ಸಮೀಕ್ಷೆಗಳಲ್ಲಿ ಬಿಜೆಪಿಗೆ ಅಘಾತ! ಆದರೂ ಮುಖ್ಯಮಂತ್ರಿಯಾಗೋ ಆಸೆ ಬಿಚ್ಚಿಟ್ಟ ಬಿಜೆಪಿ ನಾಯಕ
ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಬುಧವಾರ ಸಂಜೆ ಅಂತ್ಯಗೊಂಡಿದೆ. ಈ ನಡುವೆ ಪ್ರಕಟಗೊಂಡ ಎಕ್ಸಿಟ್ ಪೋಲ್ ನಿಂದಾಗಿ ಕಾಂಗ್ರೆಸ್ ಸರ್ಕಾರ ರಚನೆಸುವ ಪ್ಲಾನ್ ನಡೆಸಿದ್ದು, ಈ ಬಾರೀ ಸಮೀಕ್ಷೆಯಲ್ಲಿ ಬಿಜೆಪಿಗೆ ಬಾರೀ ಅಘಾತವಾಗಿದೆ.
ಈಗಾಗಲೇ ಬಹುತೇಕ ಎಕ್ಸಿಟ್ ಪೋಲ್‌ಗಳು ಈ ಬಾರಿಯೂ ಅತಂತ್ರ ಫಲಿತಾಂಶ ಬರುತ್ತದೆ ಎಂದು ಭವಿಷ್ಯ ನುಡಿದಿವೆ. ಆದ್ದರಿಂದ ರಾಜ್ಯದ ಎರಡು ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಮುಂದಿನ ಸರ್ಕಾರ ರಚನೆಯ ಕಸರತ್ತು ಶುರುಮಾಡಿದ್ದು, ಜೆಡಿಎಸ್ ನಾಯಕರಿಗೆ ತಲೆಬಿಸಿ ಆಗಿದೆ.

ಇನ್ನೂ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13ರ (ಶನಿವಾರ) ಪ್ರಕಟವಾಗಲಿದ್ದು, ಇದರ ನಡುವೆಯೇ ಹಲವು ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದಾರೆ. ಇನ್ನೂ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೂ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಚರ್ಚೆಯಾಗುತ್ತಿದೆ.
ಹೌದು ಸಚಿವ ಆರ್ ಅಶೋಕ್ ಮುಖ್ಯಮಂತ್ರಿಯಾಗುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ನಾನು ಈ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನ ನಂಬುವುದಿಲ್ಲ, ನಮ್ಮ ನಮ್ಮ ಸಮೀಕ್ಷೆ ಪ್ರಕಾರ ಬಿಜೆಪಿಗೆ ಸ್ಪಷ್ಟ ಬಹುಮತ ಬರೋದು ನಿಶ್ಚಿತ . ಅಂತಿಮವಾಗಿ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿದೆ, ರಾಜ್ಯದ ಜನತೆ ಅಂತಿಮವಾಗಿ ತಿರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಈ ಎಕ್ಸಿಟ್ ಪೋಲ್ ಸುಳ್ಳು. ಕಾಂಗ್ರೆಸ್ ನಾಯಕರು ಏನು ಬೇಕಾದರೂ ಮಾಡಲಿ, ಅಂತಿಮವಾಗಿ ಸರ್ಕಾರ ರಚನೆ ಮಾಡುವುದು ನಾವೇ, ಮುಖ್ಯಮಂತ್ರಿ ಆಗುವ ಅವಕಾಶ ನನಗೂ ಬರಬಹುದು. ಎಲ್ಲರಿಗೂ ಒಂದೊಂದು ಅವಕಾಶ ಸಿಗುತ್ತದೆ. ಯಾರು ನಿರೀಕ್ಷೆ ಮಾಡದಂತೆ ಕಳೆದ ಬಾರಿ ಬಸವರಾಜ ಬೊಮ್ಮಾಯಿ ಆಗಿಲ್ವಾ? ಹಾಗೇ ನನಗೂ ಒಂದು ಅವಕಾಶ ಸಿಗಬಹುದು. ಆದರೆ ಅಂತಿಮವಾಗಿ ಈ ಬಗ್ಗೆ ಸಂಸದೀಯ ಮಂಡಲಿ ತೀರ್ಮಾನ ಮಾಡುತ್ತದೆ ಎಂದು ಸಚಿವ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗೆ ದೇಶದಲ್ಲಿ ನಲೆ ಇಲ್ಲ. ಕಾಂಗ್ರೆಸ್ ವಯಸ್ಸಾಗಿರುವ ಪಕ್ಷ, ಇಡೀ ದೇಶದಲ್ಲಿ ಸತ್ತು ಹೋಗಿದೆ. ಕರ್ನಾಟಕದಲ್ಲೂ ಸ್ವಲ್ಪ ಉಸಿರಾಡಿದರೆ, ಆ ಉಸಿರು ಇನ್ನೂ ಎಷ್ಟಿದೆ ಎಂದು ಫಲಿತಾಂಶದಿಂದ ಗೊತ್ತಾಗುತ್ತದೆ. ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸುವ ಜಾಯ ಮಾನ ನಮ್ಮದಲ್ಲ. ಮೊದಲು ಕೂಸು ಹುಟ್ಟಲಿ, ಆಮೇಲೆ ನಾವು ಕುಲಾವಿ ಹೊಲಿಸ್ರೀವಿ. ಆದರೆ ಕಾಂಗ್ರೆಸ್ ನಾಯಕರು ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸೋಕೆ ಹೊರಟಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಪೈಪೋಟಿ ನಡೆಸಿದ್ದಾರೆ. ದೊಂಬರಾಟ ಬಿಡಿ, ಚುನಾವಣೆ ಫಲಿತಾಂಶದ ವರೆಗೂ ಕಾಯಿರಿ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನೂ ಈ ಹಿಂದೆ ಗೋವಾದಲ್ಲಿ ಸರ್ಕಾರ ಮಾಡುತ್ತೇವೆ ಅಂತಾ ಫ್ಲೈಟ್ ಹತ್ತಿಕೊಂಡು ಹೋದ ಡಿಕೆ ಶಿವಕುಮಾರ್ ಕಥೆ ಏನಾಗಿದೆ ಅಂತಾ ನೋಡಿಲ್ವಾ? ಎಂದು ಪ್ರಶ್ನಿಸಿದೆ ಅವರು, ಗೋವಾದಲ್ಲೂ ಕೊನೆಗೆ ಏನಾಯಿತು. ಇಲ್ಲೂ ಅವರಿಗೆ ಅದೇ ಪರಿಸ್ಥಿತಿ ಆಗುತ್ತೆ ನೋಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications