Karnataka Covid Guidelines : ಹೊಸ ವರ್ಷಾಚರಣೆಗೆ ಕೊರೋನಾ ರೂಲ್ಸ್, ಲಸಿಕೆ, ಮಾಸ್ಕ್ ಕಡ್ಡಾಯ.!

ಬೆಳಗಾವಿ,ಡಿಸೆಂಬರ್ 26: ರಾಜ್ಯದಲ್ಲಿ ಮತ್ತೆ ಕೋವಿಡ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಹೊಸ ಗೈಡ್ ಲೈನ್ ಬಿಡುಗಡೆ ಮಾಡಿದೆ.

ಸೋಮವಾರ ಸುವರ್ಣ ಸೌಧದ ಸಮಿತಿ ಕೊಠಡಿಯಲ್ಲಿ ಸಚಿವರಾದ ಆರ್ ಅಶೋಕ್ ಮತ್ತು ಸುಧಾಕರ್ ನೇತೃತ್ವದಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ವರ್ಚುವಲ್ ಮೂಲಕ ತಜ್ಞರ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಚೀನಾ ಮತ್ತು ವಿದೇಶಗಳಲ್ಲಿ ಕೋವಿಡ್ ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬರುತ್ತಿರುವ ಪ್ರಯಾಣಿಕರಿಗೆ ಹೆಚ್ಚಿನ ಗಮನ ಕೊಡಲು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಲಹೆ ನೀಡಿದ್ದಾರೆ. ಅಲ್ಲದೇ ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿದೇಶದಿಂದ ಪ್ರಯಾಣಿಸಕರಿಗೆ ಪ್ರತ್ಯೇಕವಾಗಿ ಆಸ್ಪತ್ರೆ ಮೀಸಲಿರಿಸಿದ್ದು, ಶಾಲಾ ಕಾಲೇಉ ಸೇರಿದಂತೆ ಥಿಯೇಟರ್‌ನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಪಬ್,ಬಾರ್,ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಡಬಲ್ ಡೋಸ್ ಹಾಕಿರಬೇಕು, ಎಷ್ಟು ಟೇಬಲ್ ಇದ್ಯೋ ಅಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು. ಹೆಚ್ಚುವರಿ ಜನರಿಗೆ ಪಬ್,ಬಾರ್,ರೆಸ್ಟೋರೆಂಟ್‌ನಲ್ಲಿ ಅವಕಾಶವಿಲ್ಲ. ಎಂಜಿ ರೋಡ್ ಸೇರಿದಂತೆ ಎಲ್ಲಾ ಕಡೆ ಈ ಕೊರೋನಾ ನಿಯಮ ಕಡ್ಡಾಯವಾಗಿದ್ದು, ಮಧ್ಯರಾತ್ರಿ 1 ಗಂಟೆಯ ನಂತರ ಹೊಸ ವರ್ಷಾಚರಣೆ ಸಂಭ್ರಮಾಚರಣೆ ಅವಕಾಶವಿಲ್ಲ ಎಂದಿದ್ದಾರೆ.

Karnataka govt issued new Covid-19 guidelines for new year celebrations

ಇನ್ನೂ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಕುರಿತು ಯಾವುದೇ ಚರ್ಚೆಯಾಗಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಇನ್ನೂ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ಇನ್ನೂ ಈ ವೇಳೆ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗುದು ಈ ವೇಳೆ ರೋಗದ ಲಕ್ಷಣ ಕಂಡುಬಂದರೆ ಕ್ವಾರಂಟೈನ್ ನಡೆಸಿ ಚಿಕಿತ್ಸೆ ನೀಡಲಾಗುವುದು. ಇನ್ನೂ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಮಂಗಳೂರಿನ ಒಂದು ಆಸ್ಪತ್ರೆ ಮೀಸಲಿಡಲಾಗಿದೆ ಎಂದರು.

Karnataka govt issued new Covid-19 guidelines for new year celebrations

ಬೂಸ್ಟರ್ ಡೋಸ್ ಹೆಚ್ಚಾಗಿ ಕೊಡುವ ಕೆಲಸವಾಗಬೇಕಿದ್ದು, 20% ಆಗಿರುವ ಬೂಸ್ಡರ್ ಡೋಸ್ ಅನ್ನು 50% ಆಗುವ ನಿಟ್ಡಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ತಾಲ್ಲೂಕು ಮಟ್ಡದಿಂದ ಜಿಲ್ಲಾ ಮಟ್ಟದವರೆಗೂ ಲಸಿಕಾ ಕ್ಯಾಂಪ್ ತೆರೆಯುತ್ತೇವೆ. ಹಿರಿಯ ನಾಗರಿಕರು,ರೋಗದ ಲಕ್ಷಣವಿದ್ದವರು,ಗರ್ಭಿಣಿಯರು,ಮಕ್ಕಳು ಹೊಸವರ್ಚಚಾರಣೆಯ ಸಮಾರಂಭದಲ್ಲಿ ಭಾಗಿಯಾಗದೆ ಇದ್ದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಇನ್ನೂ ಬೂಸ್ಟರ್ ಡೋಸ್ ಕಡ್ಡಾಯ ಅಂತ ಹೇಳೋಕೆ ಆಗಲ್ಲ, ಬೂಸ್ಡರ್ ಡೋಸ್ ತೆಗೆದುಕೊಳ್ಳಬೇಕು. ಮೊದಲು ಮತ್ತು ಎರಡನೇ ಡೋಸ್ ಪ್ರಧಾನಿ ಮೋದಿಯವರ ಜಾಗೃತಿಯಿಂದ ಜನ ಸ್ವಯಂಪ್ರೇರಣೆಯಿಂದ ಪಡೆದುಕೊಂಡಿದ್ದಾರೆ. ಅದೇ‌ ರೀತಿ ಬೂಸ್ಡರ್ ಡೋಸ್ ಸ್ವಯಂಪ್ರೇರಿತರಾಗಿ ಪಡೆದುಕೊಳ್ಳಬೇಕು.

ಯಾವುದೇ ಕಾರ್ಯಕ್ರಮಕ್ಕೂ ಕೂಡ ನಾವು ನಿರ್ಬಂಧ ಹೇರಿಲ್ಲ, ಮಾಸ್ಕ್ ಧರಿಸಿ ಎಂದು ಮಾತ್ರ ಸಲಹೆ ನೀಡಿದ್ದೇವೆ. ಜೆಡಿಎಸ್ ಪಂಚರತ್ನ ರಥಯಾತ್ರೆನಾದ್ರೂ ಮಾಡಲಿ,ಕಾಂಗ್ರೆಸ್ ಬಸ್ ಯಾತ್ರೆನಾದ್ರೂ ಮಾಡಲಿ. ನಮ್ಮ ಮಾರ್ಗಸೂಚಿ ಪಾಲಿಸಲಿ ಅನ್ನೋದು ಅಷ್ಟೆ ನಮ್ಮ ಕಾಳಜಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+