ಕರ್ನಾಟಕ: 21 ಐಎಎಸ್ ಅಧಿಕಾರಿಗಳ ವರ್ಗಾವಣೆ, ಮೈಸೂರಿಗೆ ಹೊಸ ಜಿಲ್ಲಾಧಿಕಾರಿ

ಬೆಂಗಳೂರು, ಅ.21: ಆಡಳಿತ ಯಂತ್ರ ಚುರುಕುಗೊಳಿಸಲು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರವು ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ. 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದ್ದು, 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಐವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಮುಖ್ಯವಾಗಿ ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಮೈಸೂರು ಜಿಲ್ಲಾಧಿಕಾರಿ ಬದಲಾವಣೆಯಾಗಿದೆ. ಅನಿಲ್ ಕುಮಾರ್ ಟಿ.ಕೆ, ಡಾ. ಪ್ರಸಾದ್ ಎನ್.ವಿ, ಜಯರಾಂ ಎನ್, ಡಾ‌. ಕುಮಾರ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ವರ್ಗಾವಣೆಯಾಗಿದ್ದು, ಡಾ. ರಾಜೇಂದ್ರ ಕೆ.ವಿ ಹೊಸ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿ.ಪಂ. ಸಿಇಒ ಆಗಿರುವ ಡಾ‌. ಕುಮಾರ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.

Karnataka Govt Orders Transfer Of 21 IAS Officers

ಅಧಿಕಾರಿ- ಎಲ್ಲಿಗೆ ವರ್ಗಾವಣೆ
ಡಾ. ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಶ್ರೀವಿದ್ಯಾ ಪಿ.ಐ - ಸಿಇಓ,ಇ-ಆಡಳಿತ ಕೇಂದ್ರ ಬೆಂಗಳೂರು
ರಮೇಶ್ ಡಿ.ಎಸ್- ಜಿಲ್ಲಾಧಿಕಾರಿ, ಚಾಮರಾಜನಗರ
ಡಾ. ಗೋಪಾಲಕೃಷ್ಣ ಹೆಚ್.ಎನ್- ಜಿಲ್ಲಾಧಿಕಾರಿ, ಮಂಡ್ಯ
ಜಾನಕಿ ಕೆ.ಎಂ- ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ
ಡಾ. ರಾಜೇಂದ್ರ ಕೆ.ವಿ- ದಕ್ಷಿಣ ಕನ್ನಡದಿಂದ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಟ್ರಾನ್ಸ್​ಫರ್ ಮಾಡಲಾಗಿದೆ.
ಅಶ್ವಥಿ ಎಸ್- ಆಯುಕ್ತೆ, ಪಶು ಸಂಗೋಪನಾ ಇಲಾಖೆ
ಮುಲ್ಲೈ ಮುಹಿಲನ್ - ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಇವರು ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.
ಪ್ರಭುಲಿಂಗ್ ಕವಳಿಕಟ್ಟಿ-ಜಿಲ್ಲಾಧಿಕಾರಿ, ಉತ್ತರ ಕನ್ನಡ
ಎಂ.ಎಸ್. ದಿವಾಕರ-ಜಿ.ಪಂ. ಸಿಇಒ, ಚಿತ್ರದುರ್ಗ
ದಿವ್ಯಪ್ರಭು ಜಿ.ಆರ್.ಜೆ.- ಜಿಲ್ಲಾಧಿಕಾರಿ, ಚಿತ್ರದುರ್ಗ
ನಳಿನಿ ಅತುಲ್- ಅಧ್ಯಕ್ಷ, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ
ರಘುನಂದನ್ ಮೂರ್ತಿ- ಜಿಲ್ಲಾಧಿಕಾರಿ, ಹಾವೇರಿ
ಭನ್ವರ್ ಸಿಂಗ್ ಮೀನಾ- ನಿಯಂತ್ರಕ, ಕೆಪಿಎಸ್ ಸಿ
ಪ್ರಕಾಶ್ ಜಿ.ಟಿ.- ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಡಾ. ಆಕಾಶ್ ಎಸ್.- ಸಿಇಓ, ಜಿ.ಪಂ. ಕೊಡಗು
ಕಪಿಲ್ ಮೋಹನ್- ಎಸಿಎಸ್, ಪ್ರವಾಸೋದ್ಯಮ ಇಲಾಖೆ

Karnataka Govt Orders Transfer Of 21 IAS Officers

ಅನಿಲ್ ಕುಮಾರ್ ಟಿ.ಕೆ.- ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ( ಹೆಚ್ಚುವರಿ ಹೊಣೆ) ಅನಿಲ್ ಕುಮಾರ್ ಹಾಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಡಾ. ಪ್ರಸಾದ್ ಎನ್.ವಿ.- ಕಾರ್ಯದರ್ಶಿ, ಕಾರ್ಮಿಕ ಇಲಾಖೆ (ಹೆಚ್ಚುವರಿ ಹೊಣೆ) ಪ್ರಸಾದ್​ ಹಾಲಿ ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿದ್ದಾರೆ.
ಜಯರಾಂ ಎನ್. - ಕಾರ್ಯದರ್ಶಿ, ಕಂದಾಯ ಇಲಾಖೆ (ಹೆಚ್ಚುವರಿ ಹೊಣೆ) ಜಯರಾಂ ಹಾಲಿ ಜಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರಾಗಿದ್ದಾರೆ.
ಡಾ‌. ಕುಮಾರ- ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ( ಹೆಚ್ಚುವರಿ ಹೊಣೆ) ಡಾ‌. ಕುಮಾರ ಹಾಲಿ ದಕ್ಷಿಣ ಕನ್ನಡ ಜಿ.ಪಂ. ಸಿಇಓ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+