ಟಿಪ್ಪು ಮಾತ್ರವಲ್ಲ, 30 ನಾಯಕರ ಜಯಂತಿ ಮಾಡ್ತೀವಿ
ಬೆಂಗಳೂರು, ಮೇ 6: ಮತ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಸುಲ್ತಾನರ ಜಯಂತಿಗಳನ್ನು ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರ ಕಣ್ಣು ಮತಕ್ಕಾಗಿ ಟಿಪ್ಪು ಮೇಲೆ ಬಿದ್ದಿದೆ ಎಂದಿರುವ ಸಿದ್ದರಾಮಯ್ಯ, ನಿಜವಾದ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವವರು ನೀವೇ ಎಂದು ತೀಕ್ಷ್ಣ ಉತ್ತರ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಿದ್ದರಾಮಯ್ಯ ಅವರ ಸರ್ಕಾರವು ಮತ ಬ್ಯಾಂಕ್ ರಾಜಕೀಯಕ್ಕಾಗಿ ಸುಲ್ತಾನರ ಜಯಂತಿಗಳನ್ನು ಆಚರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

'ಕಾಂಗ್ರೆಸ್‌ನ ಗುಣವನ್ನು ನೋಡಿ. ಪೀಳಿಗೆಯಿಂದ ಪೀಳಿಗೆಗೆ ನಮಗೆ ಸ್ಫೂರ್ತಿಯಾದ ವ್ಯಕ್ತಿಗಳ ಜಯಂತಿಯನ್ನು ಗೌರವದಿಂದ ಆಚರಿಸಬೇಕಿತ್ತು. ಆದರೆ, ಅವರು ಸವರ ಜಯಂತಿಗಳನ್ನು ಆಚರಿಸುವ ಬಗ್ಗೆ ಯೋಚನೆಯನ್ನೂ ಮಾಡಲಾರರು.
ವೀರ ಮದಕರಿ ಮತ್ತು ಒನಕೆ ಓಬವ್ವ ಅವರನ್ನು ಮರೆತಿದ್ದಾರೆ. ಆದರೆ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಸುಲ್ತಾನರ ಜಯಂತಿಗಳನ್ನು ಆಚರಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
We celebrate Birth Anniversaries of about 30 leader, saints, & builders of Karnataka. PM with eyes on the votes is trying to polarise our society by highlighting one of them: Tipu Sultan.
— Siddaramaiah (@siddaramaiah) 6 May 2018
Now who is doing “vote bank politics?” https://t.co/aX6JT2Zlsc
ಇದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರಿಸಿರುವ ಸಿದ್ದರಾಮಯ್ಯ, 'ನಾಯಕರು, ಸಾಧುಗಳು ಮತ್ತು ಕರ್ನಾಟಕವನ್ನು ನಿರ್ಮಿಸಿದ ಸುಮಾರು 30 ಮಂದಿ ಮಹನೀಯರ ಜಯಂತಿಗಳನ್ನು ನಾವು ಆಚರಿಸುತ್ತಿದ್ದೇವೆ. ಆದರೆ, ಮತಗಳ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮಹನೀಯರಲ್ಲಿ ಒಬ್ಬರಾದ ಟಿಪ್ಪು ಸುಲ್ತಾನ್ ಹೆಸರನ್ನು ಬಿಂಬಿಸುವ ಮೂಲಕ ನಮ್ಮ ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ'.
ಈಗ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಯಾರು? ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications