ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಭಾರ ಕುಸಿತ: ರಾಜ್ಯದಲ್ಲಿ ಇನ್ನು 3 ದಿನ ಮಳೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 08: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮೂರು ದಿನ ಕಾಲ ಮುಂದುವರಿಯಲಿದೆ. ಅರಬ್ಬಿ ಸಮುದ್ರದಲ್ಲೂ ವಾಯುಭಾರ ಕುಸಿತದ ಪರಿಣಾಮ ಉಂಟಾಗಿದ್ದು, ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ದಕ್ಷಿಣ ಒಳನಾಡಿನ ಹಾಸನ, ಶಿವಮೊಗ್ಗ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನ ಮಳೆ ಮುಂದುವರಿಯಲಿದೆ.[ವರುಣನ ಆವಾಂತರಗಳನ್ನು ಚಿತ್ರದಲ್ಲಿ ನೋಡಿ]

Karnataka expect heavy rain for next 3 days, October 8

ತೊಂಡೆಬಾವಿಯಲ್ಲಿ 7 ಸೆಂ.ಮೀ, ಚಿಂತಾಮಣಿ 5, ಗೇರುಸೊಪ್ಪ, ಗೌರಿಬಿದನೂರು 4, ಕದ್ರಾ, ಹಾವೇರಿ, ಕೊರಟಗೆರೆ, ಚಿಕ್ಕನಹಳ್ಳಿ 3, ಕುಮಟಾ, ಕೊಪ್ಪ, ಹೆಸರಘಟ್ಟ, ಮೂಡಬಿದಿರೆ, ಮೂಲ್ಕಿ, ಬಂಟ್ವಾಳ, ಮಾಣಿ, ಸುಳ್ಯ, ಮಧುಗಿರಿಯಲ್ಲಿ 2 ಸೆಂ.ಮೀ ಮಳೆಯಾಗಿದೆ.[ಜೋಗ ಮೈ ದುಂಬಿದೆ]

ಬೆಂಗಳೂರಿನ ವಾತಾವರಣವೇನು?
ಮೋಡ ಕವಿದ ವಾತಾವರಣವಿದ್ದು, ಸಂಜೆ ಸಾಧಾರಣ ಮಳೆ ಬೀಳುವ ಸಂಭವವಿದೆ. ಇದೇ ರೀತಿಯ ವಾತಾವರಣ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಒಂದು ವಾರದಿಂದ ಪ್ರತಿದಿನ ಸಂಜೆ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ.

English summary
Rain and thundershowers would occur at most places over Coastal Karnataka, at many places over South Interior Karnataka and at a few places over North Interior Karnataka Meteorological Department said on their report. Heavy rains lashed many district on Wednesday October 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X