ಚುನಾವಣಾ ಅಖಾಡದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ಎದುರಾಳಿ ಯಾರು? ಭವಿಷ್ಯ ಏನಾಗುತ್ತೆ?
ಕರ್ನಾಟಕ ವಿಧಾನಾ ಸಭಾ ಚುನಾವಣಾ ಫಲಿತಾಂಶ ಇಂದು(ಮೇ 13) ಹೊರಬೀಳಲಿದೆ. ಘಟಾನುಘಟಿಗಳೇ ಚುನಾವಣಾ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮ ತಮ್ಮ ಕ್ಷೇತ್ರಕ್ಕೆ ತೆರಳಿ ಭರ್ಜರಿ ಪ್ರಚಾರ ಮಾಡಿದ್ದರು. ಅದು ಈಗ ಫಲಿತಾಂಶ ಕೊಡುವ ಸಮಯ.
ಈ ಬಾರಿ ಚುನಾವಣಾ ಅಖಾಡದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಕೂಡ ಪೈಪೋಟಿಗೆ ಬಿದ್ದಿದ್ದಾರೆ. ಕೆಲವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದರೆ. ಮತ್ತೆ ಕೆಲವರು ಈಗಾಗಲೇ ಚುನಾವಣೆಯನ್ನು ಎದುರಿಸಿದ್ದಾರೆ.

2023ರ ಕರ್ನಾಟಕ ಚುನಾವಣಾ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ, ಟೆನ್ನಿಟ್ ಕೃಷ್ಣ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಿರ್ಮಾಪಕ ಮುನಿರತ್ನ, ನಟ-ನಿರ್ಮಾಪಕ ಬಿಸಿ ಪಾಟೀಲ್, ಕುಮಾರ್ ಬಂಗಾರಪ್ಪ, ನಿರ್ದೇಶಕ ಸ್ಮೈಲ್ ಶ್ರೀನು ಅಖಾಡಕ್ಕೆ ಇಳಿಸಿದ್ದಾರೆ. ಇವರಲ್ಲಿ ಗೆಲ್ಲೋರು ಯಾರು? ಗೆಲುವಿನ ಲೆಕ್ಕಾಚಾರ ಹೇಗಿದೆ? ಇವರ ಎದುರಾಳಿಗಳು ಯಾರು? ತಿಳಿಯಲು ಮುಂದೆ ಓದಿ.
ನಿಖಿಲ್ ಕುಮಾರಸ್ವಾಮಿ
ಸ್ಯಾಂಡಲ್‌ವುಡ್ ನಟ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಚುನಾವಣಾ ಅಖಾಡದಲ್ಲಿದ್ದಾರೆ. ಕಳೆದ ಬಾರಿ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸ್ವತಂತ್ರ ಅಭ್ಯರ್ಥಿ ಸುಮಲತಾ ವಿರುದ್ಧ ಸೋತಿದ್ದ ನಿಖಿಲ್ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರೋ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್ ಹಾಗೂ ಬಿಜೆಪಿಯಿಂದ ಗೌತಮ್ ಗೌಡ ಎದುರಾಳಿ. ಸದ್ಯ ರಾಮನಗರದಲ್ಲಿ ಜೆಡಿಎಸ್ ಅಲೆ ಇರುವುದರಿಂದ ನಿಖಿಲ್‌ಗೆ ಈ ಬಾರಿ ಗೆಲುವು ಸಿಗುವ ಲೆಕ್ಕಾಚಾರ ಹಾಕಲಾಗಿದೆ.
ಉಮಾಪತಿ ಶ್ರೀನಿವಾಸ್ ಗೌಡ
ಸ್ಯಾಂಡಲ್‌ವುಡ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಖಾಡಕ್ಕೆ ಇಳಿದ್ದಿ ಉಮಾಪತಿ ಬಿಜೆಪಿ ಪಕ್ಷದ ಸತೀಶ್ ರೆಡ್ಡಿ ವಿರುದ್ಧ ಪೈಪೋಟಿ ಕೊಟ್ಟಿದ್ದಾರೆ.
ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಗೌಡ ಸ್ಯಾಂಡಲ್‌ವುಡ್‌ನ ಶ್ರೀಮಂತ ನಿರ್ಮಾಪಕರಲ್ಲಿ ಒಬ್ಬರು. ಈ ಬಾರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡಿದ್ದಾರೆ. ಹೀಗಾಗಿ ಇವರ ಮೇಲೂ ಸ್ಯಾಂಡಲ್‌ವುಡ್ ನಿರೀಕ್ಷೆಯಿದೆ.

ಟೆನ್ನಿಸ್ ಕೃಷ್ಣ
ಸ್ಯಾಂಡಲ್‌ವುಡ್‌ನ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಆಪ್ ಪಕ್ಷದಿಂದ ಟೆನ್ನಿಸ್ ಕೃಷ್ಣ ಸ್ಪರ್ಧಿಸಿದ್ದಾರೆ. ಇವರಿಗೆ ಎದುರಾಳಿಯಾಗಿ ಜೆಡಿಎಸ್‌ನಿಂದ ಎಂ.ಟಿ. ಕೃಷ್ಣಪ್ಪ, ಕಾಂಗ್ರೆಸ್‌ನಿಂದ ಕಾಂತರಾಜ್ ಬಿ.ಎಂ ಹಾಗೂ ಬಿಜೆಪಿಯಿಂದ ಮಸಾಲ ಜಯರಾಮ್ ಇದ್ದಾರೆ. ಇವರನ್ನು ಎದುರಿಸಿ ಗೆಲ್ಲುತ್ತಾರಾ? ಅನ್ನೋದೇ ಕುತೂಹಲ.
ಮುನಿರತ್ನ, ಕುಮಾರ್ ಬಂಗಾರಪ್ಪ
ಬಿಜೆಪಿಯಿಂದ ನಿರ್ಮಾಪಕ ಮುನಿರತ್ನ ರಾಜರಾಜೇಶ್ವರಿನಗರದಿಂದ ಸ್ಪರ್ಧೆ ಮಾಡಿದ್ದಾರೆ. ಇವರಿಗೆ ಚುನಾವಣೆ ಹೊಸದೇನು ಅಲ್ಲ. ಹಾಗೇ ಸೊರಬ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ ಅಖಾಡಕ್ಕೆ ಇಳಿಸಿದ್ದಾರೆ. ಈ ಬಾರಿ ಕೂಡ ಸಹೋದರ ಮಧು ಬಂಗಾರಪ್ಪ ಎದುರಾಳಿ. ಹೀಗಾಗಿ ಸೊರಬ ಕ್ಷೇತ್ರ ಕೂಡ ಜಿದ್ದಾಜಿದ್ದಿನಿಂದ ಕೂಡಿದೆ.












Click it and Unblock the Notifications