ನಟ ವಿನೋದ್ ಆಳ್ವ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 16 : ಕೊಲೆ ಯತ್ನದ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರ ನಟ ವಿನೋದ್ ಆಳ್ವ ಅವರ ವಿರುದ್ಧ ನಡೆಯುತ್ತಿದ್ದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ವಿನೋದ್ ಆಳ್ವ ಅವರು ಜಾಮೀನು ಪಡೆದಿದ್ದಾರೆ.

ವಿನೋದ್ ಆಳ್ವ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ.ವೈಂಗಣಕರ ಅವರಿದ್ದ ಏಕಸದಸ್ಯ ಪೀಠ, ಪುತ್ತೂರು ಪೊಲೀಸರು ನಡೆಸುತ್ತಿರುವ ತನಿಖೆಗೆ 2 ವಾರಗಳ ತಡೆಯಾಜ್ಞೆ ನೀಡಿತು. ಆಕ್ಷೇಪಣೆ ಸಲ್ಲಿಸುವಂತೆ ದೂರುದಾರ ಸಚ್ಚಿದಾನಂದ ಮತ್ತು ಕೆ.ಉದಯ ಕುಮಾರ್ ಅವರಿಗೆ ನೋಟಿಸ್‌ ಜಾರಿ ಮಾಡಿತು. [ನಟ ವಿನೋದ್ ಆಳ್ವಾಗೆ ಜಾಮೀನು]

vinod alva

ಏನಿದು ಪ್ರಕರಣ : ತಮ್ಮ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಸಚ್ಚಿದಾನಂದ ಎಂಬುವರನ್ನು ಕೊಲೆ ಮಾಡಲು ವಿನೋದ್ ಆಳ್ವ ಯತ್ನಿಸಿದ್ದಾರೆ ಎಂಬುದು ಆರೋಪವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು 2015ರ ನವೆಂಬರ್ 16ರಂದು ಈಶ್ವರಮಂಗಲದಲ್ಲಿ ವಿನೋದ್‌ ಆಳ್ವ ಅವರನ್ನು ಬಂಧಿಸಿದ್ದರು.

ವಿನೋದ್ ಆಳ್ವ ಅವರು ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. 2015ರ ಡಿಸೆಂಬರ್ 1ರಂದು ತೀರ್ಪು ಪ್ರಕಟಿಸಿದ್ದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಪುತ್ತೂರು ಪೊಲೀಸರು ಈ ಪ್ರಕರಣದ ತನಿಖೆ ಮುಂದುವರೆಸಿದ್ದರು. ಇದಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka high court on Monday order interim stay for Puttur police probe against actor Vinod Alva in the case of conspiring to murder Sachidananda, manager of his financial affairs.
Please Wait while comments are loading...