ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರ ರಾಜ್ಯದವರ ಕ್ವಾರಂಟೈನ್ ನಿಯಮ ಮತ್ತೆ ಬದಲಾವಣೆ

|
Google Oneindia Kannada News

ಬೆಂಗಳೂರು, ಜೂನ್ 25 : ಕರ್ನಾಟಕ ಸರ್ಕಾರ ಹೊರ ರಾಜ್ಯದಿಂದ ಬರುವವರಿಗೆ ಇದ್ದ ಕ್ವಾರಂಟೈನ್ ನಿಯಮಗಳನ್ನು ಬದಲಾವಣೆ ಮಾಡಿದೆ. ಇನ್ನು ಮುಂದೆ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಆದರೆ ಮಹಾರಾಷ್ಟ್ರದಿಂದ ಬರುವವರಿಗೆ ಇದು ಅನ್ವಯವಾಗುವುದಿಲ್ಲ.

Recommended Video

SSLC Exam : ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ?| Oneindia Kannada

ಗುರುವಾರ ಕಂದಾಯ ಸಚಿವ ಆರ್. ಅಶೋಕ ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದರು. "ಕ್ವಾರಂಟೈನ್ ಮಾರ್ಗಸೂಚಿಯನ್ನು ಸರ್ಕಾರ ಬದಲಾಯಿಸಿದೆ. ಮಹಾರಾಷ್ಟ್ರದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ" ಎಂದು ಹೇಳಿದರು.

ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ! ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ!

ಸರ್ಕಾರದ ಹೊಸ ಮಾರ್ಗಸೂಚಿಯ ಅನ್ವಯ ತಮಿಳುನಾಡು ಮತ್ತು ದೆಹಲಿಯಿಂದ ರಾಜ್ಯಕ್ಕೆ ಆಗಮಿಸುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಇರುವುದಿಲ್ಲ. ಅವರು 14 ದಿನದ ಹೋಂ ಕ್ವಾರಂಟೈನ್‌ನಲ್ಲಿರಬೇಕು.

ಕೊರೊನಾ ಭೀತಿ: ಬಿಜೆಪಿ ಶಾಸಕ ಹಾಗೂ ಕುಟುಂಬಕ್ಕೆ ಕ್ವಾರಂಟೈನ್ ಕೊರೊನಾ ಭೀತಿ: ಬಿಜೆಪಿ ಶಾಸಕ ಹಾಗೂ ಕುಟುಂಬಕ್ಕೆ ಕ್ವಾರಂಟೈನ್

 Karnataka Govt New Quarantine Rules For Those Returning From TN and Delhi

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರು 7 ದಿನದ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನದ ಹೋಂ ಕ್ವಾರಂಟೈನ್‌ನಲ್ಲಿರಬೇಕು ಎಂದು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಯಾವುದೇ ರಾಜ್ಯದಿಂದ ಬಂದರೂ ಕ್ವಾರಂಟೈನ್‌ನಲ್ಲಿರಬೇಕು.

ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ

ಬೆಂಗಳೂರು ನಗರದಲ್ಲಿ ಕೋವಿಡ್19 ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು ಕ್ವಾರಂಟೈನ್ ಮಾಡಲು ಸ್ಥಳಾವಕಾಶದ ಕೊರತೆ ಎದುರಾಗಿದೆ. ಆದ್ದರಿಂದ, ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಬದಲಾವಣೆ ಮಾಡಿದೆ.

ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಕಟ್ಟುನಿಟ್ಟಿನ ಗೃಹ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು. ಸೂಕ್ತ ಚಿಕಿತ್ಸೆ ಸೇರಿದಂತೆ ಎಲ್ಲ ಮಾರ್ಗಸೂಚಿಗಳ ಪಾಲನೆಗೆ ಸೂಚನೆ ನೀಡಲಾಗಿದೆ.

English summary
Karnataka government has decided to change quarantine rule for those returning from Tamil Nadu and New Delhi. Only home quarantine for 14 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X