ರಾಜ ಸಾಗರ (KRS) ದಲ್ಲಿ ವ್ಯಾಪಕ ನೀರಿನ ಸಂಗ್ರಹವಾಗಿದೆ. ಒಳಹರಿವು ಹೆಚ್ಚಾಗಿದ್ದು, ನೆನ್ನೆ ಕೆಆರ್‌ಎಸ್ ಡ್ಯಾಂನಿಂದ 7600 ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ. ಕಬಿನಿ ಜಲಾಶಯದಿಂದ 5300 ಕ್ಯೂಸೆಕ್ಸ ನೀರು ಬಿಡುಗಡೆ ಮಾಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊಡಗು ವ್ಯಾಪ್ತಿಯಲ್ಲಿ ಜೋರು ಮಳೆ ದಾಖಲಾಗಿದೆ. ತಲಕಾವೇರಿ ವ್ಯಾಪ್ತಿಯ 35.2 ಮಿ.ಮೀ, ಸಂಪಾಜೆ 30.5 ಮಿ.ಮೀ, ಭಾಗಮಂಡಲ 30ಮಿ.ಮೀ, ಶಾಂತಳ್ಳಿ 22ಮಿ.ಮೀ, ಮಡಿಕೇರಿ 16.5 ಮಿ.ಮೀ, ಹುದಿಕೆರೆ- 16.2 ಮಿ.ಮೀ, ಕೊಡ್ಲಿಪೇಟೆ 11.8 ಮಿ.ಮೀ, ಶನಿವಾರಸಂತೆ 11 ಮಿ.ಮೀ, ನಾಪೋಕ್ಲು 9.2 ಮಿ.ಮೀ, ಸೋಮವಾರಪೇಟೆ 8.6 ಮಿ.ಮೀ, ಶ್ರೀಮಂಗಲ 7.4 ಮಿ.ಮೀ, ಪೊನ್ನಂಪೇಟೆ 7ಮಿ.ಮೀಟರ್ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ರಾಜ್ಯದಲ್ಲಿ ಹೀಗೆ ಮಳೆ ಮುಂದುವರಿದ ಪರಿಣಾಮ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಜೂನ್ 04ರಂದು ಎಷ್ಟಿದೆ? ಇಲ್ಲಿದೆ ಪಟ್ಟಿ
* ಕಬಿನಿ ಅಣೆಕಟ್ಟು ಮಾಹಿತಿ
ಒಟ್ಟು ನೀರಿನ ಸಂಗ್ರಹ: 19.52 ಟಿಎಂಸಿ
ಇಂದಿನ ಸಂಗ್ರಹ : 17.48 ಟಿಎಂಸಿ
ಒಳಹರಿವು : 7384 ಕ್ಯೂಸೆಕ್
ಹೊರಹರಿವು : 7250 ಕ್ಯೂಸೆಕ್
ಹಾರಂಗಿ ಜಲಾಶಯದ ಇಂದಿನ ಸಂಗ್ರಹ
ನೀರಿನ ಸಂಗ್ರಹ ಒಟ್ಟು ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹ: 6.22 ಟಿಎಂಸಿ
ಡ್ಯಾಂ ಒಳಹರಿವು : 1830 ಕ್ಯೂಸೆಕ್
ಡ್ಯಾಂ ಹೊರಹರಿವು: 1187 ಕ್ಯೂಸೆಕ್
ಕೆಆರ್ಎಸ್ ಜಲಾಶಯ ವಿವರ
ಡ್ಯಾಂ ಒಟ್ಟು ನೀರು ಸಂಗ್ರಹ: 49.452 ಟಿಎಂಸಿ
ಇಂದಿನ ನೀರು ಸಂಗ್ರಹ : 28.441 ಟಿಎಂಸಿ
ಒಳಹರಿವು ಎಷ್ಟಿದೆ : 6876 ಕ್ಯೂಸೆಕ್
ಹೊರಹರಿವು : 819 ಕ್ಯೂಸೆಕ್
ಮೆಟ್ಟೂರು ಜಲಾಶಯದ ವಿವರ
ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ:
ಒಟ್ಟು ನೀರಿನ ಸಂಗ್ರಹ: 112.800 ಅಡಿ
ಇಂದಿನ ನೀರು ಸಂಗ್ರಹಣೆ: 82451 Mcft
ಒಳಹರಿವು: 5908 ಕ್ಯೂಸೆಕ್ಸ್
ಹೊರಹರಿವು: 1000 ಕ್ಯೂಸೆಕ್ಸ್












Click it and Unblock the Notifications