ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಕಂಪದ ಎಚ್ಚರಿಕೆ ಗಂಟೆಗೆ ಕಿವಿಗೊಡಲಿಲ್ಲ, ವಿನಾಶ ತಪ್ಪಲಿಲ್ಲ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಭಾರಿ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿರುವ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಇಂಥ ಪರಿಸ್ಥಿತಿ ಎದುರಾಗುವ ಮುನ್ಸೂಚನೆ ಜುಲೈ ತಿಂಗಳಿನಲ್ಲೇ ಸಿಕ್ಕಿತ್ತು ಎಂಬ ವರದಿ ಈಗ ಬಹಿರಂಗವಾಗಿದೆ. ಕೊಡಗು ಹಾಗೂ ಜಿಲ್ಲೆಯ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ್ದನ್ನು ಲೆಕ್ಕಿಸಿದೆ ಉಪೇಕ್ಷೆ ಮಾಡಿದ್ದರೆ ಪರಿಣಾಮವೇ ಇಂದು ಜಲ ಪ್ರಳಯವಾಗಿದೆ ಎಂಬ ಸತ್ಯ ಬಹಿರಂಗವಾಗಿದೆ.

ರಾಷ್ಟ್ರೀಯ ದೂರ ಸಂವೇದಿ ಕೇಂದ್ರ(NRSC) ನೀಡಿರುವ ಮಾಹಿತಿಯಂತೆ ಜುಲೈ 09ರಂದು ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ನೆರೆ ಜಿಲ್ಲೆಗಳಲ್ಲಿ ಭೂಕಂಪದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದರಿಂದ ಇದನ್ನು ಹೆಚ್ಚಾಗಿ ಆತಂಕಕಾರಿ ಎಂದು ಪರಿಗಣಿಸಲಿಲ್ಲ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಆದರೆ, ಇದಾದ ಬಳಿಕ ನಾಲ್ಕು ದಿನಗಳ ಬಳಿಕ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡು ಬಂದಿತು. 100 ವರ್ಷಗಳಲ್ಲಿ ಕಾಣದಂಥ ಮಳೆ ಅಬ್ಬರ ಕೇರಳ, ಕೊಡಗಿನಲ್ಲಿ ಶುರುವಾಯಿತು. ನೂರಾರು ಜನರನ್ನು ಬಲಿ ಪಡೆದು, ಅನೇಕ ಮಂದಿ ಗಾಯಾಳುವಾಗುವಂತೆ ಮಾಡಿತು. ಮನೆ ಕಳೆದುಕೊಂಡು ನಿರ್ಗತಿಕರಾಗುವಂತೆ ಮಾಡಿತು.

ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?

ಕೋಟ್ಯಂತರ ರುಪಾಯಿ ಆಸ್ತಿಪಾಸ್ತಿ ನಷ್ಟವನ್ನು ಭರಿಸಲು ಅಗತ್ಯ ನೆರವು ಸಿಗಬಹುದು. ಆದರೆ, ಅಪಾಯದ ಮುನ್ಸೂಚನೆ ಸಿಕ್ಕರೂ ಉಪಾಯ ಮಾಡದೆ ಸರ್ಕಾರಗಳು ಕಣ್ಮುಚ್ಚಿಕುಳಿತ್ತಿದ್ದಾದರೂ ಏಕೆ? ಎಂಬ ಪ್ರಶ್ನೆ ಮೂಡುತ್ತದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಸಣ್ಣ ಪ್ರಮಾಣದ ಭೂಕಂಪದ ನಂತರ ನಿರಂತರ ಮಳೆ ಆರಂಭವಾಗಿ ಭೂಮಿಯ ಪದರಗಳು ಸಡಿಲಗೊಂಡು ಭೂ ಕುಸಿತ ಶುರುವಾಗಿದೆ. ರಾಷ್ಟ್ರೀಯ ದೂರ ಸಂವೇದಿ ಕೇಂದ್ರವು ಭೂಕಂಪದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ ಬಳಿಕ ಸರ್ಕಾರವಾಗಲಿ, ವಿಪತ್ತು ನಿರ್ವಹಣಾ ಕೇಂದ್ರವಾಗಲಿ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಎಚ್ಚರಿಕೆ ಗಂಟೆ ಬಾರಿಸಲಿಲ್ಲ ಎಂಬ ಕೂಗೆದ್ದಿದೆ.

ಪರಿಸರ ಸ್ನೇಹಿ ವರದಿಗಳನ್ನು ಬದಿಗೊತ್ತಿದರು

ಪರಿಸರ ಸ್ನೇಹಿ ವರದಿಗಳನ್ನು ಬದಿಗೊತ್ತಿದರು

ಪ್ರೊ. ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಯನ್ನು ಬದಿಗೊತ್ತಿ, ಮನೆ, ಎಸ್ಟೇಟ್ ತೊರೆಯುವುದಿಲ್ಲ ಎಂದವರ ಸ್ಥಿತಿ ಇಂದು ಊಹಿಸಲು ಸಾಧ್ಯವಿಲ್ಲದ್ದಂತಾಗಿದೆ.

ಜುಲೈ 9ರ ಭೂಕಂಪದ ಗೆರೆ ಹಾಗೆ ಎಳೆದರೆ ಮಡಿಕೇರಿಯಿಂದ ಬಿಸಿಲೆ ಚಿಕ್ಕಮಗಳೂರಿನ ಎನ್ ಆರ್ ಪುರದ ತನಕ ತಾಗುತ್ತದೆ. ಈಗ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಭೂಕುಸಿತವಾಗುತ್ತಿರುವುದು ಇದೇ ಗೆರೆ ಸಾಗಿದ ಪ್ರದೇಶದಲ್ಲಿ ಎಂಬುದು ಗಮನಾರ್ಹ.

ಆತಂಕ ಬೇಡ ಎಂದಿದ್ದ ಸರ್ಕಾರದ ಟ್ವೀಟ್

ರಾಷ್ಟ್ರೀಯ ದೂರ ಸಂವೇದಿ ಕೇಂದ್ರ(NRSC) ನೀಡಿರುವ ಮಾಹಿತಿಯಂತೆ ಜುಲೈ 09ರಂದು ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ನೆರೆ ಜಿಲ್ಲೆಗಳಲ್ಲಿ ಭೂಕಂಪದ ಅನುಭವವಾಗಿತ್ತು ಎಂದು ಟ್ವೀಟ್ ಮಾಡಿತ್ತು. ಇದಾದ ಬಳಿಕ, ರಾಷ್ಟ್ರೀಯ ಹವಾಮಾನ ಇಲಾಖೆ(IMD) ಕೂಡಾ ಈ ಬಗ್ಗೆ ಪ್ರಕಟಣೆ ನೀಡಿತ್ತು. ಆದರೆ, ಈ ಬಗ್ಗೆ ಗಂಭೀರವಾಗಿ ಪರಿಗಣಿಸದ ಸರ್ಕಾರವು, ಸಿಸ್ಮಿಕ್ ಮೀಟರ್ ನಲ್ಲಿ ಈ ಬಗ್ಗೆ ಏನು ದಾಖಲಾಗಿಲ್ಲ. ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಭೂಮಿ ಅದುರಿದಂತೆ ಅನುಭವವಾಗಿದೆ. ಆದರೆ, ಯಾವುದೇ ಆತಂಕ ಬೇಡ ಎಂದಿತ್ತು.

ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಮಾಧವ ಗಾಡ್ಗೀಳ್ ವರದಿ ಬಂದ ನಂತರ ಕೇಂದ್ರ ಸರ್ಕಾರ 2012 ಆಗಸ್ಟ್ 17ರಂದು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಸಮಿತಿ ರಚಿಸಿತ್ತು.

ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ನಿಷೇಧಿಸುವುದು, ಪರಿಸರದ ಮೇಲೆ ಹಾನಿಯುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸುವುದು, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ ಬಳಸದಂತೆ ನಿಷೇಧ ಮುಂತಾದ ಪ್ರಸ್ತಾವನೆಗಳಿವೆ. ಸಮಿತಿ ಪಶ್ಚಿಮ ಘಟ್ಟದಲ್ಲಿ ಹಲವು ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಕೊಡಗು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಈ ಸೂಕ್ಷ್ಮ ವಲಯದಲ್ಲಿವೆ. ಒಟ್ಟು 1,550 ಗ್ರಾಮಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ಕೊಡುಗು ಜಿಲ್ಲೆಯ 55 ಗ್ರಾಮಗಳ ಇದರಲ್ಲಿವೆ.

‘ಪರಿಸರ ಸೂಕ್ಷ್ಮ' ಎಂದು ಘೋಷಿಸಿದ ಪ್ರದೇಶ

‘ಪರಿಸರ ಸೂಕ್ಷ್ಮ' ಎಂದು ಘೋಷಿಸಿದ ಪ್ರದೇಶ

ಕೇಂದ್ರ ಸರ್ಕಾರ 'ಪರಿಸರ ಸೂಕ್ಷ್ಮ' ಎಂದು ಘೋಷಿಸಿದ ಪ್ರದೇಶದಲ್ಲಿ ಮುಂದೆ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸಲು ಅನುಮತಿ ಇಲ್ಲ. ಒಂದು ವೇಳೆ ಇಂತಹ ಪ್ರಯತ್ನ ಮಾಡಿದರೇ ಅದು ಕಾನೂನು ಬಾಹಿರವಾಗುತ್ತದೆ. ಅಷ್ಟೇ ಅಲ್ಲ, ಆ ಭೂಮಿಯನ್ನು ಮಾರಾಟ ಮಾಡುವಂತಿಲ್ಲ. ಅಲ್ಲಿ ಮನೆ ನಿರ್ಮಾಣ ಮಾಡುವಂತಿಲ್ಲ. ಇದರ ಜೊತೆಗೆ ಇಂತಹ ಸೂಕ್ಷ್ಮ ಪ್ರದೇಶಗಳಿಂದ 19 ಕಿ.ಮೀ ವ್ಯಾಪ್ತಿಯವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರೊ. ಮಾಧವ್ ಗಾಡ್ಗೀಳ್ ಹಾಗು ಕಸ್ತೂರಿ ರಂಗನ್ ವರದಿಯಲ್ಲಿ ಹೇಳಲಾಗಿತ್ತು.

44,44 ಚದರ ಕಿ.ಮೀ. ಪಶ್ಚಿಮ ಘಟ್ಟ ವ್ಯಾಪಿಸಿಕೊಂಡಿದೆ.

44,44 ಚದರ ಕಿ.ಮೀ. ಪಶ್ಚಿಮ ಘಟ್ಟ ವ್ಯಾಪಿಸಿಕೊಂಡಿದೆ.

ಕಸ್ತೂರಿ ರಂಗನ್ ವರದಿಯಂತೆ ರಾಜ್ಯದಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು 'ಪರಿಸರ ಸೂಕ್ಷ್ಮ' ಪ್ರದೇಶ ಎಂದು ಗುರುತಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಟ್ಟು 44,44 ಚದರ ಕಿ.ಮೀ. ಪಶ್ಚಿಮ ಘಟ್ಟ ವ್ಯಾಪಿಸಿಕೊಂಡಿದೆ. ಬೆಳಗಾವಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಭಾಗಶ: ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ.

ಕೊಡಗಿನ 55 ಗ್ರಾಮಗಳು ಅತಿ ಸೂಕ್ಷ್ಮ ವಲಯದಲ್ಲಿತ್ತು

ಕೊಡಗಿನ 55 ಗ್ರಾಮಗಳು ಅತಿ ಸೂಕ್ಷ್ಮ ವಲಯದಲ್ಲಿತ್ತು

ಕೊಡಗಿನ 55 ಗ್ರಾಮಗಳು ಅತಿ ಸೂಕ್ಷ್ಮ ವಲಯದಲ್ಲಿದ್ದು, ಅಲ್ಲಿಂದ ಬೇರೆಡೆ ಎಲ್ಲರನ್ನು ವರ್ಗಾಯಿಸಿ, ಪುನರ್ವಸತಿ ಕಲ್ಪಿಸುವಂತೆ ಸೂಚಿಸಲಾಗಿತ್ತು. ವರದಿಯಲ್ಲಿದ್ದ ಗ್ರಾಮಗಳು ಇಂದು ನೆಲಕಚ್ಚಿವೆ. ಮಣ್ಣಲ್ಲಿ ಮಣ್ಣಾಗಿವೆ.

ಮುಕ್ಕೊಡ್ಲು, ಹಮ್ಮಿಯಾಲ, ಮೊಣ್ಣಂಗೇರಿ, ಗಾಳೀಬೀಡು, ಸಂಪಾಂಜೆ, ಭಾಗಮಂಡಲ, ಸುರ್ಲಬ್ಬಿ, ಕಾಲೂರು, ಅತ್ತಿಹೊಳೆ, ಇಗ್ಗೊಂಡ್ಲ್ಲು, ಮೇಘತಾಳು, ಎಮ್ಮೆತಾಳು ಮುಂತಾದ ಗ್ರಾಮಗಳು ವರದಿಯಲ್ಲಿವೆ. ತಜ್ಞರ ಮಾತು ಕೇಳಿದ್ದರೆ ಇಂದು ಎಷ್ಟು ಜೀವಗಳು, ಜೀವ ವೈವಿಧ್ಯ ಪರಿಸರ ಉಳಿಸಬಹುದಾಗಿತ್ತು.

English summary
National Remote Sensing Centre shows that a moderate intensity quake measuring 3.4 on the Richter Scale struck Kodagu, Hassan and Chikkamgaluru and neighbouring Kerala, on July 9. Government ignored the warning which led to massive destruction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X