ಕರ್ನಾಟಕದಲ್ಲಿ ಮೊಹರಂ ಆಚರಣೆಗೆ ಸರ್ಕಾರದ ಮಾರ್ಗಸೂಚಿ

ಬೆಂಗಳೂರು, ಆಗಸ್ಟ್.18: ಕೊರೊನಾವೈರಸ್ ಸೋಂಕು ಹರಡುವಿಕೆ ಗಮನದಲ್ಲಿಟ್ಟುಕೊಂಡು ಈ ವರ್ಷ ಮೊಹರಂ ಮೆರವಣಿಗೆ ನಡೆಸುವುದನ್ನು ನಿಷೇಧಿಸಿರುವುದಾಗಿ ಸರ್ಕಾರ ಆದೇಶಿಸಿದೆ. ಜೊತೆಗೆ ಹಬ್ಬದ ಆಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

Recommended Video

      ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

      ರಾಜ್ಯದಲ್ಲಿ ಮೊಹರಂ ಆಚರಣೆ ವೇಳೆ ಸಾರ್ವಜನಿಕರ ಮೆರವಣಿಗೆ ಮತ್ತು ಕೂಟಗಳ ಆಯೋಜನೆಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಹಜ್ ಮತ್ತು ವಕ್ಫ್ ಕಾರ್ಯದರ್ಶಿ ಎ. ಬಿ. ಇಬ್ರಾಹಿಂ ತಿಳಿಸಿದ್ದಾರೆ.

      ಕೊರೊನಾವೈರಸ್ ಸೋಂಕಿನ ಹರಡುವಿಕೆ ಹಿನ್ನೆಲೆ ಹೊರಡಿಸಿರುವ ಆದೇಶವು ಕೇವಲ ಈ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸಾಂಕ್ರಾಮಿಕ ಪಿಡುಗು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಇಬ್ರಾಹಿಂ ಮನವಿ ಮಾಡಿಕೊಂಡಿದ್ದಾರೆ.

      Karnataka Issued Guidelines For Observing Muharram With Restrictions Due To COVID-19


      ಮೊಹರಂ ಆಚರಣೆಗೆ ಸರ್ಕಾರದ ಮಾರ್ಗಸೂಚಿ:

      - ಆಗಸ್ಟ್.21 ರಿಂದ 30ರವರೆಗೂ ಸರ್ಕಾರದ ಹೊರಡಿಸಿರುವ ಮಾರ್ಗಸೂಚಿ ಜಾರಿಯಲ್ಲಿರುತ್ತದೆ

      - ಅಶುರ್ಖಾನ, ಮಸೀದಿ, ದರ್ಗಾಗಳನ್ನು ಸ್ಯಾನಿಟೈಸ್ ಮಾಡುವುದು, ಆದರೆ ಸಾರ್ವಜನಿಕ ಪ್ರದೇಶಗಳಲ್ಲಿ ಪಂಜ ಮತ್ತು ಅಲಂಗಳನ್ನು ಸ್ಥಾಪಿಸುವಂತಿಲ್ಲ

      - ಮಜಲಿಸ್-ಎ-ಇಮಾಮ್ ಹುಸೇನ್ (ಧಾರ್ಮಿಕ ಧರ್ಮೋಪದೇಶ)ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ

      - ಕೋವಿಡ್ ‌ನ ದೃಷ್ಟಿಯಿಂದ ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಮನೆಗಳಲ್ಲಿ ವಿಧಾ ಮತ್ತು ಮಜಿಲಿಗಳನ್ನು ಅರ್ಪಿಸಲು ಸೂಚಿಸಲಾಗಿದೆ

      - ಧಾರ್ಮಿಕ ಧರ್ಮೋಪದೇಶಕ್ಕೆ ಸಭಾಂಗಣಗಳಲ್ಲಿ ಮಾತ್ರ ಅನುಮತಿಸಲಾಗಿದೆ, ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ

      - ಮಜಲಿ, ಅಸ್ಥಾನ ಅಥವಾ ಅಶುರ್ಖಾನಗಳಲ್ಲಿ ಪ್ರವೇಶಿಸುವ ಭಕ್ತರ ಸಂಖ್ಯೆ ಮತ್ತು ಸ್ಥಳಾವಕಾಶದ ಬಗ್ಗೆ ನಿರ್ವಹಣಾ ಸಮಿತಿಗಳು ಮಾಹಿತಿಯನ್ನು ಪ್ರದರ್ಶಿಸಬೇಕು

      - ರತ್ನಗಂಬಳಿಗಳನ್ನು ತೆಗೆದುಹಾಕಬೇಕು ಮತ್ತು ಕುಳಿತುಕೊಳ್ಳುವ ಸ್ಥಳಗಳನ್ನು ಪ್ರತಿ ಧರ್ಮೋಪದೇಶದ ನಂತರ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸ್ಪಷ್ಟವಾಗಿ ಗುರುತಿಸಬೇಕು

      - ದೊಡ್ಡ ಕೂಟಗಳನ್ನು ತಪ್ಪಿಸಲು ಭಕ್ತರ ಪ್ರವೇಶದ ಮೇಲ್ವಿಚಾರಣೆ ಮಾಡಬೇಕು

      - ಶಾರ್ ಬತ್, ತಬಾರುಕ್ ಮತ್ತು ನೀರನ್ನು ಮೊಹರು ಪ್ಯಾಕೆಟ್‌ಗಳಲ್ಲಿ ಮಾತ್ರ ವಿತರಿಸಬಹುದು

      - 60 ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಜಿಯಾರತ್ ‌ಗೆ ಅನುಮತಿಸಬಾರದು ಮತ್ತು ಮನೆಯಲ್ಲಿ ಪ್ರಾರ್ಥಿಸಲು ಸೂಚಿಸಲಾಗಿದೆ

      - ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು

      - ಅಪರಿಚಿತ ಸಂದರ್ಶಕರನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಧಾರ್ಮಿಕ ಸ್ಥಳದ ಹೊರಗೆ ಯಾವುದೇ ಭಿಕ್ಷುಕರನ್ನು ಅನುಮತಿಸಬಾರದು

      - ಮೊಹರಂ ಆಚರಣೆ ಸಮಯದಲ್ಲಿ ಅಶುರ್ಖಾನಗಳು, ಮಸೀದಿ ಮತ್ತು ದರ್ಗಾಗಳು ಪ್ರಾಯೋಗಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ

      - ಮೊಹರಂ ಆಚರಣೆಯು ಮಕ್ಕಳು, ಹಿರಿಯ ನಾಗರಿಕರು ಮತ್ತು ಇತರ ಧರ್ಮದ ಜನರು ಸೇರಿದಂತೆ ಅಪಾರ ಜನಸಮೂಹವನ್ನು ಆಕರ್ಷಿಸಲು ಹೆಸರುವಾಸಿ ಹಬ್ಬವಾಗಿದೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+