Breaking: ಕರ್ನಾಟಕದ ಸಾಹಿತಿ, ಕಲಾವಿದರಿಗೆ 2000 ರೂಪಾಯಿ ಮಾಶಾಸನ

ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಹಿರಿಯ ಸಾಹಿತಿಗಳು ಮತ್ತು ಕಲಾವಿದರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಬಂಪರ್ ಆಫರ್ ಕೊಟ್ಟಿದೆ.
ರಾಜ್ಯದ ಅರ್ಹ ಹಿರಿಯ ಸಾಹಿತಿಗಳು, ಕಲಾವಿದರಿಗೆ ಮಾಸಾಶನ ಮಂಜೂರು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದೆ. ಕಷ್ಟದಲ್ಲಿರುವ ಕಲಾವಿದರ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 3 ಸಾವಿರ ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಾಶನ ನೀಡಲು ಮುಂದಾಗಿದ್ದು, ಈ ಕುರಿತು ಆದೇಶ ಹೊರಡಿಸಿದೆ.

ಕಳೆದ ಸೆಪ್ಟಂಬರ್ 1ರಿಂದ ಜಾರಿಗೆ ಬರುವಂತೆ 2,000 ರೂಪಾಯಿ ಮಾಸಾಶನ ನೀಡುವಂತೆ ಸರ್ಕಾರ ತಿಳಿಸಿದೆ. 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಮಾಸಾಶನ ಮಂಜೂರು ಮಾಡಿದೆ.

Karnataka govt issues order granted monthly pension to eligible senior writers and artistes

ಮಾಶಾಸನದ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ:
ಎಲ್ಲ ದೇಶದಲ್ಲಿಯೂ ಕೂಡ ವಯಸ್ಸಾದ ಕ್ರೀಯಾಶೀಲ ಹಿರಿಯರಿದ್ದಾರೆ. ಅವರ ಅನುಭವ ಮತ್ತು ಶಕ್ತಿಯನ್ನು ಬಳಕೆ ಮಾಡುವುದು ಜಾಣತನ. ಹೀಗಾಗಿ ನಾನು ವಿಶ್ವ ಹಿರಿಯ ನಾಗರಿಕರ ದಿನದಂದು ಒಂದು ತೀರ್ಮಾನವನ್ನು ಮಾಡಿದ್ದೇನೆ. ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಸರ್ಕಾರದ ಸಹಾಯ, ಸಲಹೆಗಳಿಗಾಗಿ ತೆಗೆದುಕೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ. ಇದರಿಂದ ಯಾವುದೇ ಯುವಕರಿಗೆ ತೊಂದರೆ ಆಗುವುದಿಲ್ಲ. ಖಾಲಿಯಾದ ಹುದ್ದೆಗಳಿಗೆ ಯುವಕರನ್ನೇ ತುಂಬುತ್ತೇವೆ. ಹಿರಿಯರ ಅನುಭವ ಬುತ್ತಿಯನ್ನು ನಾವು ಈ ನಾಡು ಕಟ್ಟಲು ಬಳಕೆ ಮಾಡಿಕೊಳ್ಳುತ್ತೇವೆ. ಇದರ ಸಲಹೆಯನ್ನು ನಾನು ನಮ್ಮ ಇಲಾಖೆಯ ಅಧಿಕಾರಿಗಳಿಗೆ ನೀಡಿ, ವಿಶೇಷವಾದ ಯೋಜನೆಯನ್ನು ರೂಪಿಸಲು ಸೂಚಿಸುತ್ತೇನೆ ಎಂದು ಈ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+