ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು-2014: 25 ಬೆಳೆಗಳಿಗೆ ಕೃಷಿ ವಿಮೆ ಭಾಗ್ಯ

By Srinath
|
Google Oneindia Kannada News

ಬೆಂಗಳೂರು, ಮೇ21: ರಾಷ್ಟ್ರೀಯ ಬೆಳೆ ವಿಮಾ ಯೋಜನೆಯಡಿ ಮುಂದಿನ (2014) ಮುಂಗಾರು ಹಂಗಾಮಿನಲ್ಲಿ ರೈತರು 25 ಬೆಳೆಗಳಿಗೆ ಕೃಷಿ ವಿಮೆ ಪಡೆಯಬಹುದಾಗಿದೆ. ಬದಲಾದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯ ಮಾಡಿ ಇಂದು ಅಧಿಸೂಚನೆ ಹೊರಡಿಸಲಾಗಿದೆ.

ವಿಮೆ ಮಾಡಿಸಿಕೊಳ್ಳಲು ಜೂನ್ 30 ಕೊನೆಯ ದಿನವಾಗಿರುತ್ತದೆ. 2014ರ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪ ಅಂದರೆ ಆಲಿಕಲ್ಲು ಮಳೆ ಮತ್ತು ಭೂಮಿ ಕುಸಿತ ಇವುಗಳಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.

ಈ ಯೋಜನೆಯು ಬೆಳೆ ಮೇಲೆ ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿರುತ್ತದೆ. ಬೆಳೆ ಸಾಲ ಪಡೆಯದಿರುವ ರೈತರು ತಮಗಿಚ್ಚೆಯಿದ್ದಲ್ಲಿ ವಿಮೆ ಮಾಡಿಸಿಕೊಳ್ಳಬಹುದು. ಅಂತಹ ರೈತರು ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಿ, ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲಾತಿಗಳಾದ ಪಹಣಿ/ಖಾತೆ ಪತ್ರ/ಕಂದಾಯ ರಶೀದಿ ನೀಡಬೇಕು. ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವಿಮಾ ಕಂತನ್ನು ಕಟ್ಟಬೇಕು.

karnataka-harmers-to-get-insurance-for-25-crops-in-monsoon-2014

ಈ ಯೋಜನೆಯಡಿ 25 ಬೆಳೆಗಳಾದ ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಸಜ್ಜೆ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ಸಾಸಿವೆ (ಮಳೆ ಆಶ್ರಿತ), ಉದ್ದು (ಮಳೆ ಆಶ್ರಿತ), ತೊಗರಿ (ನೀರಾವರಿ), ತೊಗರಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಸೋಯಾ ಅವರೆ (ನೀರಾವರಿ), ಸೋಯಾ ಅವರೆ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಹರಳು (ಮಳೆ ಆಶ್ರಿತ), ನೆಲಗಡಲೆ-ಶೇಂಗಾ (ನೀರಾವರಿ) ಮತ್ತು ನೆಲಗಡಲೆ-ಶೇಂಗಾ (ಮಳೆ ಆಶ್ರಿತ) ಇವುಗಳಲ್ಲಿ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ವಿವಿಧ ವಿಮಾ ಸಂಸ್ಧೆಗಳಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

ಮುಂಗಾರು-2014 ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರು ಬೆಳೆ ನಷ್ಟವಾದ 48 ಗಂಟೆಗಳೊಳಗಾಗಿ ಅರ್ಜಿಯನ್ನು ಸಂಬಂಧಿಸಿದ ಬ್ಯಾಂಕಿನಲ್ಲಿ ಅಥವಾ ನೇರವಾಗಿ ವಿಮಾ ಸಂಸ್ಥೆಗಳಿಗೆ ನೀಡಬೇಕು. ಅರ್ಜಿಯಲ್ಲಿ ಬೆಳೆಯ ವಿವರ, ನಷ್ಟಕ್ಕೆ ಕಾರಣವನ್ನು ಹಾಗೂ ಬೆಳೆ ನಷ್ಟ ವ್ಯಾಪ್ತಿಯ ವಿವರಗಳನ್ನು ನೀಡಬೇಕು. ವಿಮಾ ಸಂಸ್ಧೆಗಳು ವಿವರಗಳನ್ನು ಪಡೆದು ನಷ್ಟ ನಿರ್ಧಾರಕರನ್ನು ರೈತರ ಜಮೀನಿಗೆ ಕಳುಹಿಸಿ, ಮೌಲ್ಯಮಾಪನ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವುದು.

ಈ ಯೋಜನೆಯನ್ನು ಐದು ವಿಮಾ ಸಂಸ್ಧೆಗಳಾದ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ, ಹೆಚ್‌ಡಿಎಫ್‌ಸಿ ಆಗ್ರೊ ಜನರಲ್ ಇನ್ಸೂರೆನ್ಸ್ ಕಂಪನಿ ಲಿ, ಚೋಳ ಮಂಡಲಮ್ ಎಂಎಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ, ಮತ್ತು ಇಫ್ಕೊ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿ ಅನುಷ್ಠಾನಗೊಳಿಸುತ್ತಿವೆ.

English summary
The Karnataka farmers to get insurance for 25 crops in Monsoon-2014 for loss due to weather. Last date to get enrolled for the scheme is June 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X