HMPV: ಎಚ್​ಎಂಪಿವಿ ಟೆಸ್ಟ್‌ ಬಗ್ಗೆ ಆರೋಗ್ಯ ಇಲಾಖೆ ಮಹತ್ವದ ಮಾಹಿತಿ

ಭಾರತದಲ್ಲಿ ಮೊದಲ ಎಚ್​ಎಂಪಿವಿ ವೈರಸ್ ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿತ್ತು. ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಇಬ್ಬರು ಮಕ್ಕಳಿಗೆ ಎಚ್​ಎಂಪಿವಿ ಸೋಂಕು ದೃಢವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಫುಲ್‌ ಅಲರ್ಟ್‌ ಆಗಿದ್ದು, ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹೇಳಿತ್ತು. ಇದೀಗ ಮತ್ತೊಂದು ಮಹತ್ವದ ವಿಚಾರವನ್ನು ಆರೋಗ್ಯ ಇಲಾಖೆ ಹಂಚಿಕೊಂಡಿದೆ.

ಸದ್ಯ ಕರ್ನಾಟಕದಲ್ಲಿ ಎಚ್​ಎಂಪಿವಿ ವೈರಸ್ ಕೇಸ್‌ಗಳು ಪತ್ತೆಯಾದ ಕಾರಣ ಜನರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕೇ? ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆಯು ಕರ್ನಾಟಕದಲ್ಲಿ ಎಚ್​ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಹೇಳಿದೆ.

Karnataka Health Department Clarifies HMPV Virus Test Is Not Mandatory

ಆದರೆ, ಕೆಲವು ಖಾಸಗಿ ಆಸ್ಪತ್ರೆಯವರು ಎಚ್​ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹೀಗಾಗಿ ಎಲ್ಲ ಖಾಸಗಿ ಲ್ಯಾಬ್‌ಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವುದಾಗಿಯೂ ಆರೋಗ್ಯ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಕಂಡುಬರುವ ಜ್ವರ, ಕೆಮ್ಮು ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗುವವರು ಎಚ್​ಎಂಪಿವಿ ವೈರಸ್ ಟೆಸ್ಟ್ ಅನ್ನು ಮಾಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರಿನಲ್ಲಿ ಎಚ್​ಎಂಪಿವಿ ಕೇಸ್‌ಗಳು ಪತ್ತೆಯಾದ ಕಾರಣ ಕೆಲ ಆಸ್ಪತ್ರೆಗಳಲ್ಲಿ ಇದರ ತಪಾಸಣೆ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿರುವ ವಿಚಾರ ಕೂಡ ಇಲಾಖೆ ಗಮನಕ್ಕೆ ಬಂದಿದೆ. ಬರೋಬ್ಬರಿ 12000 ರೂಪಾಯಿವರೆಗೆ ದರ ನಿಗದಿ ಮಾಡಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದೆ ಎಂದು ಕೂಡ ಹೇಳಿದೆ. ಹೀಗಾಗಿ ಆರೋಗ್ಯ ಇಲಾಖೆಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಪಾಸಣೆ ಕಡ್ಡಾಯವಲ್ಲ ಎಂದು ಹೇಳಿದೆ. ಇದೇ ವಿಚಾರವಾಗಿ ಇಂದೇ ಆರೋಗ್ಯ ಇಲಾಖೆಯು ಪ್ರಕಟಣೆ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.

Karnataka Health Department Clarifies HMPV Virus Test Is Not Mandatory

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕೂಡ ಮಾತನಾಡಿ, ಎಚ್​ಎಂಪಿವಿ ಬಗ್ಗೆ ಆತಂಕ ಬೇಡ, ಜಾಗೃತಿಯಿರಲಿ. ಶೀತ, ಕೆಮ್ಮು, ಜ್ವರದ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗುವುದು ಸೇರಿದಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ. ವೈರಸ್‌ ವಿರುದ್ಧ ಹೋರಾಡಲು ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.

ಎಚ್​ಎಂಪಿವಿ ಹಳೆಯ ವೈರಸ್‌ ಆಗಿದ್ದು, ಇದು ಮಾರಣಾಂತಿಕವಲ್ಲ. ರಾಜ್ಯದಲ್ಲಿ ಎರಡು ಎಚ್​ಎಂಪಿವಿ ಪ್ರಕರಣಗಳು ಪತ್ತೆಯಾಗಿ ಸೋಂಕಿತರು ಗುಣಮುಖರಾಗಿದ್ದಾರೆ. ವೈರಸ್‌ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸಿದರೆ ಸಾಕು. ಸೋಂಕು ನಿಯಂತ್ರಣ, ಮುಂಜಾಗ್ರತಾ ಕ್ರಮಗಳು ಮತ್ತು ಮಾರ್ಗಸೂಚಿ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

Karnataka Health Department Clarifies HMPV Virus Test Is Not Mandatory

ಬೆಂಗಳೂರಿನಲ್ಲಿ 8 ತಿಂಗಳ ಮಗು ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್‌ಎಂಪಿವಿ) ಸೋಂಕಿಗೆ ಒಳಗಾಗಿರುವ ವರದಿಗಳಿವೆ. ಆದರೆ, ಇದು ಹೊಸ ವೈರಸ್‌ ಅಲ್ಲ. ಮಗು ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. 2001ರಿಂದ ಎಚ್‌ಎಂಪಿವಿ ವೈರಾಣು ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಗಾಬರಿಯಾಗುವ ಅವಶ್ಯಕತೆಯಿಲ್ಲ. ಆದರೂ, ಮುನ್ನೆಚ್ಚರಿಕೆಯಾಗಿ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+