ಅನಿಮೇಷನ್ ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರದಿಂದ ಹೊಸ ನೀತಿ
ಬೆಂಗಳೂರು, ಆಗಸ್ಟ್. 28 : ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಅನಿಮೇಷನ್ ಮತ್ತು ಡಿಜಿಟಲ್ ಉದ್ಯೋಗದ ಬೇಡಿಕೆಗೆ ಸ್ಪಂದಿಸಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ 'ಕೆಎವಿಜಿಸಿ' ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ.
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ 'ಅನಿಮೇಷನ್, ದೃಶ್ಯ ಮಾಧ್ಯಮ, ಡಿಜಿಟಲ್ ಕ್ರೀಡೆ ಹಾಗೂ ಕಾಮಿಕ್ಸ್ ನೀತಿ' (ಕೆಎವಿಜಿಸಿ)ಯನ್ನು ಜಾರಿಗೆ ತಂದಿದೆ. ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಹದಿನೈದು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕೆಎವಿಜಿಸಿ ನೀತಿಯು ಕೌಶಲ್ಯಾಭಿವೃದ್ಧಿ, ಮೂಲಸೌಕರ್ಯಗಳ ಬೆಳವಣಿಗೆ, ವ್ಯವಸ್ಥೆಯ ಸುಧಾರಣೆ, ಹಣಕಾಸು ಬೆಂಬಲ, ಪ್ರೋತ್ಸಾಹಧನ ಮುಂತಾದ ಅಂಶಗಳನ್ನು ಒಳಗೊಂಡಿದೆ.
To boost the creative ecosystem & growing animations sector in Karnataka, our govt launches first of its kind KAVGC policy @PriyankKharge pic.twitter.com/YLdXC1njrM
— CM of Karnataka (@CMofKarnataka) August 27, 2017
ಈ ನೀತಿಯ ಪ್ರಮುಖ ಅಂಶಗಳು
* ಅನಿಮೇಷನ್ ಮತ್ತು ಇತರ ಕಾಮಿಕ್ಸ್ ಸಿನಿಮಾಗಳಿಗೆ ನಿರ್ಮಾಣ ವೆಚ್ಚ ನೀಡಿ, ಪ್ರೋತ್ಸಾಹಿಸುವುದು.
* ಬೆಂಗಳೂರಿನಲ್ಲಿ ಅನಿಮೇಷನ್ ಗಾಗಿ ಸೆಂಟರ್ ಫಾರ್ ಎಕ್ಸಲೆನ್ಸ್ ಸ್ಥಾಪನೆ
* ಅನಿಮೇಷನ್ ತರಬೇತಿ ನೀಡುವ 120 ಸೆಂಟರ್‌ಗಳ ಸ್ಥಾಪನೆ












Click it and Unblock the Notifications