ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆ ಮಕ್ಕಳ ಕರೆದೊಯ್ಯಲು ಮನೆ ಬಾಗಿಲಿಗೆ ಬಸ್!

|
Google Oneindia Kannada News

ಬೆಂಗಳೂರು, ಜುಲೈ02: ಸರ್ಕಾರಿ ಶಾಲೆಯ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ. ಹಳ್ಳಿಗಳಿಂದ ಶಾಲೆಗೆ ತೆರಳಲು ಅನನುಕೂಲ ಇರುವ ಮಕ್ಕಳ ಅನುಕೂಲ ಶಾಲಾ ಬಸ್ ಖರೀದಿಸಲು ಮುಂದಾದ ಶಿಕ್ಷಣ ಇಲಾಖೆ.

ರಾಜ್ಯ ಸರ್ಕಾರದಿಂದ ಶಾಲಾ ವಾಹನ ಖರೀದಿಗೆ ಅನುಮತಿ ನೀಡಲಾಗಿದೆ. ಸರ್ಕಾರಿ ಶಾಲೆಗಳ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರುವುದಕ್ಕೆ ಈ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ.

ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು ಮಕ್ಕಳನ್ನು ಕರೆತರುವ ಅನುಮತಿ ನೀಡಲಾಗಿದೆ.ಶಾಲಾ- ವಾಹನ ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಇರುವುದುದಾಗಿ ತಿಳಿಸಿದೆ.ಶಾಲಾ ವಾಹನಕ್ಕೆ, ವಾಹನ ಚಾಲಕರ ವೇತನ ಹಾಗೂ ಪೆಟ್ರೋಲ್, ಡೀಸೆಲ್, ದುರಸ್ಥಿ ವೆಚ್ಚಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ( SDMC) ಇತರೆ ಅನುದಾನದಡಿ ವೆಚ್ಚ ಭರಿಸುವಂತೆ ಷರತ್ತು ವಿಧಿಸಲಾಗಿದೆ.

Karnataka Govt School can purchased School vehicle for Student

ಖಾಸಗಿ ಶಾಲೆಗಳಿಗೆ ಪೈಪೋಟಿ

ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಸೆಳೆಯುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ಹಳ್ಳಿಯ ಭಾಗದಲ್ಲಿ ತಲೆಎತ್ತಿರುವ ಖಾಸಗಿ ಶಾಲೆಗಳು ಹಳ್ಳಿ ಹಳ್ಳಿಗೆ ಹೋಗಿ ಮಕ್ಕಳನ್ನು ಪಿಕಪ್ ಮತ್ತು ಡ್ರಾಪ್ ಮಾಡುತ್ತಿವೆ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಿತ್ತು.

ಕೋವಿಡ್ ಬಳಿಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗಿದೆ. ಖಾಸಗಿ ಶಾಲೆಗಳಿಂದ ವರ್ಗಾವಣೆ ಪತ್ರ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಸೇರಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಂತೆ ಸೌಲಭ್ಯವನ್ನು ಪೋಷಕರು ನಿರೀಕ್ಷಿಸುತ್ತಿದ್ದಾರೆ. ಇನ್ನು ಹಳ್ಳಿಗಳಲ್ಲಿ ಮಕ್ಕಳಿಗೆ ಶಾಲೆಗೆ ತೆರಳಲು ಬಸ್ ಇತರೆ ವಾಹನಗಳನ್ನು ಹತ್ತುವುದು ಅನಿವಾರ್ಯವಾಗಿತ್ತು. ಇದರಿಂದ ಸರ್ಕಾರ ಅಗತ್ಯವಿರುವ ಶಾಲೆಗಳಲ್ಲಿ ಶಾಲಾ ವಾಹನ ಖರೀದಿ ಮಾಡಲು ಈ ಮೂಲಕ ಆದೇಶವನ್ನು ಮಾಡಿದೆ.

Karnataka Govt School can purchased School vehicle for Student

ಶಾಲಾ ವಾಹನ ಖರೀದಿಯ ವಿಚಾರ ಹರ್ಷ ತಂದಿದೆ

"ಸರ್ಕಾರ ಶಾಲಾ ಬಸ್ ಖರೀದಿಯನ್ನು ಮಾಡುತ್ತಿರುವುದು ಹರ್ಷವನ್ನು ತಂದಿದೆ. ನಮ್ಮ ಊರಿನಲ್ಲಿದ್ದ ಪ್ರಾಥಮಿಕ ಶಾಲೆಯನ್ನು ಮಕ್ಕಳ ಕೊರತೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. ನಮ್ಮ ಊರಿನಿಂದ ಎರಡು ಕಿಮೀ ದೂರದಲ್ಲಿರುವ ಪೂರಿಗಾಲಿಗೆ ವಿದ್ಯಾರ್ಥಿಗಳು ಹೋಗಬೇಕು. ಬಸ್ ಅಥವಾ ಆಟೋವನ್ನು ಹತ್ತಿ ಮಕ್ಕಳು ಹೋಗುತ್ತಾರೆ. ಕೆಲವೊಮ್ಮೆ ನಡೆದುಕೊಂಡೇ ಹೋಗುವ ಪರಿಸ್ಥಿತಿಯಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಬರಲು ಸರ್ಕಾರ ವಾಹನ ಖರೀದಿಸುವುದರಿಂದ ಮಕ್ಕಳು ಸುರಕ್ಷಿತವಾಗಿ ಹೋಗಿ ಬರುತ್ತಾರೆ," ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸೂರ್ಕಳ್ಳಿ ನಿವಾಸಿ ಬಸವರಾಜು(ಕರಿಯಪ್ಪ) ತಿಳಿಸಿದ್ದಾರೆ.

Recommended Video

Bill Gates ಹಂಚಿಕೊಂಡ ವಿಶೇಷ ಫೋಟೋ ನೋಡಿ ಗಾಬರಿಗೊಂಡ ಜನ | OneIndia Kannada

English summary
Government has given good news to government school children. The Education Department has decided to buy a school bus for the convenience of children who are inconvenient to go to school from villages, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X