ಮಧ್ಯಾಹ್ನ ಈ ಸಮಯಕ್ಕೆ ಹೆಚ್ಚು ಬಿಸಿಲು, ಹೊರಬಾರದಿರಿ ಎಂದು ಆರೋಗ್ಯ ಇಲಾಖೆ ಸೂಚನೆ
ಕರ್ನಾಟಕದಲ್ಲಿ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಬಿಸಿಲಿನ ಶಾಖದಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಆದರೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶುಕ್ರವಾರ ಹಲವಾರು ಪ್ರದೇಶಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಾದ್ಯಂತ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಎಚ್ಚರಿಕೆಯಿಂದರಲು ಸೂಚನೆ ನೀಡಿದೆ.
ಹೌದು.. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಶಾಖದ ಅಲೆಯಿಂದ ದೂರವಿರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಯನ್ನು ನೀಡಿದೆ. "ಕರ್ನಾಟಕದಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮುಂದುವರಿದಿರುವುದರಿಂದ, ಬೆಳಿಗ್ಗೆ 11 ರಿಂದ ಸಂಜೆ 4 ರ ನಡುವೆ ಹೊರಾಂಗಣ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ತಪ್ಪಿಸಬೇಕು" ಎಂದು ಆರೋಗ್ಯ ಆಯುಕ್ತ ರಂದೀಪ್ ಡಿ ಹೇಳಿದ್ದಾರೆ.

ಜೊತೆಗೆ ಆರೋಗ್ಯ ಇಲಾಖೆ ಹೆಚ್ಚುತ್ತಿರುವ ತಾಪಮಾನದಿಂದ ರಕ್ಷಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದೆ.
* ಬೆಳಿಗ್ಗೆ 11 ರಿಂದ ಸಂಜೆ 4 ರ ನಡುವೆ ತುರ್ತು ಸಂದರ್ಭ ಹೊರತಾಗಿ ಹೊರಹೋಗುವುದನ್ನು ತಪ್ಪಿಸುವುದು
* ಹೊರಹೋಗುವಾಗ ಛತ್ರಿ, ಕ್ಯಾಪ್, ದಪ್ಪಟ್ಟವನ್ನು ಬಳಕೆ
* ಬೇಸಿಕೆಯಲ್ಲಿ ಲಭ್ಯವಿರುವ ಹಣ್ಣುಗಳನ್ನು ಸೇವಿಸಿ
* ಬಾಯಾರಿಕೆ ಆಗದಿದ್ದರೂ ಸಾಕಷ್ಟು ನೀರು ಕುಡಿಯಿರಿ
* ಮಜ್ಜಿಗೆ, ಎಳನೀರು, ರಾಗಿ ಗಂಜಿ, ಜ್ಯೂಸ್‌ನಂತರ ಪಾನೀಯಗಳನ್ನು ಕುಡಿಯಿರಿ
* ಕಾಟನ್ ಬಟ್ಟೆಗಳನ್ನು ಧರಿಸಿದುವುದು ಉತ್ತಮ

* ಸೌತೇಕಾಯಿ, ಕಲ್ಲಂಗಡಿ, ಸಿಟ್ರಸ್ ಹಣ್ಣುಗಳು ಸೇವಿಸಿ
* ಗಟ್ಟಿ ಪದಾರ್ಥಗಳು, ಜಂಕ್ ಫುಡ್ ಅನ್ನು ತಪ್ಪಿಸಿ
* ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಕೆಲ ಸಮಯ ವ್ಯಾಯಾಮಕ್ಕಾಗಿ ಮೀಸಲಿಡಿ
* ಈರುಳ್ಳಿ, ಪುದೀನ, ಮೊಸರು ನಿಮ್ಮ ಊಟದಲ್ಲಿರಲಿ
* ಮಲಗುವಾಗ ಬೆಚ್ಚಗಿನ ಹೊದಿಕೆಯಿಂದ ನಿಮ್ಮ ನಿದ್ದೆ ಹಾಳಾಗಬಹುದು
ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೀಟ್ ವೇವ್‌ನಿಂದಾಗಿ 11 ಜನರು ಸಾವನ್ನಪ್ಪಿದರು. ಗಂಟೆಗಳ ಕಾಲ ಬಿಸಿಲಿನಲ್ಲಿ ನಿಂತು ಶಾಖದ ಹೊಡೆತದಿಂದ 11 ಜನ ಸಾವನ್ನಪ್ಪಿ, ಹಲವು ಜನ ಅಸ್ವಸ್ಥಗೊಂಡಿದ್ದರು.

ರಾಯಚೂರು, ಬೆಂಗಳೂರಿನ ಕೆಲವು ಭಾಗಗಳು ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ಪಾದರಸ ಏರಿಕೆಯಾಗಿದೆ. ಮೇ 10 ರಂದು ವಿಧಾನಸಭಾ ಚುನಾವಣೆ ಇರುವುದರಿಂದ ರಾಜಕೀಯ ರ್ಯಾಲಿ ಸಮಾವೇಶಗಳು ಹೆಚ್ಚಾಗಿವೆ. ಆದರೂ ಶನಿವಾರ ಭಾರಿ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರದಿಂದ ಭಾನುವಾರದವರೆಗೆ ರಾಜ್ಯದ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿತ್ತು. ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗುಡುಗು, ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಸಹಿತ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications