ಸರ್ಕಾರದಿಂದ ಗುಡ್ ನ್ಯೂಸ್: ಖಾಸಗಿ ಚಾಲಕರಿಗೂ ಬಂಪರ್, ದಶಕದ ಕನಸು ನನಸು
ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ರಾಜ್ಯ ಸರ್ಕಾರವು ದೇಶಕದಲ್ಲೇ ಬೇರಾವ ರಾಜ್ಯಗಳು ಮಾಡದ ಸಾಹಸ ಮಾಡಿದೆ. ರಾಜ್ಯ ಖಾಸಗಿ ವಾಹನ ಚಾಲಕರಿಗೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಮೂಸೂದೆ ಅಂಗೀಕಾರ ಮಾಡಿದೆ. ಈ ಮೂಲಕ ಚಾಲಕರಿಗೆ ಆರ್ಥಿಕ ಸೇರಿದಂತೆ ವಿವಿಧ ಸವಲತ್ತು ನೀಡಲು ಮುಂದಾಗಿದೆ. ಈ ಮೂಲಕ ಹಲವು ವರ್ಷಗಳ ಖಾಸಗಿ ಚಾಲಕರ ಬೇಡಿಕೆಯೊಂದು ಈಡೇರಿದಂತಾಗಿದೆ.
ಹೌದು, ಬೆಳಗಾವಿ ಚಳಿಗಾಲ ಅಧಿವೇಶನ ಮುಕ್ತಾಯಗೊಂಡಿದೆ. ಈ ವೇಳೆ ಸರ್ಕಾರ ಬಿಲ್ ಪಾಸ್ ಮಾಡಿದೆ. ಚಾಲಕ ಅಭಿವೃದ್ಧಿ ನಿಗಮ ಬೇಕು ಎಂಬ ಬೇಡಿಕೆ ಇತ್ತು. ಅದೀಗ ಈಡೇರಿದಂತಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಖಾಸಗಿ ಚಾಲಕರಿಗೂ ಆರೋಗ್ಯ ಕಾರ್ಡ್ ನೀಡಲು ನಿರ್ಧರಿಸಿದೆ. ಇಂತಹ ಸೌಲಭ್ಯ ಖಾಸಗಿ ಚಾಲಕರಿಗೆ ಸರ್ಕಾರದಿಂದ ಕಲ್ಪಿಸುತ್ತಿರುವುದು ದೇಶದಲ್ಲೇ ಕರ್ನಾಟಕ ಮೊದಲು ಎಂದು 'ಟಿವಿ ನೈನ್ ವರದಿ' ಮಾಡಿದೆ.

ಈ ಚಾಲಕರ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿತ ಚಾಲಕರಿಗೆ ಒಂದು ವೇಳೆ ಅಪಘಾತದಲ್ಲಿ ಮೃತರಾದರೆ 05 ಲಕ್ಷ ರೂಪಾಯಿ ನೀಡಲಾಗುತ್ತದೆ. ಒಂದು ವೇಳೆ ಚಾಲಕರಿಗೆ ಸಹಜ ಸಾವಾದರೂ ಸಹಿತ 05 ಲಕ್ಷ ರೂಪಾಯಿ ಅವರ ಕುಟುಂಬಸ್ಥರಿಗೆ ನೀಡಲು ಸರ್ಕಾರ ಮುಂದಾಗಿದೆ. ಈ ಹಿಂದೆ ಅಪಘಾತಕ್ಕೆ ಸಾವಾದರೆ ಮಾತ್ರವೇ ನೀಡಲಾಗುತ್ತಿತ್ತು. ಈ ಬಿಲ್ ಅಂಗೀಕಾರದ ಬಳಿಕ ನಿಯಮ ಬದಲಾಗಿದೆ. ಇದು ಚಾಲಕರಿಗೆ ಹೆಚ್ಚು ಪ್ರಯೋಜನ ನೀಡಲಿದೆ.
ಇಷ್ಟು ಮಾತ್ರವಲ್ಲದೇ, ನಿಗಮ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡ ಖಾಸಗಿ ವಾಹನ ಚಾಲಕರಿಗೆ ಪ್ರವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಐದು ಲಕ್ಷದವರೆಗೆ ನಗದು ರಹಿತ ವಹೀವಾಟು ಸೌಲಭ್ಯ ಒದಗಿಸುತ್ತದೆ. 50-01 ಲಕ್ಷ ರೂಪಾಯಿವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಕೊಡಿಸುವ ಸೌಲಭ್ಯ ಸಿಗುತ್ತದೆ ಎಂದು ವರದಿ ಆಗಿದೆ.
ಯಾರಿಗೆಲ್ಲ ಈ ಸೌಲಭ್ಯ ಸಿಗುತ್ತದೆ?
ಕೇವಲ ಪುರುಷರಿಗೆ ಮಾತ್ರವಲ್ಲದೇ, ಮಹಿಳಾ ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯಗಳು ಈ ನಿಗಮ ಮಂಡಳಿಯಿಂದ ಭವಿಷ್ಯದಲ್ಲಿ ಸಿಗಲಿವೆ ಎಂದು ರಾಜ್ಯ ಸರ್ಕಾರ ಭರವಸೆ ಮೂಡಿಸಿದೆ. ಆಟೋ ಚಾಲಕರು, ಕ್ಯಾಬ್ ಚಾಲಕರು, ಖಾಸಗಿ ಬಸ್ ಚಾಲಕರು, ಮೆಕಾನಿಕ್, ಖಾಸಗಿ ಬಸ್ ಕಂಡಕ್ಟರ್, ಪೇಂಟರ್, ವೆಲ್ಡರ್ಸ್ ಸೇರಿದಂತೆ ಈ ಚಾಲನಾ ವೃತ್ತಿಯ ಸುತ್ತಮುತ್ತಲಿನ ವರ್ಗದವರಿಗೆ ಸೌಲಭ್ಯ ಗಿಸುತ್ತದೆ. ಯೋಜನೆ ಲಾಭ ಪಡೆಯಲು ಅವರು ನಿಗಮ ಮಂಡಳಿಯಲ್ಲಿ ನೋಂದಣೆ ಆಗಿರುವುದು ಕಡ್ಡಾಯವಾಗಿದೆ.
ಮಹಿಳಾ ಚಾಲಕಿಯರ ಹೆರಿಗೆ ಭತ್ಯೆ 10000 ರೂಪಾಯಿ. ಒಂದು ವೇಳೆ ಅಪಘಾತದಲ್ಲಿ ಮಹಿಳಾ ಡ್ರೈವರ್ಸ್ ಮೃತಪಟ್ಟರವೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಗರಿಷ್ಠ 25,000ವರೆಗೆ ಆರ್ಥಿಕ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ದಿಟ್ಟ ನಿರ್ಧಾರದಿಂದ ಖಾಸಗಿ ಚಾಲಕರ ಕನಸು ನನಸಾಗಿದೆ.












Click it and Unblock the Notifications