ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 340 ಆಂಬುಲೆನ್ಸ ಸೇವೆ ರದ್ದು: ಆರೋಗ್ಯ ಇಲಾಖೆ ನೀಡಿದ ಕಾರಣವೇನು?

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ವಿವಿಧ ಕಾರಣಗಳಿಂದಾಗಿ '108' ಆಂಬುಲೆನ್ಸ್ ಸೇವೆಯಡಿ ಕಾರ್ಯ ನಿರ್ವಹಿಸುತ್ತಿರುವ 340 ಆಂಬುಲೆನ್ಸ್‌ಗಳ ಸೇವೆ ರದ್ದುಗೊಳಿಸಲು ಮುಂದಾಗಿದೆ. ಇಷ್ಟು ಬೃಹತ್ ಮಟ್ಟದಲ್ಲಿ ವಾಹನಗಳ ಸೇವೆ ಸ್ಥಗಿತಕ್ಕೆ ಕಾರಣ ಏನಿರಬಹುದು.

|
Google Oneindia Kannada News

ಬೆಂಗಳೂರು, ಜನವರಿ 30: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ವಿವಿಧ ಕಾರಣಗಳಿಂದಾಗಿ '108' ಆಂಬುಲೆನ್ಸ್ ಸೇವೆಯಡಿ ಕಾರ್ಯ ನಿರ್ವಹಿಸುತ್ತಿರುವ 340 ಆಂಬುಲೆನ್ಸ್‌ಗಳ ಸೇವೆ ರದ್ದುಗೊಳಿಸಲು ಮುಂದಾಗಿದೆ.

ರಾಜ್ಯದಲ್ಲಿ ತುಂಬಾ ಹಳೆಯದಾದ, ಕಳಪೆ ಹಂತಕ್ಕೆ ತಲುಪಿದ ಆಂಬುಲೆನ್ಸ್‌ಗಳ ಚಾಲನೆ ನಿಲ್ಲಲಿದೆ. ಈ ಹಿಂದಿನಿಂದಲೂ ಇರುವ ನಿಯಮಗಳಂತೆ ಈ ಭಾರಿಯು ಸಹ ನೂರಾರು ಆಂಬುಲೆನ್ಸ್‌ಗಳ ಸೇವೆ ಸ್ಥಗಿತಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಂಬುಲೆನ್ಸ್‌ ಸೇವೆ ವ್ಯತ್ಯಯ: 108ಗೆ ಕರೆ ಹೋಗ್ತಿಲ್ಲ, ತಾಂತ್ರಿಕ ಸಮಸ್ಯೆ ಒಪ್ಪಿಕೊಂಡ ಸಚಿವರು ಆಂಬುಲೆನ್ಸ್‌ ಸೇವೆ ವ್ಯತ್ಯಯ: 108ಗೆ ಕರೆ ಹೋಗ್ತಿಲ್ಲ, ತಾಂತ್ರಿಕ ಸಮಸ್ಯೆ ಒಪ್ಪಿಕೊಂಡ ಸಚಿವರು

ಒಂದು ಆಂಬುಲೆನ್ಸ್ ಸುಮಾರು 4 ಲಕ್ಷ ಕಿಲೋ ಮೀಟರ್ ಓಡಿದ್ದರೆ/ಸಂಚಾರ ಕ್ರಮಿಸಿದ್ದರೆ ಅಂತಹ ಆಂಬುಲೆನ್ಸ್‌ಗಳನ್ನು ನಿಯಮದಂತೆ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆಯಂತೆ ಬದಲಾಯಿಸಲಾಗುತ್ತದೆ. ಅದೇ ರೀತಿ ಈ ಬಾರಿಯು ನಿರ್ಧಾರ ಕೈಗೊಳ್ಳಲಾಗಿದೆ.

Karnataka Health dept take decision for poor quality 340 108 ambulance service ban

340 ಆಂಬುಲೆನ್ಸ್‌ಗಳ ಸೇವೆ ರದ್ದು ಬಗ್ಗೆ ಮಾತನಾಡಿದ ಇಲಾಖೆ ಉಪನಿರ್ದೇಶಕ (ಇಎಂಆರ್ಐ-108) ಡಾ,ಆರ್ ನಾರಾಯಣ್ ಅವರು, 2015-16ರಲ್ಲಿ ಕಳಪೆ ಸ್ಥಿತಿಗೆ ತಲುಪಿದ್ದ ಆಂಬುಲೆನ್ಸ್‌ಗಳನ್ನು ಬದಲಾವಣೆ ಮಾಡಲಾಗಿತ್ತು. ನಂತರ ಅವುಗಳ ಜಾಗದಲ್ಲಿ ಹೊಸ ಆಂಬುಲೆನ್ಸ್‌ಗಳು ಸೇವೆಗೆ ನಿಯೋಜನೆಗೊಂಡವು. ಸದ್ಯ ಇರುವ 340 ಆಂಬುಲೆನ್ಸ್‌ಗಳು ಸುಮಾರು ಆರು ವರ್ಷಗಳಷ್ಟು ಹಳೆಯದ್ದು ಎನ್ನಲಾಗಿದೆ. ಈ ಕಾರಣದಿಂದ ಅವುಗಳ ಸೇವೆ ಸ್ಥಗಿತಗೊಳಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.

ಸೇವೆಯಲ್ಲಿ ವ್ಯತ್ಯಯ ಇಲ್ಲ

ಇಷ್ಟು ದೊಡ್ಡ ಮಟ್ಟದಲ್ಲಿ ಆಂಬುಲೆನ್ಸ್‌ಳ ಸೇವೆ ರದ್ದಿನ ಬಳಿಕ, ತುರ್ತು ಪರಿಸ್ಥಿತಿಗಳಲ್ಲಿ ಸೇವೆ ಹೇಗೆ ಎಂಬ ಅನುಮಾನ ಮೂಡುವುದು ಸಹಜ. ಆದರೆ ಸರ್ಕಾರದ ಈ ನಿರ್ಧಾರದಿಂದ ಸೇವೆಗಳಲ್ಲಿ ಯಾವುದೇ ವ್ಯತ್ಯಯಗಳು ಕಂಡು ಬರುವುದಿಲ್ಲ ಎಂದು ನಾರಾಯಣ್ ಸ್ಪಷ್ಟಪಡಿಸಿದರು.

ಇಲಾಖೆಗೆ ಜಿವಿಕೆ-ಇಎಂಆರ್ಐ ಕಳೆದ 14 ವರ್ಷಗಳಿಂದ ರಾಜ್ಯದಲ್ಲಿ '108' ಆಂಬ್ಯುಲೆನ್ಸ್ ಸೇವೆಯನ್ನು ಸೇವೆಯನ್ನು ಒದಗಿಸುತ್ತಿದೆ. ಹೊಸ ಆಂಬುಲೆನ್ಸ್ ಖರೀದಿ ಕುರಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಹೊಸ ಆ್ಯಂಬುಲೆನ್ಸ್ ಗಳು ಸೇವೆ ಆರಂಭಿಸಲಿವೆ ಎಂದು ರಸ್ತೆಗಿಳಿಯಲಿವೆ ಎಂದು ಅವರು ಹೇಳಿದ್ದಾರೆ.

Karnataka Health dept take decision for poor quality 340 108 ambulance service ban

ಹಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಆಂಬ್ಯುಲೆನ್ಸ್‌ಗಳ ಸೇವೆ, ಗುಣಮಟ್ಟ ಬಗ್ಗೆ ನಿಯಮಗಳು ಮತ್ತು ಪರಿಶೀಲನೆಗಳು ಹೆಚ್ಚು ಕಟ್ಟುನಿಟ್ಟಾಗಿ ಇರಲಿಲ್ಲ. ಆದರೆ ಸದ್ಯ ಗುಣಮಟ್ಟದ ಸೇವೆ ಜನರಿಗೆ ನೀಡುವಲ್ಲಿ ಆರೋಗ್ಯ ಇಲಾಖೆ ರಾಜಿ ಮಾಡಿಕೊಳ್ಳುತ್ತಿಲ್ಲ. ಖಚಿತಪಡಿಸಿಕೊಳ್ಳಲು ಕಂಪನಿಗಳು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಪೂರೈಕೆದಾರರ ಜೊತೆ ಕೈ ಜೋಡಿಸಿರುವ ಸರ್ಕಾರ ಗುಣಮಟ್ಟದ

ವಾಹನಗಳನ್ನು ನೀಡುವ ಮಹತ್ತರ ಗುರಿ ಹೊಂದಿದೆ ಎಂದರು.

English summary
Karnataka health department take decision for poor quality 340 '108 ambulance' service in, New vehicle arrival in 3 to 4 month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X