ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಡ್ರೋಜನ್ ಉತ್ಪಾದನೆ: ಹೂಡಿಕೆದಾರರ ಜತೆ ರಾಜ್ಯ ಒಪ್ಪಂದ

|
Google Oneindia Kannada News

ಬೆಂಗಳೂರು, ಜೂನ್ 20: ಕರ್ನಾಟಕ ರಾಜ್ಯ ಕೈಗಾರಿಕಾ ಇಲಾಖೆಯು ಹೈಡ್ರೋಜನ್ (ಜಲಜನಕ) ಉತ್ಪಾದನೆಗೆ ಸಂಬಂಧಿಸಿದಂತೆ ಇತ್ತಿಚೆಗೆ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ. ಹಸಿರು ಉಪಕ್ರಮಗಳಿಗೆ ಪೂರಕವಾದ ಈ ನಿರ್ಧಾರಗಳಿಂದ ಇಂಧನ ಭದ್ರತೆ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಒಂದು ತಿಂಗಳಲ್ಲಿ ಎಸಿಎಂಇ ಕ್ಲಿನ್ ಟೆಕ್ ಸಲೂಷನ್ ಪ್ರೈವೇಟ್ ಲಿಮಿಟೆಡ್ ರೆನ್ಯೂ ಪವರ್ ಕಂಪನಿಗಳು ಕರ್ನಾಟಕದೊಂದಿಗೆ 52ಸಾವಿರ ಕೋಟಿ ಮತ್ತು 50 ಸಾವಿರ ಕೋಟಿ ರೂ. ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳು ಕಲ್ಲಿದ್ದಲು ಬಿಕ್ಕಟ್ಟು ವಿಚಾರದಲ್ಲಿ ರಾಜ್ಯಕ್ಕೆ ವರದಾನವಾಗಲಿವೆ ಎಂದು ರಾಜ್ಯ ಕೈಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಪ್ಪಂದ ಕುರಿತು ಮಾಹಿತಿ ನೀಡಿರುವ ಕೈಗಾರಿಕೆ ಮತ್ತುವಾಣಿಜ್ಯ ಇಲಾಖೆ ನಿರ್ದೇಶಕ ಗುಂಜನ್ ಕೃಷ್ಣ, "ಮಂಗಳೂರಿನಲ್ಲಿರುವ ಹೈಡ್ರೋಜನ್ ಕ್ಲಸ್ಟರ್‌ನಲ್ಲಿ ಅಧಿಕ ಉತ್ಪಾದನೆ ಮಾಡಿ ನಂತರ ಅದನ್ನು ಹೊಸ ಇಂಧನವಾದ ಅಮೋನಿಯಾಗಿ ಆಗಿ ಪರಿವರ್ತಿಸುವ ಚಿಂತನೆಯಲ್ಲಿದ್ದೇವೆ. ಇಂಧನ ಭದ್ರತೆ ಇಲ್ಲದ ಅನೇಕ ರಾಷ್ಟ್ರಗಳು ಇಂತಹ ಅಗತ್ಯ ಹೈಡ್ರೋಜನ್ ಉತ್ಪಾದಿಸುವಲ್ಲಿ ಹಿಂದೆ ಬಿದ್ದಿವೆ" ಎಂದು ತಿಳಿಸಿದ್ದಾರೆ.

Karnataka Has Signed Two Agreements on Energy Security

ರಾಜ್ಯದಲ್ಲಿ ಸದ್ಯ ಅಗತ್ಯ ಹೂಡಿಕೆ ಸಾಧ್ಯವಾಗಿದ್ದು, ಹಾಲಿ ಮಂಗಳೂರು ಜತೆಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ಎರಡು ಹೈಡ್ರೋಜನ್ ಉತ್ಪಾದನಾ ಘಟಕ ಸ್ಥಾಪನೆ ಆದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಈ ಸಂಬಂಧ ಎರಡು ಕಂಪನಿಗಳು ಆಸಕ್ತಿ ವಹಿಸಿವೆ.

ಭವಿಷ್ಯದಲ್ಲಿ ಅಗತ್ಯವಾಗಿರುವ ಹಸಿರು ಇಂಧನಗಳ ಪೂರೈಕೆಗಾಗಿ ಈ ಘಟಕ ಮಹತ್ವದ ಪಾತ್ರ ವಹಿಸಲಿವೆ. ಈ ಎಲ್ಲ ಕೈಗಾರಿಕಾ ಬೆಳವಣಿಗೆಗಳಿಂದ ಬೇರೆಡೆಗೆ ಹಸಿರು ಇಂಧನ ರಫ್ತು ಕುರಿತು ಚರ್ಚೆಗಳು ಆರಂಭವಾಗಿವೆ.

ಸಂಪನ್ಮೂಲ ಬಳಕೆ: ಈ ಹಿಂದೆ ಏಪ್ರಿಲ್‌ನಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಉಂಟಾದ ವೇಳೆ ಸರ್ಕಾರ ರಾಜ್ಯದಲ್ಲಿನ ಸಂಪನ್ಮೂಲ, ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು ಎಂದು ನಿರ್ಧರಿಸಿತ್ತು. ಇದೀಗ ಎರಡು ಕಂಪನಿಗಳು ರಾಜ್ಯದಲ್ಲಿ ಹೂಡಿಕೆಗೆ ಸಿದ್ಧವಾಗಿವೆ.

ಇಂಧನ ಇಲಾಖೆಯ ಅಂಕಿ ಅಂಶ ಪ್ರಕಾರ, ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನಗಳ ಪೈಕಿ ವಿದ್ಯುತ್ ಶೇ.52ರಷ್ಟಿದೆ. ಉಷ್ಣ ಶೇ.34, ಜಲ ಶೇ.12 ಮತ್ತು ಪರಮಾಣು ಶೇ.3ರಷ್ಟಿದೆ.

ನವೀಕರಿಸಬಹುದಾದ ಇಂಧನ: ಇನ್ಸ್‌ಸ್ಟಿಟ್ಯೂಟ್ ಆಫ್ ಎನರ್ಜಿ ಎಕನಾಮಿಕ್ಸ್ ಆಂಡ್ ಫೈನಾನ್ಷಿಯಲ್ ಅನಾಲಿಸಿಸ್ ಪ್ರಕಾರ, ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮೇಲೆ 2020-21ರಲ್ಲಿ ಹೂಡಿಕೆ ಪ್ರಮಾಣ 14.5 ಶತಕೋಟಿ ಯು.ಎಸ್ ಡಾಲರ್ ಇದೆ.

Karnataka Has Signed Two Agreements on Energy Security

ಕರ್ನಾಟಕವು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಂಪನಿಗಳ ಜತೆ ಕೆಲವು ಒಪ್ಪಂದ ಮಾಡಿಕೊಂಡಿದೆ. ದೇಶದ ಖ್ಯಾತ ಆಟೊಮೇಟಿವ್ ಬ್ಯಾಟರಿ ತಯಾರಕ ಎಕ್ಸೈಡ್ ಕಂಪನಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸುಧಾರಿತ ಸೆಲ್ ಕೆಮೆಸ್ಟ್ರಿ ತಂತ್ರಜ್ಞಾನ ಸಂಬಂಧಿ ಕಾರ್ಖಾನೆ ಸ್ಥಾಪಿಸಲು 6000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಅಲ್ಲದೇ ರಾಜ್ಯ ಸರ್ಕಾರದ ಉನ್ನತ ಮಟ್ಟದ ಕ್ಲಿಯರನ್ಸ್ ಸಮಿತಿ ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಅಗತ್ಯವಾದ ಲಿಥಿಯಂ- ಐಯಾನ ಬ್ಯಾಟರಿ ಉತ್ಪಾದನಾ ಮೂರು ಪ್ರಸ್ತಾವಗಳಿಗೆ ಒಪ್ಪಿಗೆ ಸೂಚಿಸುವ ಮೂಲಕ 22,419ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ.

English summary
karnataka's indistries department has signed two contracts for hydrogen production in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X