ಅಬಕಾರಿ ಟೆಂಡರ್ ಅವ್ಯವಹಾರ: ಕಾಂಗ್ರೆಸ್‌-ಬಿಜೆಪಿ ಜಟಾಪಟಿ, ಬಿಜೆಪಿ ನೀಡಿದ ಉತ್ತರ ಇದು

ಕಾಂಗ್ರೆಸ್‌ನವರು ಅಬಕಾರಿ ಟೆಂಡರ್‌ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿದ್ದು, ಸರ್ಕಾರ ಆ ಬಗ್ಗೆ ತನಿಖೆ ನಡೆಸಲು ಬದ್ಧವಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಉತ್ತರ ಕನ್ನಡ ಫೆಬ್ರವರಿ 28: ಕಾಂಗ್ರೆಸ್‌ನವರು ಅಬಕಾರಿ ಟೆಂಡರ್‌ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದ್ದು, ಸರ್ಕಾರ ಆ ಬಗ್ಗೆ ತನಿಖೆ ನಡೆಸಲು ಬದ್ಧವಿದೆ. ಅದಕ್ಕು ಮೊದಲು ವಿಪಕ್ಷದವರು ಹಗರಣ ಬಗ್ಗೆ ವಿವರ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಮುಖ್ಯಮಂತ್ರಿಗಳು ಮಂಗಳವಾರ ಹಲವು ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು.

Karnataka Govt ready for investigation to congress allegation about Excise Tender scam

ರಾಜ್ಯದ ಅಬಕಾರಿ ಇಲಾಖೆಯ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿಯವರು, ಕಾಂಗ್ರೆಸ್‌ನವರು ಆರೋಪದ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ವಿವರಗಳನ್ನು ನೀಡದೇ ಆರೋಪ ಮಾಡಿದರೆ ಪ್ರಯೋಜನವಿಲ್ಲ. ನಾವು ಹಗರಣ ಬಗ್ಗೆ ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದರು.

ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರ ಮೇಲೆಯೇ ಸಾಕಷ್ಟು ಆರೋಪಗಳಿವೆ ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ಮೊದಲು ಅವರ ಆ ಬಗ್ಗೆ ಮಾಹಿತಿ ನೀಡಬೇಕು. ಸದ್ಯಕ್ಕೆ ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದು ತಿರುಗೇಟು ನೀಡಿದರು.

Karnataka Govt ready for investigation to congress allegation about Excise Tender scam

ವೇತನ ಪರಿಷ್ಕರಣೆ: ಮಧ್ಯಂತರ ವರದಿ ಕೇಳಿದ್ದೇವೆ

ಮಂಗಳವಾರ ಸಂಜೆಯೇ ಏಳನೇ ವೇತನ ಆಯೋಗ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು. ರಾಜ್ಯ ಸರ್ಕಾರಿ ನೌಕರರೆಲ್ಲರು ನಮ್ಮವರೆ ಆಗಿದ್ದಾರೆ. ಅವರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬೇಡಿಕೆ ಇದೆ. ಆಯೋಗದ ಸಂಪರ್ಕದಲ್ಲಿ ರಾಜ್ಯ ಸರ್ಕಾರ ಇದೆ. ಕೂಡಲೇ ಮಧ್ಯಂತರ ವರದಿ ನೀಡಲು ಕೇಳಿದ್ದೇವೆ ಎಂದು ಹೇಳಿದರು.

ವಿಧಾನಸಭೆಯಲ್ಲಿಯೂ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ. ವೇತನ ಆಯೋಗ ರಚನೆಯಾದ ನಂತರ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+