ಬಿಜೆಪಿ ಜೆಡಿಎಸ್ ಭಾಯಿ-ಭಾಯಿ: ಶುರುವಾಯ್ತು ಟ್ವಿಟ್ಟರ್ ಲಡಾಯಿ!
ಮಾಜಿ ಪ್ರಧಾನಿ ದೇವೇಗೌಡರನ್ನು ಬಾಯ್ತುಂಬ ಹೊಗಳುವ ಮೂಲಕ ಹಾಲಿ ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರ ಬಾಯಿಗೆ ಆಹಾರವಾಗಿದ್ದಾರಾ?
ವಿಶ್ವಾಸಘಾತುಕ ಎಂದು ಒಂದಾನೊಂದು ಕಾಲದಲ್ಲಿ ಜೆಡಿಎಸ್ ಅನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಬಿಜೆಪಿ ನಾಯಕರೇ ಇಂದು ತೆನೆಹೊತ್ತ ಮಹಿಳೆಗೆ ಕಮಲ ಮುಡಿಸುತ್ತಾರಾ..?
ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿರುವ ನರೇಂದ್ರ ಮೋದಿ, ಉಡುಪಿಯಲ್ಲಿ ನಿನ್ನೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ದೇವೇಗೌಡರನ್ನು ಹೊಗಳಿದ್ದರು. ಮೋದಿಯವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕಾಸ್ತ್ರಗಳು ಪ್ರಯೋಗವಾಗುತ್ತಿದೆ. ಕೆಲವರು ಮೋದಿ ನಡೆಯನ್ನು 'ಗ್ರೇಟ್ ಸ್ಟ್ರಾಟಜಿ' ಎಂದು ಬಣ್ಣಿಸಿದ್ದಾರೆ ಕೂಡ!
| Array |
ಮೋದಿ ಬುದ್ಧಿವಂತ ರಾಜಕಾರಣಿ
ಮೋದಿ ಒಬ್ಬ ಬುದ್ಧಿವಂತ ರಾಜಕಾರಣಿ. ಚುನಾವಣೆಯ ಸಮಯದಲ್ಲಿ ಯಾರನ್ನಾದರೂ ಹೊಗಳುವ ವ್ಯಕ್ತಿ ಎಂದರೆ ಅವರು. ಬಹುಶಃ ಕರ್ನಾಟಕದಲ್ಲಿ ಚುನಾವಣೆಯ ನಂತರ ಬಿಜೆಪಿ-ಜೆಡಿಎಸ್ ಒಂದಾಗಬಹುದು. ಅವರಿಗೆ ಕರ್ನಾಟಕದಲ್ಲಿ ಸೋಲುವ ಭೀತಿ ಶುರುವಾಗಿದೆ. ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ ಮೋದಿ, ಮುಲಾಯಂ ಸಿಂಗ್ ಯಾದವ್ ಅವರನ್ನು ಏಕೆ ಹೊಗಳಲಿಲ್ಲ. ಅವರೂ ಹಿರಿಯ ಸಂಸದರೇ ತಾನೇ? ಎಂದು ಕಾಲೆಳೆದಿದ್ದಾರೆ ನಾಗಾರ್ಜುನ್
|
ನರೇಂದ್ರ ಮೋದಿ ಒಬ್ಬ ಮಾಸ್ಟರ್ ಸ್ಟ್ರಾಟಜಿಸ್ಟ್
ನರೇಂದ್ರ ಮೋದಿ ಒಬ್ಬ ಮಾಸ್ಟರ್ ಸ್ಟ್ರಾಟಜಿಸ್ಟ್. ದೇವೇಗೌಡರನ್ನು ಹೊಗಳುವ ಮೂಲಕ ಇಂದು ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಬಾಯಿಯನ್ನು ಒಂದೇ ಏಟಿಗೆ ಮುಚ್ಚಿಸಿದ್ದಾರೆ. ಕಾಂಗ್ರೆಸ್ಸಿಗರು ಮುಸ್ಲಿಂ ಮತಕ್ಕೆ ಗುರಿಯಿಟ್ಟಿದ್ದರೆ, ಮೋದಿ ಈ ಮೂಲಕ ಬಿಜೆಪಿಗೆ ಒಕ್ಕಲಿಗರ ಮತ ತಂದುಕೊಡುತ್ತಿದ್ದಾರೆ ಎಂದಿದ್ದಾರೆ ಚಕ್ರವರ್ತಿ ಸೂಲಿಬೆಲೆ.
|
ಬಿಜೆಪಿಯದು ಮಿಶನ್ 150 ಅಲ್ಲ, 75!
ಬಿಜೆಪಿ ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಲೇ, ತನ್ನ ಗುರಿ ಮಿಶನ್ 150 ಅಲ್ಲ, ಮಿಶನ್ 75 ಎಂಬುದನ್ನು ಒಪ್ಪಿಕೊಳ್ಳುತ್ತಿದೆ. 2014 ರಲ್ಲಿ ದೇವೇಗೌಡ ಅವರನ್ನು ಗುಜರಾತಿನ ವೃದ್ಧಾಶ್ರಮದಲ್ಲಿ ಇಡುವುದಾಗಿ ಮೋದಿ ಹೇಳಿದ್ದರು ಎಂದು ನೆನಪಿಸಿದ್ದಾರೆ ಶ್ರೀವತ್ಸ.
|
ಹಳ್ಳಕ್ಕೆ ಬಿದ್ದ ಮೋದಿ!
ದೇವೇಗೌಡರನ್ನು ಹೊಗಳುವ ಮೂಲಕ ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ ನರೇಂದ್ರ ಮೋದಿ. ಇದು ಒಕ್ಕಲಿಗ ಸಮುದಾಯದಲ್ಲಿ ಜೆಡಿಎಸ್ ಎಷ್ಟರಮಟ್ಟಿಗೆ ಜಾತ್ಯತೀತ ತತ್ವಕ್ಕೆ ನಿಷ್ಠವಾಗಿದೆ ಎಂಬುದನ್ನು ಅವಲೋಕಿಸುವಂತೆ ಮಾಡಿದೆ. ಆದ್ದರಿಂದ ಒಕ್ಕಲಿಗ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಕಾಂಗ್ರೆಸ್ಸಿಗೇ ಬೆಂಬಲ ನೀಡುವ ಸಾಧ್ಯತೆಗಳು ಜಾಸ್ತಿ ಎಂದಿದ್ದಾರೆ ಎಚ್ ಎ ಶಂಕರನಾರಾಯಣ.
| Array |
ಭ್ರಷ್ಟ ರೆಡ್ಡಿಗಳಿಗೆ ಮತಹಾಕಿದಂತೆ
ಉಡುಪಿಯಲ್ಲಿ ದೇವೇಗೌಡರ ಮೇಲೆ ಮೋದಿ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ಬಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಸಾರ್ವಜನಿಕವಾಗಿಯೇ ಸೂಚನೆ ಸಿಕ್ಕಿದೆ. ಅಂದರೆ ಜೆಡಿಎಸ್ ಗೆ ಮತಹಾಕುವುದು ಭ್ರಷ್ಟ ರೆಡ್ಡಿಗಳಿಗೆ ಮತಹಾಕಿದಂತೆ ಎಂದಿದ್ದಾರೆ ಅರುಣ ಮೈಸೂರು.












Click it and Unblock the Notifications