• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ: ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ, ವರ್ಗಾವಣೆ

|

ಬೆಂಗಳೂರು, ಸೆಪ್ಟೆಂಬರ್ 06 : ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿದೆ. ಕೆಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಶುಕ್ರವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ವರ್ಗಾವಣೆಗೊಂಡು ಸ್ಥಳ ನಿಯೋಜನೆ ಮಾಡದ ಹಲವು ಅಧಿಕಾರಿಗಳಿಗೆ ಸ್ಥಳಗಳನ್ನು ನೀಡಿದೆ. ಕೆಲವು ಅಧಿಕಾರಿಗಳಿಗೆ ಅವರ ಇಲಾಖೆ ಜೊತೆಗೆ ಬೇರೆ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.

ಎಸ್. ಸಸಿಕಾಂತ್ ಸೆಂಥಿಲ್ ರಾಜೀನಾಮೆ : ಯಾರು, ಏನು ಹೇಳಿದರು?

ಸಿ. ಶಿಖಾ ಅವರನ್ನು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಹೆಬ್ಸಿಬಾ ರಾಣಿ ಕೊರ್ಲಪಟ್ಟಿ ಅವರನ್ನು ಬೆಂಗಳೂರು ಸ್ಮಾರ್ಟ್‌ ಸಿಟಿ ಕಾರ್ಪೊರೇಷನ್ ಎಂ. ಡಿ. ಯಾಗಿ ನೇಮಕ ಮಾಡಲಾಗಿದೆ. ಸಂಪೂರ್ಣ ಪಟ್ಟಿ ಇಲ್ಲಿದೆ.

ದುರ್ಗಮ ಹಾದಿಯಲ್ಲಿ 15 ಕಿ.ಮೀ ನಡೆದು ಕುಗ್ರಾಮ ತಲುಪಿದ ಅಧಿಕಾರಿ

ಯಡಿಯೂರಪ್ಪ ಅಧಿಕಾರಕ್ಕೆ ಬಂದು ತಿಂಗಳಲ್ಲಿ 47 ಐಎಎಸ್ ಅಧಿಕಾರಿಗಳ ವರ್ಗಾವಣೆ

* ಡಾ. ರಾಜಕುಮಾರ್ ಖತ್ರಿ : ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಿಕ್ಷಣ ಇಲಾಖೆ

* ಅಮ್ಲಾನ್ ಆದಿತ್ಯ ಬಿಸ್ವಾಸ್ : ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗ (ಕೃಷ್ಣ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಆಯುಕ್ತರ ಹೆಚ್ಚುವರಿ ಹೊಣೆ)

* ಎ. ಬಿ. ಇಬ್ರಾಹಿಂ ಕಾರ್ಯದರ್ಶಿ : ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ

* ಸಿ. ಶಿಖಾ : ಬಿಎಂಟಿಸಿ ಎಂ. ಡಿ. (ಕರ್ನಾಟಕ ಮೂಲಭೂತ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕರ ಹೊಣೆಗಾರಿಗೆ)

* ಸಲ್ಮಾ ಕೆ. ಫಾಹಿಮ್ : ಎಂ. ಡಿ. ಗೋಲ್ಡ್‌ ಮೈನ್ಸ್

* ಕೆ. ಜಿ. ಶಾಂತರಾಮ್ : ಆಯುಕ್ತರು, ಕಾರ್ಮಿಕ ಇಲಾಖೆ

* ಅನಿರುದ್ಧ ಶ್ರವಣ್ : ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

* ಹೆಬ್ಸಿಬಾ ರಾಣಿ ಕೊರ್ಲಪಟ್ಟಿ : ಎಂ. ಡಿ. ಬೆಂಗಳೂರು ಸ್ಮಾರ್ಟ್‌ ಸಿಟಿ ಕಾರ್ಪೊರೇಷನ್

* ಕೆ. ಶ್ರೀನಿವಾಸ : ಆಯುಕ್ತರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ

* ಕೆ. ಲೀಲಾವತಿ : ನಿರ್ದೇಶಕರು, ವಿಕಲಚೇತನರ ಕಲ್ಯಾಣ ಇಲಾಖೆ

* ಡಾ. ಕೆ. ಅರುಂಧತಿ ಚಂದ್ರಶೇಖರ್ : ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

* ಎಂ. ಆರ್. ರವಿಕುಮಾರ್ : ಎಂ. ಡಿ. ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ

* ಎಂ. ಬಿ. ರಾಜೇಶ್ ಗೌಡ : ಎಂ. ಡಿ. ಬೆಸ್ಕಾಂ

English summary
Karnataka Government announced posting for 14 IAS officers on September 6, 2019. C. Shikha posted as Bangalore Metropolitan Transport Corporation (BMTC) MD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X