ರಾಜ್ಯ ಸರಕಾರದ ಖಜಾನೆಯ ಸ್ಥಿತಿ ದೇವರಿಗೇ ಪ್ರೀತಿ: ಸಿಎಂ ಬಿಎಸ್ವೈ
Recommended Video
ಹುಬ್ಬಳ್ಳಿ, ಆ 10: 'ರಾಜ್ಯ ಸರಕಾರದ ಖಚಾನೆಯ ಸ್ಥಿತಿಯ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಸೂಕ್ತ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
'ತಕ್ಷಣದಿಂದ ಸಂಪನ್ಮೂಲ ಕ್ರೋಡೀಕರಿಸುವ ಬಗ್ಗೆ ಗಮನ ಹರಿಸಬೇಕಾಗಿದೆ. ಖಚಾನೆಯ ಸ್ಥಿತಿಯನ್ನು ದೇವರೇ ಕಾಪಾಡಬೇಕೆಂದು' ಯಡಿಯೂರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
' ಗದಗ ಜಿಲ್ಲೆಯ ಸಂತ್ರಸ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ಮಾಡಿದ ಬಗ್ಗೆ ವರದಿ ಕೊಡಲು ಹೇಳಿದ್ದೇನೆ. ಅವರನ್ನು ಸಂತೈಸುವ ಕೆಲಸವನ್ನು ಮಾಡಬೇಕೇ ಹೊರತು ಹಲ್ಲೆ ಮಾಡಿರುವುದು ತಪ್ಪು. ಸಂತ್ರಸ್ತರ ಮೇಲೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.

' ಪ್ರವಾಹದಿಂದ ಆಗಿರುವ ನಷ್ಟದ ಅಂದಾಜು ಮಾಡಲು ಇನ್ನೂ ಒಂದು ವಾರದ ಕಾಲಾವಕಾಶ ಬೇಕಾಗಿದೆ. ಇದಾದ ನಂತರವಷ್ಟೇ ನಾವು ಕೇಂದ್ರಕ್ಕೆ ಮನವಿ ಸಲ್ಲಿಸಲು ಸಾಧ್ಯವಾಗುವುದು' ಎಂದು ಯಡಿಯೂರಪ್ಪ ಹೇಳಿದ್ದಾರೆ.
' ಕೇಂದ್ರಕ್ಕೆ ರಾಜ್ಯದಲ್ಲಿನ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯಿದೆ. ಶನಿವಾರ (ಆ 10) ಮತ್ತು ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.
' ಈಗಾಗಲೇ ಎರಡು ದಿನ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿನ ಪರಿಸ್ಥಿತಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ. ಎಲ್ಲವನ್ನೂ ಕೇಂದ್ರ ಹಣಕಾಸು ಸಚಿವರಿಗೆ ವಿವರಿಸಲಾಗುವುದು' ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications