ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಯನ್ನು ಕ್ಷಮಿಸಿದ್ದೇಕೆ? : ಬಿಎಸ್‌ವೈಗೆ ಸಿದ್ದರಾಮಯ್ಯ ಪ್ರಶ್ನೆ

|
Google Oneindia Kannada News

Recommended Video

ಜನಾರ್ಧನ ರೆಡ್ಡಿಯನ್ನ ಕ್ಷಮಿಸಿದ್ದೇಕೆ ಎಂದು ಸಿದ್ದು ಬಿಜೆಪಿ ನಾಯಕರಿಗೆ ಟ್ವಿಟ್ಟರ್ ನಲ್ಲಿ ಕ್ಲಾಸ್

ಬೆಂಗಳೂರು, ಏಪ್ರಿಲ್ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಜನಾರ್ದನ ರೆಡ್ಡಿ, ಕರಾವಳಿಯ ಪರಿಸ್ಥಿತಿಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

'ಜನಾರ್ದನ ರೆಡ್ಡಿ ಅವರನ್ನು ರಾಜ್ಯದ ಹಿತಕ್ಕಾಗಿ ಕ್ಷಮಿಸಿದ್ದೇನೆ' ಎಂದು ಯಡಿಯೂರಪ್ಪ ನೀಡಿದ ಹೇಳಿಕೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಇದನ್ನು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಹಿತ ಎಂದರೆ ಏನು? ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟ ರೆಡ್ಡಿ, ಶ್ರೀರಾಮುಲು ಗೆಲ್ಲಿಸುವುದು ಒಂದೇ ಗುರಿ!ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟ ರೆಡ್ಡಿ, ಶ್ರೀರಾಮುಲು ಗೆಲ್ಲಿಸುವುದು ಒಂದೇ ಗುರಿ!

@siddaramaiah ಟ್ವಿಟರ್ ಖಾತೆ ಮೂಲಕ ಶುಕ್ರವಾರ ಬೆಳಗ್ಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದು, 'ಪ್ರಧಾನಿ ಮೋದಿ ಅವರಿಗೆ ಸಿಬಿಐಗೆ ನಿರ್ದೇಶನ ಕೊಟ್ಟು ಜನಾರ್ದನ ರೆಡ್ಡಿ ಅವರನ್ನು ಕ್ಷಮಿಸುವಂತೆ ಕೇಳಿದ್ದೀರಾ?' ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವಿಟ್ಟರ್ ವಾರ್ : 'ಬಿಎಸ್‌ವೈ ಡಮ್ಮಿ' ಎಂದು ಟ್ವೀಟ್!ಸಿದ್ದರಾಮಯ್ಯ ಟ್ವಿಟ್ಟರ್ ವಾರ್ : 'ಬಿಎಸ್‌ವೈ ಡಮ್ಮಿ' ಎಂದು ಟ್ವೀಟ್!

ಬಿ.ಶ್ರೀರಾಮುಲು ಪರವಾಗಿ ಜನಾರ್ದನ ರೆಡ್ಡಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೇ ಪ್ರತಿಪಕ್ಷಗಳು ಅಸ್ತ್ರವಾಗಿ ಮಾಡಿಕೊಂಡಿದ್ದು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿವೆ. ಸಿದ್ದರಾಮಯ್ಯ ಅವರು ಈ ಕುರಿತು ಸರಣಿ ಟ್ವಿಟ್‌ಗಳನ್ನು ಮಾಡಿದ್ದಾರೆ.

ರಾಜ್ಯದ ಹಿತ ಅಡಗಿದೆಯೇ?

ಇದು ಆಸಕ್ತಿದಾಯಕವಾಗಿದೆ ಯಡಿಯೂರಪ್ಪ ಅವರು ಜನಾರ್ದನ ರೆಡ್ಡಿ ಅವರನ್ನು ರಾಜ್ಯದ ಹಿತಕ್ಕಾಗಿ ಕ್ಷಮಿಸಿದ್ದಾರೆ ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

'ಮನುಷ್ಯ ವಿರೋಧಿ ಬಿಜೆಪಿ ಸಂಸದರು'

ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಮನುಷ್ಯ ವಿರೋಧಿಯಾಗಿರುವ ಬಿಜೆಪಿ ಸಂಸದರನ್ನು ಜನರು ಆಯ್ಕೆಮಾಡಿದ್ದಾರೆ.

'ಜನರು ನೆಮ್ಮದಿಯಿಂದ ಇರಬಾರದು'

ಬಿಜೆಪಿ ನಾಯಕರಿಗೆ ಜನರು ನೆಮ್ಮದಿಯಿಂದ ಬದುಕುವುದು ಬೇಕಿಲ್ಲ. ಅವರಿಗೆ ಜನ ಹೊಡೆಯಬೇಕು, ಕಡಿಯಬೇಕು, ಅಮಾಯಕರು ಸಾಯುವ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು.

ರಾಜ್ಯದ ಮಾನ ಕಳೆಯುತ್ತಿದ್ದಾರೆ

ಕರಾವಳಿಯಲ್ಲಿ ಉಗ್ರಗಾಮಿಗಳಿದ್ದಾರೆ, ಜಿಹಾದಿಗಳಿದ್ದಾರೆ ಎಂದು ಬಿಜೆಪಿ ನಾಯಕರು ತಮ್ಮ ಊರಿನ, ರಾಜ್ಯದ ಮಾನ ಕಳೆಯುತ್ತಿದ್ದಾರೆ.

ಪಕ್ಷ ಗೆದ್ದಿರುವುದು 4 ಸ್ಥಾನ

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಕೋಮು ಭಾವನೆಯ ಬೆಂಕಿ ಉಗುಳುವ ಭಾಷಣ ಮಾಡಿದ್ದರು. ಆದರೆ, ಬಿಜೆಪಿ ಗೆದ್ದಿರುವುದು ಕೇವಲ 4 ಸ್ಥಾನ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ

ಇಂದು ಕಾಂಗ್ರೆಸ್ ಮುಂದೆಯೂ ಕಾಂಗ್ರೆಸ್

ದಕ್ಷಿಣ ಕನ್ನಡದಲ್ಲಿ 7 ಕಾಂಗ್ರೆಸ್ ಶಾಸಕರು ಇದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ ಎಲ್ಲರೂ ಇದ್ದಾರೆ. ಇಲ್ಲಿ ಈಗಲು ಕಾಂಗ್ರೆಸ್ ಮುಂದೆಯೂ ಕಾಂಗ್ರೆಸ್ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Karnataka Chief Minister Siddaramaiah in his tweets asked several questions to Karnataka BJP leaders. In tweet he said that, Very interesting! @BSYBJP has pardoned Reddy in interest of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X