• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಹೋಂ ಐಸೋಲೇಷನ್ ಮಾರ್ಗಸೂಚಿಗಳು

|
Google Oneindia Kannada News

ಬೆಂಗಳೂರು, ಜುಲೈ 05 : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ 1839 ಹೊಸ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 1172 ಪ್ರಕರಣ ದಾಖಲಾಗಿದೆ.

ಆರೋಗ್ಯ ಇಲಾಖೆಯು ಸೋಂಕಿತರಿಗೆ ಹೋಂ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಎಚ್ಚರಿಕೆ ನೀಡಲಾಗಿದೆ.

ಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬರುವವರು 7 ದಿನದ ಹೋಂ ಕ್ವಾರಂಟೈನ್‌ನಲ್ಲಿರಬೇಕು. 'ಎ' ಕೆಟಗರಿ, ಕಡಿಮೆ ಸೋಂಕು ಲಕ್ಷಣವುಳ್ಳವರು ಮಾತ್ರ ಹೋಂ ಐಸೋಲೇಷನ್‌ನಲ್ಲಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೊರೊನಾ ಸೋಂಕಿತರಿಗೆ ಪೌಷ್ಠಿಕ ಆಹಾರ: ಸರ್ಕಾರದ ಹೊಸ ಮಾರ್ಗಸೂಚಿ ಕೊರೊನಾ ಸೋಂಕಿತರಿಗೆ ಪೌಷ್ಠಿಕ ಆಹಾರ: ಸರ್ಕಾರದ ಹೊಸ ಮಾರ್ಗಸೂಚಿ

ಬಿಬಿಎಂಪಿ, ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಸೂಕ್ತತೆಯನ್ನು ಪರಿಶೀಲಿಸಲಿದ್ದಾರೆ. ಸರ್ಕಾರ ನೀಡುವ ಸೂಚನೆಗಳನ್ನು ಕ್ವಾರಂಟೈನ್ ಕೊನೆ ದಿನದ ತನಕ ಫಾಲೋ ಮಾಡಬೇಕು.

ಬೆಂಗಳೂರಿನಲ್ಲಿಂದು 1172 ಕೊರೊನಾ ಕೇಸ್, ರಾಜ್ಯದಲ್ಲಿ 21 ಸಾವಿರ ಸೋಂಕುಬೆಂಗಳೂರಿನಲ್ಲಿಂದು 1172 ಕೊರೊನಾ ಕೇಸ್, ರಾಜ್ಯದಲ್ಲಿ 21 ಸಾವಿರ ಸೋಂಕು

50 ವರ್ಷ ಮೇಲ್ಪಟ್ಟವರಿಗೆ ಇಲ್ಲ

50 ವರ್ಷ ಮೇಲ್ಪಟ್ಟವರಿಗೆ ಇಲ್ಲ

* 50 ವರ್ಷ ಮೇಲ್ಪಟ್ಟ ಬೇರೆ ಕಾಯಿಲೆ, ಹೆಚ್ಚಿನ ಸೋಂಕು ಲಕ್ಷಣ ಇರುವವರಿಗೆ ಹೋಂ ಕ್ವಾರಂಟೈನ್ ಇರುವುದಿಲ್ಲ.

* 'ಎ' ಕೆಟಗರಿ, ಕಡಿಮೆ ಸೋಂಕು ಲಕ್ಷಣವುಳ್ಳವರು ಮಾತ್ರ ಹೋಮ್ ಕ್ವಾರಂಟೈನ್ ಅಲ್ಲಿರಬಹುದು.

ಆರೋಗ್ಯದ ಮಾಹಿತಿ ನೀಡಬೇಕು

ಆರೋಗ್ಯದ ಮಾಹಿತಿ ನೀಡಬೇಕು

* ಮನೆಯಲ್ಲಿರುವಾಗ ಸೋಂಕಿತರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಬಳಕೆ ಮಾಡಬೇಕು. ಆಮ್ಲಮಾಪಕ, ಉಷ್ಣಮಾಪಕಗಳನ್ನು ಹೊಂದಿರಬೇಕು.

* ಟೆಲಿ ಮೆಡಿಸಿನ್ ಲಿಂಕ್ ಅನ್ನು ನೀಡುತ್ತಾರೆ. ಕ್ವಾರಂಟೈನ್ ಕೊನೆ ದಿನದ ತನಕ ಫಾಲೋ ಮಾಡಬೇಕು.

ಮಾರ್ಗಸೂಚಿಯಂತೆ ನಡೆಯುತ್ತದೆ

ಮಾರ್ಗಸೂಚಿಯಂತೆ ನಡೆಯುತ್ತದೆ

* ಹೋಂ ಕ್ವಾರಟೈನ್‌ ಮುಕ್ತಾಯ ಸರ್ಕಾರದ ಮಾರ್ಗಸೂಚಿಯಂತೆ ನಡೆಯುತ್ತದೆ.

* ಹೋಂ ಕ್ವಾರಂಟೈನ್‌ ಕುಟುಂಬದ, ನೆರೆಹೊರೆಯವರ, ವೈದ್ಯರ, ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ನಡೆಯತಕ್ಕದ್ದು.

ಮನೆಯಲ್ಲಿಯೂ ಮಾಸ್ಕ್ ಬಳಕೆ ಮಾಡಬೇಕು

ಮನೆಯಲ್ಲಿಯೂ ಮಾಸ್ಕ್ ಬಳಕೆ ಮಾಡಬೇಕು

* ಮನೆಯಲ್ಲಿರುವಾಗ ಸೋಂಕಿತರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಬಳಕೆ ಮಾಡಬೇಕು. ಆಮ್ಲಮಾಪಕ, ಉಷ್ಣಮಾಪಕಗಳನ್ನು ಹೊಂದಿರಬೇಕು.

* ಟೆಲಿ ಮೆಡಿಸಿನ್ ಲಿಂಕ್ ಅನ್ನು ನೀಡುತ್ತಾರೆ. ಕ್ವಾರಂಟೈನ್ ಕೊನೆ ದಿನದ ತನಕ ಫಾಲೋ ಮಾಡಬೇಕು.

English summary
Karnataka government issued guidelines for home isolation Asymptomatic and mild symptomatic patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X