ತಮಿಳುನಾಡಿಗೆ 5 ಕೋಟಿ ನೆರವು ಘೋಷಿಸಿದ ಕರ್ನಾಟಕ
ಬೆಂಗಳೂರು, ಡಿಸೆಂಬರ್ 02 : ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ 5 ಕೋಟಿ ರೂ.ಗಳ ನೆರವು ಘೋಷಣೆ ಮಾಡಿದೆ. ಔಷಧಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಈ ಕುರಿತು ಮಾಹಿತಿ ನೀಡಿದರು. 'ಜಲಪ್ರಳಯದಿಂದ ಸಂಕಷ್ಟಕ್ಕೆ ಸಿಲುಕಿರುವ ತಮಿಳುನಾಡು ರಾಜ್ಯಕ್ಕೆ 5 ಕೋಟಿ ರೂ. ಪರಿಹಾರ ನೀಡುತ್ತಿದ್ದೇವೆ. ತಮಿಳುನಾಡಿನ ಅಧಿಕಾರಿಗಳ ಜೊತೆ ಚರ್ಚಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಹೇಳಿದರು. [ಮಳೆಯಿಂದ ಜರ್ಝರಿತ ತಮಿಳುನಾಡಿನ ಇತ್ತೀಚಿನ ವರದಿಗಳು]

'5 ಕೋಟಿ ಹಣದ ಜೊತೆಗೆ ಔಷಧ ಸೇರಿ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಮಿಳುನಾಡಿಗೆ ಪೂರೈಕೆ ಮಾಡಲಾಗುತ್ತದೆ. ಮುಖ್ಯಕಾರ್ಯರ್ಶಿಗಳ ಕೌಶಿಕ್ ಮುಖರ್ಜಿ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪರಿಹಾರಗಳನ್ನು ಪೊರೈಕೆ ಮಾಡಲಾಗುತ್ತದೆ' ಎಂದರು. [ಗ್ಯಾಲರಿ: ಹಚ್ಚಿ ಹೊಡೆಯುತ್ತಿರುವ ಮಳೆಗೆ ತತ್ತರಿಸಿದ ಚೆನ್ನೈ]
Our govt has sanctioned Rs.5 crore along medicines and relief items. Have asked Chief Secy to coordinate with TN. #ChennaiFloods
— CM of Karnataka (@CMofKarnataka) December 2, 2015 ಸಿಎಫ್‌ಟಿಆರ್‌ಐನಿಂದ ಪಲಾವ್, ಉಪ್ಪಿಟ್ಟು ರವಾನೆ : ಮಳೆಯಿಂದಾಗಿ ನಿರಾಶ್ರಿತರಾಗಿರುವ ಚೆನ್ನೈನ ಜನರಿಗೆ ಮೈಸೂರಿನ ಸಿಎಫ್‌ಟಿಆರ್‌ಐ ಉಪ್ಪಿಟ್ಟು, ಪಲಾವ್, ಚಪಾತಿ ಮುಂತಾದ ಆಹಾರ ಪದಾರ್ಥಗಳನ್ನು ರವಾನೆ ಮಾಡುತ್ತಿದೆ. ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಸುಮಾರು 3 ಟನ್ ಆಹಾರಗಳನ್ನು ರವಾನಿಸುತ್ತಿದೆ.












Click it and Unblock the Notifications