ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಮಾರ್ಚ್ 21ರ ವರೆಗೂ ಪಬ್, ಕ್ಲಬ್ ಬಂದ್: ಅಬಕಾರಿ ಇಲಾಖೆ

|
Google Oneindia Kannada News

ಬೆಂಗಳೂರು, ಮಾರ್ಚ್ 14: ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಕರ್ನಾಟಕ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಮಾಲ್, ಸಿನಿಮಾ ಚಿತ್ರಮಂದಿರ, ಪಬ್, ಕ್ಲಬ್, ನೈಟ್‌ ಪಾರ್ಟಿ, ಮದುವೆ ಸಮಾರಂಭ, ಸಮಾವೇಶ, ಮೇಳ, ಕ್ರೀಡಾಕೂಟ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೂ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು.

ರಾಜ್ಯ ಸರ್ಕಾರದ ಸೂಚನೆ ಅನ್ವಯ ಕರ್ನಾಟಕ ಅಬಕಾರಿ ಇಲಾಖೆ ಅಧಿಕೃತವಾಗಿ ರಾಜ್ಯದ ಎಲ್ಲ ಕ್ಲಬ್ ಮತ್ತು ಪಬ್‌ಗಳಿಗೆ ನೊಟೀಸ್ ನೀಡಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 (1) ಮತ್ತು 3 (2)ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಉಪಯೋಗಿಸಿ ಅಬಕಾರಿ ಆಯುಕ್ತರು ಯಶವಂತ.ವಿ ಆದೇಶಿಸಿದ್ದಾರೆ.

ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಿಂದ ಪರಾರಿಯಾದ 5 ಕೊರೊನಾ ಶಂಕಿತರುಆಸ್ಪತ್ರೆಯ ಪ್ರತ್ಯೇಕ ಕೊಠಡಿಯಿಂದ ಪರಾರಿಯಾದ 5 ಕೊರೊನಾ ಶಂಕಿತರು

ಮಾರ್ಚ್ 14 ರ ಬೆಳಿಗ್ಗೆ 6 ರಿಂದ ಮಾರ್ಚ್ 21ರವರೆಗೂ ಮಧ್ಯರಾತ್ರಿಯವರೆಗೂ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಬ್‌ಗಳು ಹಾಗೂ ಕ್ಲಬ್‌ಗಳು ತಕ್ಷಣ ಮುಚ್ಚಬೇಕೆಂದು ಉಲ್ಲೇಖಿಸಲಾಗಿದ್ದು, ಈಗಾಗಲೇ ಪಬ್ ಮತ್ತು ಕ್ಲಬ್ ಗಳು ಬಾಗಿಲು ಹಾಕಿದ್ದಾರೆ.

Karnataka Excise Department Direct To Close All Pub And Club

ಕಲಬುರ್ಗಿಯಲ್ಲಿ 74 ವರ್ಷ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಇದು ಮೊದಲ ಸಾವು. ದೆಹಲಿಯಲ್ಲಿ ಮಹಿಳೆಯೊಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಒಟ್ಟಾರೆ ಭಾರತದಲ್ಲಿ 83 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಎರಡು ಸಾವು ಸಂಭವಿಸಿದೆ.

English summary
Karnataka excise department direct to close all pub and club all over state, because of coronavirus fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X