Breaking: ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಮೇಯರ್ ಮೀಸಲಾತಿ ಪ್ರಕಟ
ಬೆಂಗಳೂರು, ಆಗಸ್ಟ್ 24: ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಸೇರಿ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ 5 ತಿಂಗಳಿಂದ ಮೀಸಲಾತಿ ಪ್ರಕಟವಾಗಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಒಬಿಸಿ ಮೀಸಲಾತಿ ಗೊಂದಲವಾಗಿತ್ತು. ಇದರಿಂದ ರಾಜ್ಯ ಸರಕಾರ ಹೊಸ ಮೀಸಲಾತಿ ಪಟ್ಟಿ ಪ್ರಕಟ ಮಾಡಿರಲಿಲ್ಲ.

ಯಾವ್ಯಾವ ಪಾಲಿಕೆಯಲ್ಲಿ ಯಾರ್ಯಾರಿಗೆ ಮೀಸಲು..?
ಬಳ್ಳಾರಿ ಮಹಾನಗರ ಪಾಲಿಕೆ: ಮೇಯರ್ ಸ್ಥಾನಕ್ಕೆ ಒಬಿಸಿ (ಮಹಿಳೆ) , ಉಪಮೇಯರ್ - ಸಾಮಾನ್ಯ ವರ್ಗದ (ಮಹಿಳೆ)
ಬೆಳಗಾವಿ ಮಹಾನಗರ ಪಾಲಿಕೆ: ಮೇಯರ್ ಸ್ಥಾನ - ಸಾಮಾನ್ಯ ವರ್ಗ , ಉಪಮೇಯರ್ - ಪರಿಶಿಷ್ಟ ಜಾತಿ (ಮಹಿಳೆ)
ದಾವಣಗೆರೆ ಮಹಾನಗರ ಪಾಲಿಕೆ: ಮೇಯರ್ ಸ್ಥಾನ - ಸಾಮಾನ್ಯ (ಮಹಿಳೆ) , ಉಪಮೇಯರ್ -ಒಬಿಸಿ (ಮಹಿಳೆ)
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಮೇಯರ್ ಸ್ಥಾನ - ಸಾಮಾನ್ಯ ವರ್ಗ (ಮಹಿಳೆ), ಉಪಮೇಯರ್ -ಸಾಮಾನ್ಯ ವರ್ಗ

ಕಲಬುರಗಿ ಮಹಾನಗರ ಪಾಲಿಕೆ: ಮೇಯರ್ ಸ್ಥಾನ -ಎಸ್‌ಸಿ, ಉಪಮೇಯರ್ - ಸಾಮಾನ್ಯ ವರ್ಗ
ಮಂಗಳೂರು ಮಹಾನಗರ ಪಾಲಿಕೆ: ಮೇಯರ್ ಸ್ಥಾನ-ಸಾಮಾನ್ಯ , ಉಪಮೇಯರ್ - ಸಾಮಾನ್ಯ ವರ್ಗ (ಮಹಿಳೆ)
ಮೈಸೂರು ಮಹಾನಗರ ಪಾಲಿಕೆ: ಮೇಯರ್ ಸ್ಥಾನ -ಸಾಮಾನ್ಯ ವರ್ಗ, ಉಪಮೇಯರ್ - ಹಿಂದುಳಿದ ವರ್ಗ (ಮಹಿಳೆ)
ಶಿವಮೊಗ್ಗ ಮಹಾನಗರ ಪಾಲಿಕೆ: ಮೇಯರ್ ಸ್ಥಾನ -ಒಬಿಸಿ, ಉಪಮೇಯರ್ -ಸಾಮಾನ್ಯ ವರ್ಗ (ಮಹಿಳೆ)
ತುಮಕೂರು ಮಹಾನಗರ ಪಾಲಿಕೆ: ಮೇಯರ್ ಸ್ಥಾನ - ಪರಿಶಿಷ್ಟ ಜಾತಿ (ಮಹಿಳೆ), ಉಪಮೇಯರ್ - ಹಿಂದುಳಿದ ವರ್ಗ
ವಿಜಯಪುರ ಮಹಾನಗರ ಪಾಲಿಕೆ: ಮೇಯರ್ ಸ್ಥಾನ ಪರಿಶಿಷ್ಟ ಪಂಗಡ, ಉಪಮೇಯರ್ - ಹಿಂದುಳಿದ ವರ್ಗ
ಮೈಸೂರು ಹಾಲಿ ಮೇಯರ್ ಸುನಂದಾ ಪಾಲನೇತ್ರ ಅವಧಿ ಮುಗಿದು 5 ತಿಂಗಳಾಗಿತ್ತು. ಆದರೆ ಹಂಗಾಮಿ ಮೇಯರ್ ಆಗಿ ಮುಂದುವರೆದಿದ್ದರು. ನಾಡಹಬ್ಬ ಮೈಸೂರು ದಸರಾ ವೇಳೆಗೆ ಹೊಸ ಮೇಯರ್ ಅಧಿಕಾರ ಪಡೆಯುವ ಸಾಧ್ಯತೆ ಇದೆ.












Click it and Unblock the Notifications