ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿಗೆ ಕಡಿವಾಣ, ಸಿಎಂಗೆ ಸಂಪೂರ್ಣ ಅಧಿಕಾರ: ಎಚ್.ಕೆ.ಪಾಟೀಲ್
ಹುಬ್ಬಳ್ಳಿ, ಫೆಬ್ರವರಿ 02: ಕರ್ನಾಟಕದಲ್ಲಿ ಬಡವರಿಗೆ, ಶ್ರಮಿಕರಿಗೆ ಮಿತಿ ಮೀರಿ ಸಾಲ ನೀಡಿ, ಸಾಲಕ್ಕಾಗಿ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತರಲು ಮುಂದಾಗಿದೆ. ಆದರೆ ಇನ್ನೂ ಮಂಡನೆ ಆಗಿಲ್ಲ. ಈ ಬಗ್ಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ.
ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಮೈಕ್ರೋ ಪೈನಾನ್ಸ್ ಕಂಪನಿ, ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಇದರಿಂದ ಸಾವು, ನೋವು ಉಂಟಾಗಿದೆ. ಈಹಿನ್ನೆಲೆಯಲ್ಲಿ ಈ ಮೈಕ್ರೋ ಪೈನಾನ್ಸ್ ಹಾವಳಿ ತಡೆಗೆ ಈಗಾಗಲೇ ಸುಗ್ರೀವಾಜ್ಞೆ ಮಸೂದೆಯನ್ನ ತಯಾರು ಮಾಡಿ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದೆ.

ಬಡವರನ್ನ, ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕಾಗಿದೆ. ಬಡವರನ್ನ ಮನಬಂದಂತೆ ಥಳಿಸಿ ಸಾಲ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ಮೈಕ್ರೋಪೈನಾನ್ಸ್, ಬಡ್ಡಿ ದಂಧೆಕೋರರಿಗೆ ಲಗಾಮು ಹಾಕಬೇಕಾಗಿದೆ. ಈ ಸಂಬಂಧ ಸುಗ್ರಿವಾಜ್ಞೆ ತಯಾರು ಮಾಡಲಾಗಿದೆ. ಓಂಬಡ್ಸ್ ಮನ್ ನೇಮಕ ಮಾಡಲಾಗುತ್ತಿದೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಿ ನೀಡಲಾವುದು. ಜನರ ಭಾವನೆ ಹಾಗೂ ಬದಕುಕಿನ ವಿರುದ್ಧ ವಸೂಲಿ ಮಾಡುವ ಪ್ರಕ್ರಿಯೆ ನಾವು ಒಪ್ಪಲ್ಲ ಎಂದು ಅವರು ತಿಳಿಸಿದರು.
ಈ ಮಸೂದೆ ಜಾರಿಗೆ ಎಲ್ಲ ಬಗೆಯ ಸಿದ್ಧತೆ ಆಗಿದ್ದು. ಮುಖ್ಯಮಂತ್ರಿಗಳಿಗೆ ಸಹ ಈಗಾಗಲೇ ಕಳುಹಿಸಿ ಕೊಡಲಾಗಿದೆ. ಜಾರಿ ಮಾಡುವುದು ಮಾತ್ರವೇ ಬಾಕಿ ಇದ್ದು, ಮುಖ್ಯಮಂತ್ರಿಗಳು ಸುಗ್ರೀವಾಜ್ಞೆಯ ಪರಿಶೀಲನೆ ಮಾಡಲಿದ್ದಾರೆ. ಇದರ ಸಂಪೂರ್ಣ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ ಎಂದು ಅವರು ವಿವರಿಸಿದರು.
ರಾಜ್ಯಪಾಲರಿಗೆ ಕಳುಹಿಸುವ ಮುನ್ನ ಸಿಎಂ ಅವರು ಪರಿಶೀಲನೆ ಮಾಡಬೇಕಾಗುತ್ತದೆ. ಸಚಿವ ಸಂಪುಟದಲ್ಲಿ ಪಾಸ್ ಮಾಡಲು ಸಿಎಂ ಅವರಿಗೆ ಅಧಿಕಾರ ನೀಡಲಾಗಿದೆ. ಈ ಮಸೂದೆಯನ್ನು ಸಿಎಂ ಸಿದ್ದರಾಮಯ್ಯ ಅವರೇ ರಾಜ್ಯಪಾಲರಿಗೆ ರವಾನಿಸಲಿದ್ದಾರೆ. ಆದಷ್ಟು ಶೀಘ್ರವೇ ಮೈಕ್ರೋಪೈನಾನ್ಸ್ ಕಂಪನಿ ಸಿಬ್ಬಂದಿ, ಬಡ್ಡಿ ದಂಧೇಕೋರರ ದೌರ್ಜನ್ಯಕ್ಕೆ ಕಡಿವಾಣ ಬೀಳಲಿದೆ ಎಂದು ಅವರು ಹೇಳಿದರು.
ನಿಯಮಗಳು ಪಾಲನೆ ಆಗುತ್ತಿಲ್ಲ: ಕೇಂದ್ರದ ವಿರುದ್ಧ ಸಚಿವ ಕಿಡಿ
ಇಂತಹ ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿ ಮಾಡಲಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾಗುವವರ ವಿರುದ್ಧ ರಕ್ಷಣೆ ನೀಡಲಾಗುವುದು ಎಂದ ಅವರು ಆರ್ ಬಿ ಐ ಮಾರ್ಗದರ್ಶಿ ಪಾಲನೆ ಮಾಡಬೇಕು. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಆರ್ ಬಿಐ ಇದೆ. ಯಾವುದೇ ನಿಯಮ ಪಾಲನೆ ಆಗತ್ತಿಲ್ಲ ಎಂದು ಬಿಜೆಪಿ ವಿರುದ್ಧ ದೂರಿದರು.
ಇದೇ ಸಮಯದಲ್ಲಿ ರಾಜಕೀಯ ಸಲಹೆಗಾರ, ಶಾಸಕ ಬಿ.ಆರ್ ಪಾಟೀಲ್ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ವಿಚಾರವಾಗಿ, ಮಾತನಾಡಿದ ಅವರು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾವ ಉದ್ದೇಶ ಇರಿಸಿಕೊಂಡು ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ. ಇದಕ್ಕೆ ಈಗಾಗಲೇ ಸಿಎಂ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿ. ಆರ್ ಪಾಟೀಲ್ ರನ್ನ ಕರೆದು ಮಾತನಾಡುತ್ತೇನೆ ಎಂದರು.












Click it and Unblock the Notifications