ಪ್ರಿಯಾಂಕ್ ಖರ್ಗೆ ಆಪ್ತ ಬಂಧನ; 'ಡ್ರಗ್ಸ್ ಸ್ವರ್ಗವಾಗುತ್ತಿದೆ ಕರ್ನಾಟಕ'
ಬೆಂಗಳೂರು, ಜುಲೈ 16: ಕರ್ನಾಟಕವು ಒಂದು ರೀತಿಯಲ್ಲಿ ಡ್ರಗ್ಸ್‍ನ ಸ್ವರ್ಗವಾಗುತ್ತಿದೆ. ಕರ್ನಾಟಕವು ಒಂದು ರೀತಿಯಲ್ಲಿ ಡ್ರಗ್ಸ್‍ನ ಸ್ವರ್ಗವಾಗುತ್ತಿದೆ. ಈಶಾನ್ಯ ಭಾಗದ ರಾಜ್ಯಗಳು, ಪಂಜಾಬ್ ರಾಜ್ಯದಲ್ಲಿ ಯುವಕರ ಜೀವನವನ್ನು ಹಾಳು ಮಾಡಿದ್ದ ಡ್ರಗ್ಸ್, ಇವತ್ತು ಆ ರಾಜ್ಯಗಳ ಪಟ್ಟಿಗೆ ಕರ್ನಾಟಕ ಸೇರುತ್ತಿರುವುದು ಖೇದನೀಯ ವಿಷಯ ಎಂದು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರ್ಗಿ, ಬೆಂಗಳೂರು, ಮಂಗಳೂರು- ಎಲ್ಲ ಜಿಲ್ಲೆಗಳಲ್ಲಿ ಡ್ರಗ್ಸ್ ರಾಜಾರೋಷವಾಗಿ ಸಿಗುತ್ತಿದೆ. ಡ್ರಗ್ಸ್ ವಶ ಕುರಿತ ಸುದ್ದಿ ವಾರಕ್ಕೊಮ್ಮೆ ಸುದ್ದಿಯಾಗುತ್ತಿದೆ. ಕಲಬುರ್ಗಿಯಲ್ಲಿ ಲಿಂಗರಾಜ್ ಕಣ್ಣಿ ಎಂಬ ಕಾಂಗ್ರೆಸ್ಸಿನ ಗುಲ್ಬರ್ಗ ದಕ್ಷಿಣ ಬ್ಲಾಕ್ ಅಧ್ಯಕ್ಷ, ಪ್ರಮುಖ ನಾಯಕ, ಪ್ರಿಯಾಂಕ್ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲರಿಗೆ ಆತ್ಮೀಯರಾಗಿರುವ ವ್ಯಕ್ತಿ ಬಂಧನವಾಗಿದೆ. ಅನೇಕ ವರ್ಷಗಳಿಂದ ಈತ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದವ ಎಂದು ಆರೋಪಿಸಿದರು.

ಮಲ್ಲಿನಾಥ್ ಸೊಂತ್ ಎಂಬವರ ಮಗನೂ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು, ಅವನೂ ಕಾಂಗ್ರೆಸ್ ಕಾರ್ಯಕರ್ತ ಎಂದು ಆರೋಪಿಸಿದರು. ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪ್ತನಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ನಿಷೇಧಿತ 120 ಬಾಟಲ್ ಸಿಕ್ಕಿದೆ. ಇದರ ಸಾಗಾಟ ಮಾಡುತ್ತಿದ್ದರು. ಇದು ಲಕ್ಷಾಂತರ ರೂ.ಗೆ ಮಾರಾಟ ಆಗುತ್ತಿತ್ತು ಎಂಬ ಮಾಹಿತಿ ಇದೆ. ಬಿಜೆಪಿಯವರನ್ನು ಹಾಗೂ ಅಭ್ಯರ್ಥಿಗಳ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದ ಪ್ರಿಯಾಂಕ್ ಖರ್ಗೆಯವರ ಸುತ್ತಮುತ್ತ ಇರುವವರು ಎಂಥ ಚಿನ್ನದಂಥ ಶಿಷ್ಯಂದಿರು? ಎಂಥ ಚಿನ್ನದಂಥ ನಾಯಕರು ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ಎನ್.ರವಿಕುಮಾರ್ ಅವರು ಪ್ರಶ್ನಿಸಿದರು.
ಕಲಬುರ್ಗಿ ರಿಪಬ್ಲಿಕ್‍ನಲ್ಲಿ ಪೊಲೀಸ್ ರಕ್ಷಣೆ, ಕಣ್ಗಾವಲಿನಲ್ಲಿ ಡ್ರಗ್ಸ್ ಅವ್ಯವಹಾರ ನಡೆದಿದೆಯೇ? ಇದರ ಕುರಿತು ಗೃಹ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಪ್ರಿಯಾಂಕ್ ಖರ್ಗೆಯವರು ನೈತಿಕ ಹೊಣೆ ಹೊರಬೇಕು. ಕಲಬುರ್ಗಿ ಜಿಲ್ಲೆ 50 ವರ್ಷಗಳಿಂದ ಖರ್ಗೆಯವರ ಕುಟುಂಬದ ಕೈಯಲ್ಲೇ ಇದೆ. ಡ್ರಗ್ಸ್ ಶೂನ್ಯ ಪ್ರಮಾಣದಲ್ಲಿ ಇರಬೇಕಿತ್ತು. ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಗುಲ್ಬರ್ಗದಲ್ಲಿ ಎರಡ್ಮೂರು ತಿಂಗಳ ಹಿಂದೆ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಆಗಲೂ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ಕಣ್ಣಿ ಬಂಧನಕ್ಕೆ ಮೊದಲು ಪ್ರಿಯಾಂಕ್ ಖರ್ಗೆ- ಅಲ್ಲಿನ ಕಮೀಷನರ್ ಡ್ರಗ್ಸ್ ವಿರುದ್ಧ ಅಭಿಯಾನ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದೀಗ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ, ಗುಲ್ಬರ್ಗದ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಲ್ಲ. ಪ್ರಿಯಾಂಕ್ ಖರ್ಗೆ ಮತ್ತು ಅಲ್ಲಮಪ್ರಭು ಪಾಟೀಲರು ಇವರನ್ನು ರಕ್ಷಿಸಿದ ಕಾರಣ ಇವರನ್ನು ಕರ್ನಾಟಕದ ಪೊಲೀಸರು ಬಂಧಿಸಿರಲಿಕ್ಕಿಲ್ಲ ಎಂದು ಸಂಶಯ- ಅನುಮಾನ ತಮ್ಮದು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆ ಬಿಟ್ಟು ದೇಶದ ಎಲ್ಲ ವಿಚಾರಗಳನ್ನು ಮಾತನಾಡುತ್ತಾರೆ. ಅವರು ಮಹಾನ್ ಪಂಡಿತರು. ನರೇಂದ್ರ ಮೋದಿಜೀ, ವಿದೇಶಾಂಗ ಸಚಿವರ ಬಗ್ಗೆ ಮಾತನಾಡುತ್ತಾರೆ. ಅಮೆರಿಕ- ಭಾರತ, ಭಾರತ- ಚೀನಾ ಸಂಬಂಧ, ರಕ್ಷಣಾ ಇಲಾಖೆ ಬಗ್ಗೆ ಮಾತನಾಡುತ್ತಾರೆ. ಅವರು ಬಹುಶಃ ಭಾರತದ ಪ್ರಧಾನಿ ಆಗಬೇಕಿತ್ತೇನೋ. ನಿಷೇಧಿತ ಡ್ರಗ್ ಅನ್ನು ರಾಜಾರೋಷವಾಗಿ ಸಾಗಣೆ ಮಾಡುವುದಾದರೆ, ಇದು ಅಲ್ಲಿನ ಪೊಲೀಸರಿಗೆ ಗೊತ್ತಾಗದೆ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ ಎಂದು ಹೇಳಿದರು. ಪ್ರಿಯಾಂಕ್ ಖರ್ಗೆ ಶಿಷ್ಯರಾಗಿದ್ದರೆ ಸಾಕು; ಯಾವುದೇ ಡ್ರಗ್ಸ್ ಸಾಗಾಟ, ಅಪರಾಧ ಕುಕೃತ್ಯ ಮಾಡಿದರೆ ಬಚಾವಾಗಬಹುದೆಂದು ತಿಳಿದಂತಿದೆ ಎಂದರಲ್ಲದೆ, ಕಣ್ಣಿ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರನ್ನು ಅಭಿನಂದಿಸುವುದಾಗಿ ಹೇಳಿದರು.












Click it and Unblock the Notifications