ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮೇಜರ್ ಸರ್ಜರಿ: 17 ವಿವೈಎಸ್‌ಪಿಗಳ ವರ್ಗಾವಣೆ
ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ರಾಜ್ಯ ಸರ್ಕಾರದಿಂದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿಭಾಗದಲ್ಲಿ ಮೇಜರ್ ಸರ್ಜರಿ ನಡೆದಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಟ್ಟು 17ಮಂದಿ ವಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಮಂದಿ ಉಪ ಅಧೀಕ್ಷಕ ಪೊಲೀಸರು (ಡಿವೈಎಸ್‌ಪಿ) ಅಧಿಕಾರಿಗಳನ್ನು ಕರ್ನಾಟಕ ಲೋಕಾಯುಕ್ತ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳ ಹೆಸರು ನೋಡುವುದಾದರೆ ಎಂ.ಎಸ್.ಸುರೇಶ್ ರೆಡ್ಡಿ, ವಿಜಯ್ ಬಿರಾದಾರ್, ಎ.ಆರ್.ಭರತ್‌ರೆಡ್ಡಿ, ಬಿ.ಉಮಾ ಶಂಕರ್, ಮಂಜುನಾಥ್ ಕೆ. ಗಂಗಲ್, ಸಿ.ಎಸ್.ಮಲ್ಲಿಕಾರ್ಜುನ್, ಹನುಮಂತರಾಯ್ ಶ್ರೀಮಂತ ರಾಯ, ಕೆ.ಟಿ.ಮ್ಯಾಥ್ಯೂ ಥಾಮಸ್, ಉಮೇಶ್ ಈಶ್ವರ್ ನಾಯಕ್, ಕೆ.ಸಿ.ಪ್ರಕಾಶ್, ಎಚ್.ಟಿ.ಸುನಿಲ್ ಕುಮಾರ್, ಜೊತೆಗೆ ವಿ.ಸೂರ್ಯನಾರಾಯಣ್ ರಾವ್, ಬಿ.ಗಿರೀಶ್, ಎಸ್.ಸುಧೀರ್ ಹಾಗೂ ಪಿ. ವಿರೇಂದ್ರ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಅವರೊಂದಿಗೆ ಮಲ್ಲೇಶ್ ದೊಡ್ಡಮನಿ ಅವರನ್ನು ಡಿಸಿಆರ್‌ಬಿಯಿಂದ ದಾವಣಗೆರೆ ನಗರ ಉಪ ವಿಭಾಗ ಮತ್ತು ಬಿ.ಎಸ್.ಅಬ್ದುಲ್ ಖಾದರ್ ಅವರನ್ನು ಪುಲಿಕೇಶಿ ನಗರದಿಂದ ಬೆಂಗಳೂರು ನಗರದ ಸಂಚಾರ ಹಾಗೂ ರಸ್ತೆ ಸುರಕ್ಷತಾ ಕೋಶಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.












Click it and Unblock the Notifications