ವಿಧಾನಸಭೆ ಚುನಾವಣೆ: ಕೃಷ್ಣರಾಜ ಕ್ಷೇತ್ರದಲ್ಲಿ ಗೆಲುವು ಯಾರಿಗೆ?

ಮೈಸೂರು, ಮಾರ್ಚ್ 21 : ಮೈಸೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಕೃಷ್ಣರಾಜನಗರ ವಿಧಾನಸಬಾ ಕ್ಷೇತ್ರ ಒಂದು. ಭತ್ತದ ಕಣಜ ಎಂತಲೇ ಹೆಸರು ವಾಸಿಯಾಗಿರುವ ಕೆ.ಆರ್. ನಗರ ಕ್ಷೇತ್ರ ಜಿದ್ದಾ ಜಿದ್ದಿನ ರಾಜಕೀಯಕ್ಕೆ ಹೆಸರುವಾಸಿ. ಹಾಸನ ಹಾಗೂ ಮಂಡ್ಯ ಜಿಲ್ಲೆ ಎರಡಕ್ಕೂ ಹೊಂದಿಕೊಂಡಿರುವ ಕ್ಷೇತ್ರವಾದ್ದರಿಂದ ಜೆಡಿಎಸ್ ಪ್ರಭಾವ ಈ ಕ್ಷೇತ್ರದಲ್ಲಿ ಜಾಸ್ತಿ ಇದೆ.

ರೈತಾಪಿ ವರ್ಗದವರೇ ಹೆಚ್ಚು ವಾಸಿಸುವ ಈ ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಉಳಿದ ಕ್ಷೇತ್ರಗಳಿಗೆ ಹೊಲಿಸಿದಲ್ಲಿ ಸ್ವಲ್ಪಹೆಚ್ಚು.. ಕಳೆದ 2 ಚುನಾವಣೆಯಲ್ಲೂ ಕೂಡಾ ಈ ಕ್ಷೇತ್ರದಲ್ಲಿ ಸತತ ವಾಗಿ ಆಯ್ಕೆಯಾಗಿರುವ ಎರಡನೇ ಶಾಸಕ ಅದು ಜೆಡಿಎಸ್ ನ ಸಾ,ರಾ.ಮಹೇಶ್. ಆದ್ರೆ ಈ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವ ಕೂಡಾ ಇತ್ತು. ಮಾಜಿ ಸಚಿವ ಹೆಚ್ ವಿಶ್ವನಾಥ್ ಈ ಕ್ಷೇತ್ರದಲ್ಲಿ 3 ಬಾರಿ ಗೆದ್ದಿದ್ದರು. 2008ರಲ್ಲಿ ವಿಶ್ವನಾಥ್ ಅವ್ರನ್ನು ಸೋಲಿಸೋ ಮೂಲಕ ಸಾರಾ ಮಹೇಶ್ ಇಲ್ಲಿ ಗೆಲುವನ್ನು ಕಂಡಿದ್ದರು. ಹಾಗಾದರೆ ಚುನಾವಣೆಯ ಲೆಕ್ಕಾಚಾರವೇನು ಎನ್ನುವುದರ ಕುರಿತಾಗಿ ಕೆ.ಆರ್ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

2013ರ ಚುನಾವಣೆಯಲ್ಲಿ ಜೆಡಿಎಸ್ ನ ಸಾರಾ ಮಹೇಶ್ 81457 ಮತಗಳನ್ನು ಪಡೆಯುವ ಮೂಲಕ ಗೆದ್ದು ಶಾಸಕರಾಗಿದ್ದರು. ಎದುರಾಳಿಯಾಗಿ ಕೊಟ್ಟ ಕಾಂಗ್ರೆಸ್ ನ ದೊಡ್ಡ ಸ್ವಾಮೇಗೌಡ 66, 405 ಮತಗಳನ್ನು ಪಡೆದರೆ ಕೆಜೆಪಿಯ ಬಸಂತ್ ಕೆ. ಎನ್ ಕೇವಲ 3827 ಮತಗಳನ್ನು ಪಡೆದಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಜೆಡಿಎಸ್ – ಕಾಂಗ್ರೆಸ್ ಟಫ್ ಫೈಟ್

ಜೆಡಿಎಸ್ – ಕಾಂಗ್ರೆಸ್ ಟಫ್ ಫೈಟ್

ಹೌದು ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಾಕಷ್ಟು ಬಾರಿ ಇಲ್ಲಿ ಜಿದ್ದಾಜಿದ್ದಿನ ಫೈಟ್ ಎದುರಾಗಿದೆ. ಇಲ್ಲಿ ಕಾಂಗ್ರೆಸ್ ಕೂಡಾ ಈ ಹಿಂದೆ ಗೆದ್ದಿದೆ, ಜೆಡಿಎಸ್ ಕೂಡಾ ಗೆದ್ದಿದೆ. ಬಿಜೆಪಿ ಈ ಬಾರಿ ಹೊಸ ಮುಖವನ್ನು ಕಣಕ್ಕಲಿಸೋದಕ್ಕೆ ಬಿಜೆಪಿ ಮುಂದಾಗಿದೆ. ಇನ್ನು ಕಾಂಗ್ರೆಸ್ ನಲ್ಲಿದ್ದ ಮಾಜಿ ಸಂಸದ ಹೆಚ್ ವಿಶ್ವನಾಥ್ ಜೆಡಿಎಸ್ ಗೆ ಬಂದಿದ್ದರಿಂದ ಜೆಡಿಎಸ್ ಬಲ ಜಾಸ್ತಿ ಆಗಿದೆ. ಹಾಗಾಗಿ ಜೆಡಿಎಸ್ ಬಿಜೆಪಿ ನಡುವೇ ನೇರ ಹಣಾಹಣಿ ಇಲ್ಲಿದೆ.

ಅಭ್ಯರ್ಥಿಗಳ್ಯಾರು ?

ಅಭ್ಯರ್ಥಿಗಳ್ಯಾರು ?

ಕಾಂಗ್ರೆಸ್ ಪ್ರಬಲವಾಗಿದ್ದ ಕ್ಷೇತ್ರದಲ್ಲಿ ಜೆಡಿಎಸ್ ಧ್ವಜ ಹಾರಿಸಿದ ಕೀರ್ತಿ ಸಾರಾ ಮಹೇಶ್ ಅವ್ರದ್ದು. 2008 ಹಾಗೂ 2013ರಲ್ಲಿ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಾ.ರಾ.ಮಹೇಶ್ ಈಗ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್​ ಬಾರಿಸಲು ಹೊರಟಿದ್ದಾರೆ. ಆದ್ರೆ ಶಾಸಕರಿಗೆ ಅಹಂಕಾರದ ಸ್ವಭಾವ ಜಾಸ್ತಿ ಇದೆ ಅನ್ನೋದು ಇಲ್ಲಿನ ಮತದಾರರು ಹೇಳೋ ಮಾತು. ಹಾಗಾಗಿನೇ ಸಾರಾ ಮಹೇಶ್ ಅವ್ರನ್ನು ಈ ಬಾರಿ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಹೊಸ ಪ್ಲಾನ್ ಹಾಕಿಕೊಂಡಿದೆ.

ಒಕ್ಕಲಿಗ ಪಾರಮ್ಯವಿರುವ ಈ ಕ್ಷೇತ್ರದಲ್ಲಿ ಮಾಜಿ ಸಂಸದ ಎಚ್. ವಿಶ್ವನಾಥ್​ ಕಾಂಗ್ರೆಸ್ ನಿಂದ ಕಣಕ್ಕಿಳಿದು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಸಾ ರಾ ಮಹೇಶ್​ ಬಂದ ಬಳಿಕ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಧುಮುಕಿದರು. ಈಗಲೂ ಕೆ.ಆರ್​.ನಗರ ಕ್ಷೇತ್ರದ ಮೇಲೆ ಹಾಲಿ ಶಾಸಕರಿಗಿಂತ ಮಾಜಿ ಸಂಸದ ವಿಶ್ವನಾಥ್ ಅವರಿಗೆ ಹಿಡಿತವಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿಶ್ವನಾಥ್​ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿದ್ದಾರೆ. ಇನ್ನು ಬಾರಿ ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿರುವುದರಿಂದ ತಮ್ಮ ಹಾದಿಗೆ ಅಡ್ಡಿ ಇಲ್ಲ ಅಂತಾ ಸಾರಾ ಮಹೇಶ್ ಬೀಗುತ್ತಿದ್ದಾರೆ. ಆದರೆ ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಸಾ.ರಾ. ಮಹೇಶ್​ ಕೆ.ಆರ್​. ನಗರದಿಂದ ಆರಿಸಿ ಬಂದಿದ್ದರೂ ಅವರ ಕಾರ್ಯಭಾರವೆಲ್ಲಾ ಮೈಸೂರಿನಲ್ಲೇ ನಡೆಯುತ್ತದೆ.

ಬಿಜೆಪಿ ಅಭ್ಯರ್ಥಿ ಯಾರು?

ಬಿಜೆಪಿ ಅಭ್ಯರ್ಥಿ ಯಾರು?

ಬಾರಿ ಕೆ.ಆರ್​. ನಗರ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಬಿಜೆಪಿ ವೆಂಕಟೇಶ್ ಮುಂದಾಗಿದ್ದಾರೆ. ಅಪಾರವಾದ ರಾಜಕೀಯ ಅನುಭವ ಇರುವುದರಿಂದ, ಎಲ್ಲಕ್ಕಿಂತಲೂ ಹೆಚ್ಚಾಗಿ ಸಾರಾ ಮಹೇಶ್ 2 ಬಾರಿ ಶಾಸಕರಾಗಿ ಆಯ್ಕೆಯಾಗೋದಕ್ಕೆ ಹೊಸಹಳ್ಳಿ ವೆಂಕಟೇಶ್ ಕೂಡಾ ಕಾರಣ. ಬದಲಾದ ರಾಜಕೀಯ ಸನ್ನಿವೇಶ ಹಾಗೂ ಸಾರಾ ಮಹೇಶ್ ವರ್ತನೆಯಿಂದ ಬೇಸತ್ತು ಬಿಜೆಪಿಗೆ ಸೇರಿರೋ ವೆಂಕಟೇಶ್ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್​ಗೆ ಭದ್ರಕೋಟೆಯಾಗಿದ್ದ ಕೆ.ಆರ್. ನಗರ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳಲು ಕಾಂಗ್ರೆಸ್​ ಕೂಡ ಪ್ರಯತ್ನ ಮಾಡಿದೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಕಣಕ್ಕಿಳಿದು ಸಾರಾ ಮಹೇಶ್​ಗೆ ಪ್ರಬಲ ಪೈಪೋಟಿ ನೀಡಿದ್ದ ದೊಡ್ಡಸ್ವಾಮಿಗೌಡ ಅವರ ಪುತ್ರ ಕುರುಬ ಸಮುದಾಯಕ್ಕೆ ಸೇರಿದ ಡಿ. ರವಿಶಂಕರ್​ ಅವರನ್ನು ಸಿಎಂ ಸಿದ್ದರಾಮಯ್ಯ ಕಣಕ್ಕಿಳಿಸೋದಕ್ಕೆ ಕಾಂಗ್ರೆಸ್ ಮುಂದಾಗಿದೆ. ಡಿ ರವಿಶಂಕರ್ ಅವರಿಗೆ ಟಿಕೆಟ್​ ಅಂತಾನೂ ಈಗಾಗಲೇ ಘೋಷಣೆ ಮಾಡಿದ್ದಾರೆ. ಕುರುಬ ಸಮುದಾಯದ ಸಹಜ ಬೆಂಬಲವಿರುವ ಕಾರಣ ಡಿ. ರವಿಶಂಕರ್ ಕೂಡ ಸಾರಾ ಮಹೇಶ್​ಗೆ ಪ್ರಬಲ ಪೈಪೋಟಿ ಕೊಡಲಿದ್ದಾರೆ.

ಕುರುಬ ಸಮಾಜದ ಬೆಂಬಲ ಸಿಕ್ಕುತ್ತಾ?

ಕುರುಬ ಸಮಾಜದ ಬೆಂಬಲ ಸಿಕ್ಕುತ್ತಾ?

ಈ ತನಕ ಕುರುಬ ಸಮುದಾಯದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸಾರಾ ಮಹೇಶ್​ಗೆ ಈ ಬಾರಿ ಕುರುಬ ಸಮುದಾಯದ ಬೆಂಬಲ ಕೂಡ ಸಿಗಲ್ಲ. ಹೀಗಾಗಿ ಮತ ವಿಭಜನೆ ಆಗೋದ್ರಿಂದ ಕಾಂಗ್ರೆಸ ಮತ್ತು ಜೆಡಿಎಸ್ ಫೈಟ್ ನಲ್ಲಿ ಬಿಜೆಪಿಯ ಹೊಸಹಳ್ಳಿ ವೆಂಕಟೇಶ್​ ಅವರಿಗೆ ಹಾದಿ ಸುಗಮವಾಗಲಿದೆ. ಒಕ್ಕಲಿಗರು ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ 22 ಸಾವಿರ ಲಿಂಗಾಯಿತ, 26 ಸಾವಿರ ದಲಿತ ಮತದಾರರೂ ಇದೆ. ಹಾಗಾಗಿ ಇಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಗೂ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಪ್ರಭಾವ ಇದ್ದೇ ಇದೆ ಎಂಬುದು ಜನರ ಮಾತು. ಒಟ್ಟಾರೆ ಪಕ್ಷಗಳ ಅಭಿಮತಕ್ಕಿಂತ ಜನರ ಒಲವು ಯಾರ ಮೇಲಿದೆ ಎಂಬುದೇ ಯಕ್ಷ ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+