SM Krishna: ಎಸ್.ಎಂ. ಕೃಷ್ಣ ಸಾವಿನ ಸುದ್ದಿ ಕೇಳಿ ಸಂಚಲನ, ಕನ್ನಡಿಗರು & ಭಾರತೀಯರಿಂದ...
ಕನ್ನಡಿಗರ ಪಾಲಿಗೆ 'ಐಟಿ & ಬಿಟಿ' ದೊರೆಯಾಗಿ, ಕನ್ನಡ ನಾಡು ಮರೆಯದ ನಾಯಕನಾಗಿ, ಕನ್ನಡಿಗರ ರಾಜಧಾನಿ ಬೆಂಗಳೂರಿಗೆ 'ಐಟಿ' ತವರು ಎಂಬ ಬಿರುದು ಸಿಗಲು ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ಆಧುನಿಕ ಕಾಲ ಘಟ್ಟದಲ್ಲಿ ಜಗತ್ತಿನ ಮೂಲೆ ಮೂಲೆಗೂ ಹಬ್ಬಿಸಿದ್ದ ಕೀರ್ತಿ & ಹೆಮ್ಮೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲಬೇಕಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಭಾರತದ ಮಾಜಿ ವಿದೇಶಾಂಗ ಸಚಿವರೂ ಆಗಿದ್ದ ಎಸ್.ಎಂ. ಕೃಷ್ಣ ಅವರ ಸಾವಿನ ಸುದ್ದಿ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಸಂಚಲನ ಸೃಷ್ಟಿ ಮಾಡಿದೆ. ಸೋಷಿಯಲ್ ಮೀಡಿಯಾ & ಇಂಟರ್‌ನೆಟ್ ಪೂರ್ತಿ ಎಸ್.ಎಂ. ಕೃಷ್ಣರ ಈ ಸಾವಿನ ಸುದ್ದಿ ತಲ್ಲಣ ಎಬ್ಬಿಸಿದೆ. ಹಾಗಾದ್ರೆ, ಮಾಜಿ ಮುಖ್ಯಮಂತ್ರಿ ಎಸ್ಎಂಕೆ ಸಾವಿಗೆ ಕಾರಣ ಏನು?

ಮಾಜಿ ಮುಖ್ಯಮಂತ್ರಿ ಎಸ್ಎಂಕೆ ಸಾವಿಗೆ...
ಕರ್ನಾಟಕದ ಸಿಎಂ ಆಗಿ, ಕರ್ನಾಟಕ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜಾಗತಿಕ ಮಟ್ಟದಲ್ಲಿ, ಕನ್ನಡ ನಾಡು ಗುರುತಿಸಿಕೊಳ್ಳಲು ಕೊಡುಗೆ ನೀಡಿದ್ರು ಎಸ್.ಎಂ. ಕೃಷ್ಣ ಅವರು. ಹೀಗಿದ್ದಾಗಲೇ, 92ರ ಇಳಿ ವಯಸ್ಸಿನಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆ ಎಸ್.ಎಂ. ಕೃಷ್ಣ ಅವರನ್ನು ಕಾಡಿದವು. ಅದರಲ್ಲೂ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ, ತುರ್ತು ನಿಗಾ ಘಟಕ ಅಂದ್ರೆ ಐಸಿಯು ಸೇರಿ ಚಿಕಿತ್ಸೆ ಪಡೆದರು.
ಹೀಗೆ ಎಸ್.ಎಂ. ಕೃಷ್ಣ ಅವರು ಚಿಕಿತ್ಸೆ ಫಲಿಸದೆ ಇದೀಗ ಇಹಲೋಕ ತ್ಯಜಿಸಿದ್ದು, ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳನ್ನ ಕೂಡ ಅಗಲಿ ಹೋಗಿದ್ದಾರೆ. ಹೀಗಿದ್ದಾಗ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾ ಸೇರಿ, ಇಡೀ ಇಂಟರ್‌ನೆಟ್ ಪೂರ್ತಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಜಗತ್ತಿನಾದ್ಯಂತ ಗಣ್ಯರು ಮಾಜಿ ಮುಖ್ಯಮಂತ್ರಿ ಹಾಗೂ ಭಾರತದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
'ಐಟಿ & ಬಿಟಿ' ಪಿತಾಮಹ ಎಸ್.ಎಂ. ಕೃಷ್ಣ
ನಾವು ಕನ್ನಡಿಗರು ಪ್ರತಿಕ್ಷಣ ಹೆಮ್ಮೆ ಪಡುವಷ್ಟು ವಿಚಾರಗಳು ನಮ್ಮ ಕನ್ನಡ ನಾಡಲ್ಲಿ, ಅಂದರೆ ಕರ್ನಾಟಕದಲ್ಲಿ ಇದೆ. ಅದರಲ್ಲೂ, 'ಐಟಿ & ಬಿಟಿ' ತವರು ಎಂಬ ಹೆಮ್ಮೆಯನ್ನು ಗಳಿಸಿದ್ದ, ಪ್ರಪಂಚದ ಮೂಲೆ ಮೂಲೆಗೂ ನಮ್ಮ ಬೆಂಗಳೂರು ತನ್ನ ಕೀರ್ತಿ ಪತಾಕೆ ಹಬ್ಬಿಸಿದ್ದ ಸಾಧನೆ ಹಿಂದಿನ ಕಾರಣವೇ ಎಸ್.ಎಂ. ಕೃಷ್ಣ ಅವರದ್ದು. ಆದರೆ, ಇದೀಗ ಅವರ ಅಗಲಿಕೆ ಅವರ ಅಭಿಮಾನಿಗಳು & ಬೆಂಬಲಿಗರಿಗೆ ಸಾಕಷ್ಟು ನೋವು ತರಿಸಿದೆ.












Click it and Unblock the Notifications