• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈದ್-ಮಿಲಾದ್: ರಾಜ್ಯ ಸರ್ಕಾರದಿಂದ ಕೊವಿಡ್ 19 ಮಾರ್ಗಸೂಚಿ ಪ್ರಕಟ

|

ಬೆಂಗಳೂರು, ಅಕ್ಟೋಬರ್ 19: ಈದ್-ಮಿಲಾದ್ ಅಕ್ಟೋಬರ್ 30ರಂದು ಆಚರಿಸಲಾಗುತ್ತಿದ್ದು, ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈದ್ ಮಿಲಾದ್ ಆಚರಣೆ ಮಾಡುವವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ.

ಕೊರೊನಾ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಸಾಮೂಹಿಕ ಮೆರವಣಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಒಂದೆಡೆ ಸೇರುವುದಕ್ಕೆ ಸರ್ಕಾರ ಅವಕಾಶ ನಿರಾಕರಿಸಿದೆ.

ಈದ್ ಮಿಲಾದ್ ಶಾಂತಿಸಭೆ ನಿಯಮ ಉಲ್ಲಂಘನೆ; ದಾವಣಗೆರೆಯಲ್ಲಿ ಲಾಠಿ ಚಾರ್ಜ್

ಈದ್ ಮಿಲಾದ್ ದಿನದಂದು ನಡೆಯುವ ಯಾವುದೇ ರೀತಿಯ ಹಗಲು ಅಥವಾ ರಾತ್ರಿಯ ಧಾರ್ಮಿಕ ಕಾರ್ಯಕ್ರಮ, ಸಭೆಗಳನ್ನೂ ಸಹ ಕಡ್ಡಾಯವಾಗಿ ನಿಷೇಧಿಸಿದೆ. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಹಬ್ಬ ಆಚರಿಸಬೇಕು.

-ಪ್ರಾರ್ಥನಾ ಮಂದಿರದಲ್ಲಿ ಸ್ಯಾನಿಟೈಸ್ ಹಾಗೂ ಸೋಪಿನಿಂದ ಕೈ ತೊಳೆಯಲು ಪ್ರವೇಶ ದ್ವಾರದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಡ್ಡಾಯವಾಗಿ ಎಲ್ಲರೂ 6 ಅಡಿ ಅಂತರದ ದೈಹಿಕ ಅಂತರ ಕಾಯ್ದುಕೊಳ್ಳಲೇಬೇಕೆಂದು ಹೇಳಲಾಗಿದೆ.

-ಕೊವಿಡ್ 19 ಶಿಷ್ಟಾಚಾರದಂತೆ ಮಸೀದಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

   Super Overನಲ್ಲಿ ಹೀಗಾಗೋಕೆ ನಮ್ಮ ಭಾರತದ ಬೌಲರ್ಸ ಕಾರಣ | Oneindia Kannada

   -ರಾಜ್ಯದ ವಕ್ಫ್‌ ಮಂಡಳಿಯ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಈದ್ಗಾ, ಮಸೀದಿ, ದರ್ಗಾ ಮತ್ತಿತರೆ ಸಂಸ್ಥೆಗಳಿಗೆ ಈ ಆದೇಶವನ್ನು ಜಾರಿ ಮಾಡುವುದು, ಈ ಆದೇಶವನ್ನು ಎಲ್ಲಾ ವಕ್ಫ್ ಸಂಸ್ಥೆ ಕಟ್ಟು ನಿಟ್ಟಾಗಿ ಆದೇಶವನ್ನು ಜಾರಿ ಮಾಡುವುದು.

   English summary
   The Government Of Karnataka has issued safety guidelines for Eid Milad-un-Nabi celebration amid Covid19 Pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X