ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೀರಿಗಾಗಿ ಅರಣ್ಯ': ಕೋಟಿ ವೃಕ್ಷ ನೆಡೋಣ; ಕೋಟಿ ಬೀಜ ಬಿತ್ತೋಣ

ಜಲ ಮೂಲದಿಂದ ಅರಣ್ಯವನ್ನು ಕಾಪಾಡುವ ಹಾಗೂ ವೃದ್ಧಿಸುವ ಕಾರ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವ ಹಾಗೂ ಸಮೂಹ ಜವಾಬ್ಧಾರಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮವಾದ 'ನೀರಿಗಾಗಿ ಅರಣ್ಯ' ಕಾರ್ಯಕ್ರಮವನ್ನು ಕರ್ನಾಟಕ ಅರಣ್ಯ ಇಲಾಖೆ ಆಯೋಜಿಸಿದೆ.

|
Google Oneindia Kannada News

ಬೆಂಗಳೂರು, ಮೇ 29: ಅರಣ್ಯ ಇಲಾಖೆಯು 'ನೀರಿಗಾಗಿ ಅರಣ್ಯ' ಎನ್ನುವ ಘೋಷವಾಕ್ಯದಡಿ ಪ್ರಸಕ್ತ ಸಾಲಿನಲ್ಲಿ ಆರು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮದ ಜೊತೆಗೆ ಕೋಟಿ ಕೋಟಿ ಬೀಜವನ್ನು ಹೊತ್ತ ಮಣ್ಣಿನ ಉಂಡೆಗಳನ್ನು(Seed Ball) ಬಿತ್ತುವ ಕಾರ್ಯಕ್ರಮವನ್ಮ್ನ ಹಮ್ಮಿಕೊಂಡಿದೆ.

ಜಲ ಮೂಲವನ್ನು ಕಾಪಾಡಿಕೊಂಡು ಬಂದಿರುವ ಅರಣ್ಯಗಳೆಂಬ ವೃಕ್ಷ ಸಮೂಹಗಳನ್ನು ರಕ್ಷಿಸಿಸದಿದ್ದಲ್ಲಿ ಮತ್ತು ಹೆಚ್ಚಿಸದಿದ್ದಲ್ಲಿ ಮನುಕುಲಕ್ಕೆ ಉಳಿಗಾವಿಲ್ಲ. "ನೀರಿಗಾಗಿ ಅರಣ್ಯ" ಆಂದೋಲನಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳ, ಸಂಘ-ಸಂಸ್ಥೆಗಳ, ಸಾರ್ವಜನಿಕರ ಚುನಾಯಿತ ಪ್ರತಿನಿಧಿಗಳ ಗಣ್ಯವ್ಯಕ್ತಿಗಳ ಸಹಕಾರ ಅತಿ ಅಗತ್ಯವಾಗಿದೆ.

Karnataka Forest Department starts Forest for Water programme

ಜಲ ಮೂಲದಿಂದ ಅರಣ್ಯವನ್ನು ಕಾಪಾಡುವ ಹಾಗೂ ವೃದ್ಧಿಸುವ ಕಾರ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವ ಹಾಗೂ ಸಮೂಹ ಜವಾಬ್ಧಾರಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮವೂ ಇದಾಗಿದೆ.

ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ರಾಜ್ಯಾದ್ಯಂತ ಸ್ವಯಂಸೇವಕರನ್ನು ಆಯ್ಕೆಮಾಡಿ, ಅವರ ನೆರವಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಲು ಪ್ರೇರೇಪಿಸಲಾಗುವುದು. ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಕರುನಾಡನ್ನು ತರುನಾಡನ್ನಾಗಿ ಮಾಡಿ ಇಡೀ ರಾಜ್ಯವನ್ನು ಹಚ್ಚ ಹಸಿರಿನಿಂದ ಸಿಂಗರಿಸಿ, ಹಳ್ಳ-ಕೊಳ್ಳ ಹಾಗೂ ನದಿಗಳು ವರ್ಷಪೂರ್ತಿ ಹರಿಯುವಂತೆ ಮಾಡುವ ಉನ್ನತ ಗುರಿಯನ್ನು ಈ ಆಂದೋಲನ ಹೊಂದಿದೆ.

ಜೂನ್ 10 ರೊಳಗೆ ಸ್ವಯಂ ಸೇವಕರು ಸಮೀಪದ ವಲಯ ಅರಣ್ಯಾಧಿಕಾರಿಗಳ ಕಚೇರಿಗಳಲ್ಲಿ ತಮ್ಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಅರಣ್ಯ ಇಲಾಖಾ ಸಿಬ್ಬಂದಿಗಳ ಜೊತೆಗೂಡಿ ಬೀಜ ಸಂಗ್ರಹಿಸಿ, ಬೀಜಗಳನ್ನು ಮಣ್ಣಿನ ಉಂಡೆಗಳಲ್ಲಿ ಸೇರಿಸಿ ಈ ಮಳೆಗಾಲದಲ್ಲಿಯೇ ಬೀಜ ಹೊತ್ತ ಮಣ್ಣಿನ ಉಂಡೆಗಳನ್ನು ಸಮರೋಪಾದಿಯಲ್ಲಿ ಬಿತ್ತುವ ಬೃಹತ್ ಆಂದೋಲನದಲ್ಲಿ ಸಾರ್ವಜನಿಕರು ಭಾಗಿಯಾಗಬೇಕೆಂದು ಅರಣ್ಯ, ಪರಿಸರ ಮತ್ತು ಜೀವಿಶಾಸû್ರ ಸಚಿವ ಬಿ.ರಮಾನಾಥ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
The forest department of Karnataka has started an awareness programe named, 'Forest for Water', from May 29, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X