ನಾಮಪತ್ರ ಅಂಗಿಕಾರ, ನಿಟ್ಟುಸಿರು ಬಿಟ್ಟ ಅಶೋಕ್ ಖೇಣಿ
ಬೀದರ್ ದಕ್ಷಿಣ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಖೇಣಿ ಅವರ ನಾಮಪತ್ರ ಅಡಕತ್ತರಿಯಲ್ಲಿತ್ತು ಆದರೆ ನಿನ್ನೆ ಅವರ ನಾಮಪತ್ರ ಅಂಗೀಕೃತ ಆಗುವ ಮೂಲಕ ಅಶೋಕ್ ಖೇಣಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಎಂಬುವರು ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕಾರ ಮಾಡದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನಲ್ಲಿ, ಅಶೋಕ್ ಖೇಣಿ ಅವರು ಅಮೆರಿಕದಲ್ಲಿ ಹೊಂದಿರುವ ನಿವಾಸದ ವಿಳಾಸ ಮತ್ತಿತರೆ ದಾಖಲೆಗಳನ್ನು ನೀಡಿ ಅಶೋಕ್ ಖೇಣಿ ಅವರು ಅಮೆರಿಕದ ನಿವಾಸಿ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಜೊತೆಗೆ ಅವರು ಸರ್ಕಾರದ ಜೊತೆಗೆ ಒಪ್ಪಂದದಲ್ಲಿದ್ದಾರೆ ಹಾಗಾಗಿ ಅವರ ನಾಮಪತ್ರವನ್ನು ತಿರಸ್ಕಾರ ಮಾಡಬೇಕು ಎಂದು ದೂರು ಸಲ್ಲಿಸಿದ್ದರು.

ಆದರೆ ಅಶೋಕ್ ಖೇಣಿ ಅವರ ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿಗಳು ಅಶೋಕ್ ಖೇಣಿ ಅವರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹರಿಸು ಚಿಹ್ನೆ ತೋರಿಸಿದ್ದಾರೆ.
ಮಕ್ಕಳ ಪಕ್ಷದಿಂದ ಕಳೆದ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಶೋಕ್ ಖೇಣಿ ಈ ಬಾರಿ ಹಲವು ಹಿರಿಯ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಕಾಂಗ್ರೆಸ್ ಪಕ್ಷ ಸೇರಿಕೊಂಡು ಟಿಕೆಟ್ ಸಹ ಗಿಟ್ಟಿಸಿಕೊಂಡಿದ್ದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್ ಖೇಣಿ ವಿರುದ್ಧ ಬಿಜೆಪಿಯಿಂದ ಶೈಲೇಂದ್ರ ಬಿಳಿದಲೆ ಸ್ಪರ್ಧಿಸಿದ್ದರೆ ಜೆಡಿಎಸ್‌ನಿಂದ ಬಂಡೆಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ.












Click it and Unblock the Notifications