ಶ್ರೀರಾಮುಲು ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾಂಗ್ರೆಸ್ ಮನವಿ
ಬೆಂಗಳೂರು, ಮೇ 11 : ಬುಧವಾರ ಬಿಡುಗಡೆಯಾದ ಬಿ.ಶ್ರೀರಾಮುಲು ಅವರ ಕುಟುಕು ಕಾರ್ಯಾಚರಣೆ ವಿಡಿಯೋ ಪ್ರಸಾರಕ್ಕೆ ನೀಡಿರುವ ತಡೆ ವಾಪಸ್ ಪಡೆಯುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಶುಕ್ರವಾರ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಟಿವಿ ಮಾಧ್ಯಮದಲ್ಲಿ ವಿಡಿಯೋ ಪ್ರಸಾರ ಮಾಡಲು ಇರುವ ತಡೆಯನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿ ಕಪಿಲ್ ಸಿಬಲ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಯೋಗಕ್ಕೆ ನಾಲ್ಕು ಬೇಡಿಕೆಗಳನ್ನು ಇಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಾಡಿರುವ ಮನವಿಗಳು
* ಶ್ರೀರಾಮುಲು ಅವರು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು
* ವಿಡಿಯೋದಲ್ಲಿರುವ ಎಲ್ಲಾ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕು
* ಟಿವಿಗಳಲ್ಲಿ ವಿಡಿಯೋ ಪ್ರಸಾರ ಮಾಡಲು ಇರುವ ತಡೆ ವಾಪಸ್ ಪಡೆಯಬೇಕು
ಏನಿದು ಪ್ರಕರಣ? : ಓಬಳಾಪುರಂ ಮೈನಿಂಗ್ ಕಂಪನಿಯ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಕೊಡಿಸಲು ಲಂಚದ ಆಮಿಷವೊಡ್ಡಲಾಗಿದೆ ಎಂಬುದು ಆರೋಪ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಿ.ಜೆ.ಬಾಲಕೃಷ್ಣನ್ ಅವರ ಅಳಿಯನ ಜೊತೆ ರೆಡ್ಡಿ ಆಪ್ತರು ಈ ಡೀಲ್ ಕುರಿತು ಮಾತುಕತೆ ನಡೆಸಿದ್ದರು. ಇದರ ವಿಡಿಯೋ ಗುರುವಾರ ಬಹಿರಂಗವಾಗಿದೆ. ಇದರಲ್ಲಿ ಶ್ರೀರಾಮುಲು ಅವರು ಇರುವುದು ಸ್ಪಷ್ಟವಾಗಿದೆ.
ಶ್ರೀರಾಮುಲು ಅವರು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೊಳಕಾಲ್ಮೂರು ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ವಿಡಿಯೋವನ್ನು ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಲು ಗುರುವಾರ ಚುನಾವಣಾ ಆಯೋಗ ತಡೆ ನೀಡಿದೆ.












Click it and Unblock the Notifications