ಆಪರೇಷನ್ ಕಮಲಕ್ಕೆ ಯಡಿಯೂರಪ್ಪರಿಂದಲೇ ಯತ್ನ!
ಬೆಂಗಳೂರು, ಮೇ 19: ಅಪರೇಷನ್ ಕಮಲ ಬಳಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಬಿಜೆಪಿಯವರು ಸೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಅವರು ಸರಣಿ ಆಡಿಯೋ ಕ್ಲಿಪ್ಪಿಂಗ್ ಗಳನ್ನು ಹೊರಹಾಕುತ್ತಿದ್ದಾರೆ.
ಸದನದಲ್ಲಿ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಗೆ ಸಿದ್ದರಾಗುತ್ತಿರುವ ಹೊತ್ತಿಗೆ ಯಡಿಯೂರಪ್ಪ ಅವರ ವಿರುದ್ಧ ದೊಡ್ಡ ಬಾಂಬ್ ಹಾಕಲಾಗಿದೆ. ಹಿರೇಕೆರೂರಿನ ಕಾಂಗ್ರೆಸ್ ಶಾಸಕ, ನಟ ಬಿ.ಸಿ ಪಾಟೀಲ್ ಅವರನ್ನು ಬಿಜೆಪಿಗೆ ಸೆಳೆಯಲು ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಯತ್ನಿಸಿದರು ಎಂದು ಆರೋಪಿಸಲಾಗಿದೆ.
ಬಿಗ್ ಬ್ರೇಕಿಂಗ್ ಸುದ್ದಿ : ರಾಜೀನಾಮೆಗೆ ಯಡಿಯೂರಪ್ಪ ಸಿದ್ಧತೆ?
ಇದಕ್ಕೆ ಸಾಕ್ಷಿಯೆಂಬಂತೆ ಆಡಿಯೋ ಕ್ಲಿಪ್ಪಿಂಗ್ ಬಿಡುಗಡೆ ಮಾಡಲಾಗಿದೆ.ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಗೆ ಸಚಿವ ಸ್ಥಾನದ ಆಮಿಷ ಒಡ್ಡಿ ಯಡಿಯೂರಪ್ಪ ಸಿಕ್ಕಿ ಬಿದ್ದಿದ್ದಾರೆ. ಅದರ ಆಡಿಯೋ ಕ್ಲಿಪ್ ಮತ್ತು ವಿವರ ಇಲ್ಲಿದೆ.

ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ
ಬಿಎಸ್ ವೈ: ಹಲೋ...ಹಲೋ..
ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ ... ಹೇಳಿ... ನಮಸ್ಕಾರ...
ಬಿಎಸ್ ವೈ: ಹಲೋ... ಹಲೋ...ಎಲ್ಲಿದ್ದೀಯಪ್ಪಾ...?
ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ.... ಕೊಚ್ಚಿನ್ ಗೆ ಹೋಗುತ್ತಿದ್ದೇವೆ...ಬಸ್ ನಲ್ಲಿದ್ದೇನೆ.
ಬಿಎಸ್ ವೈ: ಹೋಗಬಾರದಿತ್ತು..! ಬಾರಯ್ಯ ನೀನು...ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ... ನಿನಗೇನು ಬೇಕೋ ಅದನ್ನು ಮಾಡುತ್ತೇನೆ.
ಬಿ.ಸಿ. ಪಾಟೀಲ್: ಆಯಿತು ಅಣ್ಣಾ...ನೀವು ಮೊದಲೇ ಒಂದೂ ಚೂರು ಹೇಳಿದ್ದರೇ...
ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!
ಬಿ.ಸಿ. ಪಾಟೀಲ್: ಹೌದು...
ಬಿ.ಎಸ್. ವೈ: ನೀನು ಹೋಗಬೇಡ... ಬಂದು ಬಿಡು...
ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..
ಬಿ.ಎಸ್. ವೈ: ಮನೆವ್ರು... ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!
ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್ ಅಂತಾ?
ಬಿ.ಎಸ್. ವೈ: ಯು ವಿಲ್ ಬಿಕಂ ದ ಮಿನಿಸ್ಟರ್ ದಟ್ಸ್ ಆಲ್!
ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ... ನನ್ನ ಜತೆ ಇಬ್ಬರು ಮೂವರು ಇದ್ದಾರೆ!
ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ...? ಕರೆದು ಕೊಂಡು ಬಾ...!
ಬಿ.ಸಿ. ಪಾಟೀಲ್ : ಖಂಡಿತ... ಖಂಡಿತ...!
ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ...!
ಬಿ.ಸಿ. ಪಾಟೀಲ್ : ಆಯ್ತಣ್ಣಾ...ಆಯ್ತಣ್ಣಾ...!
ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ
ಬಿ.ಸಿ. ಪಾಟೀಲ್: ಆಯ್ತಣ್ಣಾ... ಆಯ್ತಣ್ಣಾ...
ಬಿ.ಎಸ್. ವೈ: ಈಗೇನು ಮಾಡ್ತೀಯಾ... ಹೇಳು!
ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ... ನಾನು ಐದು ನಿಮಿಷದಲ್ಲಿ ಹೇಳ್ತೀನೀ ಅಣ್ಣಾ...!
ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು...!
ಬಿ.ಸಿ. ಪಾಟೀಲ್: ಆಯ್ತಣ್ಣಾ... ಆಯ್ತಣ್ಣಾ....!!












Click it and Unblock the Notifications